ದೀಪಿಕಾ ಪಡುಕೋಣೆ ಮಗಳ ಫೋಟೋ ವೈರಲ್; ಅಮ್ಮನಂತೆ ಗುಳಿ ಬರುತ್ತಾ ಅಂತ ಕೇಳ್ತಿದ್ದಾರೆ ಅಭಿಮಾನಿಗಳು

First Published | Dec 26, 2024, 3:41 PM IST

ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಮಗಳ ಫೋಟೋ ವೈರಲ್. ಒಂದೊಂದು ಫೋಟೋದಲ್ಲಿ ಒಂದೊಂದು ಮಗು...ಶಾಕ್ ಆದ ನೆಟ್ಟಿಗರು.... 
 

ಬಾಲಿವುಡ್‌ನಲ್ಲಿ ಧೂಳ್ ಎಬ್ಬಿಸುತ್ತಿರುವ ಬೆಂಗಳೂರು ಚೆಲುವೆ ದೀಪಿಕಾ ಪಡುಕೋಣೆ ಪುತ್ರಿ ದುವಾ ಮೊದಲ ಫೋಟೋ ಲೀಕ್ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಸೆಪ್ಟೆಂಬರ್ 8,2024ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ ಎಲ್ಲಿಯೂ ಫೋಟೋ ರಿವಿಲ್ ಮಾಡಿರಲಿಲ್ಲ ಹಾಗೂ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರಲಿಲ್ಲ. 

Tap to resize

ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಮಗಳು ಎಂದು ಫೋಟೋಗಳು ವೈರಲ್ ಆಗುತ್ತಿದೆ. ಸುಮಾರು ನಾಲ್ಕೈದು ಫೋಟೋಗಳಿದ್ದು ಅದರಲ್ಲಿ ಮಗು ಡಿಫರೆಂಟ್ ಡಿಫರೆಂಟ್ ಆಗಿ ಕಾಣಿಸುತ್ತಿದೆ. 

ಫ್ಯಾನ್‌ ಪೇಜ್‌ನಲ್ಲಿ ಶೇರ್ ಆಗಿರುವ ಈ ಫೋಟೋಗಳನ್ನು AI ಟೆಕ್ನಾಲಜಿ ಬಳಸಿ ಮಾಡಲಾಗಿದೆ ಎನ್ನಲಾಗಿದೆ. ಏಕೆಂದರೆ ದೀಪಿಕಾ ಮಗಳಿಕೆ ಕೇವಲ ಮೂರು ತಿಂಗಳು ಅಷ್ಟೇ.

ವೈರಲ್ ಆಗುತ್ತಿರುವ ಫೋಟೋಗಳನ್ನು ದೀಪಿಕಾ ಮಗಳು ದೊಡ್ಡವಳಂತೆ ಕಾಣಿಸುತ್ತಿದ್ದಾಳೆ. ಅಲ್ಲದೆ ದೀಪಿಕಾ ಕೂಡ ರಿಯಲ್ ಫೋಟೋ ಅಲ್ಲ ಎಂದು ನಕ್ಕರೂ ಆಶ್ಚರ್ಯವಿಲ್ಲ. 

ಇನ್ನು ನವೆಂಬರ್ 1ರಂದು ಮಗಳಿಗೆ ದುವಾ ಎಂದು ನಾಮಕರಣ ಮಾಡಿದ್ದಾರೆ. ದುವಾ ಅಂದರೆ ಪ್ರಾರ್ಥನೆ ಎಂದು. ಆಕೆ ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ ಅಂದಿದ್ದಾರೆ ಡಿಪಿ. 

Latest Videos

click me!