ಶೋಭಿತಾ ಅಂದ್ರೆ ನಾಗಾರ್ಜುನ ಅವರಿಗೆ ತುಂಬಾ ಇಷ್ಟ ಅಂತೆ. ಮನಸ್ಪೂರ್ತಿಯಾಗಿ ಶೋಭಿತಾಶೋಭಿತಾ ಧೂಳಿಪಾಲ ಅವರನ್ನು ಸೊಸೆಯಾಗಿ ಸ್ವೀಕರಿಸಿದ್ದಾರೆ ಅಂತ ಅವರ ಮಾತುಗಳಿಂದ ತಿಳಿದುಬರುತ್ತದೆ. ಶೋಭಿತಾ ತೆಲುಗು ಹುಡುಗಿ. ಆಂಧ್ರಪ್ರದೇಶದ ತೆನಾಲಿಯಲ್ಲಿ ಹುಟ್ಟಿದ ಶೋಭಿತಾ, ವಿಜಯವಾಡದಲ್ಲಿ ಓದಿದರು. ಮುಂಬೈಗೆ ಹೋಗಿ ಮಾಡೆಲಿಂಗ್ ಮಾಡಿದರು. ಹಲವು ಜಾಹೀರಾತುಗಳಲ್ಲಿ ನಟಿಸಿದರು. ನಂತರ ಬೆಳ್ಳಿತೆರೆಗೆ ಪರಿಚಯವಾದರು.