ಸೂಪರ್ ಸ್ಟಾರ್ ಕೃಷ್ಣ ಪ್ಲಾಫ್ ಸಿನಿಮಾ ಬಗ್ಗೆ ಅಕ್ಕಿನೇನಿ ನಾಗಾರ್ಜುನ್ ವ್ಯಂಗ್ಯ!

ಅಕ್ಕಿನೇನಿ ನಾಗಾರ್ಜುನ್ ಸದ್ಯ ವಿಭಿನ್ನ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಿನಿಮಾದಲ್ಲಿ ಒಬ್ಬಂಟಿಯಾಗಿ ನಾಯಕನಾಗಿ ನಟಿಸೋದಕ್ಕಿಂತ, ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಆದರೆ, ಇದೀಗ ಅವರು ಸೂಪರ್ ಸ್ಟಾರ್ ಕೃಷ್ಣ ಅವರ ಪ್ಲಾಫ್ ಸಿನಿಮಾ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಈವರೆಗೆ ಒಬ್ಬಂಟಿಯಾಗಿ ತಾನೇ ದೊಡ್ಡ ಹೀರೋ ಆಗಿ ನಟಿಸುತ್ತಿದ್ದ ಅಕ್ಕಿನೇನಿ ನಾಗಾರ್ಜುನ ಇದೀಗ ಯುವಕರ ಬಿಗ್ ಬಜೆಟ್ ಸಿನಿಮಾಗೆ ಫೈಟ್ ಕೊಡಲಾಗದೇ ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಲು ಮುಂದಾಗಿದ್ದಾರೆ. ರಜನೀಕಾಂತ್ ಕೂಲಿ ಚಿತ್ರದಲ್ಲಿ, ಧನುಷ್ ಕುಬೇರ ಚಿತ್ರದಲ್ಲಿ ನಾಗಾರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸ್ತಿದ್ದಾರೆ.

ಈ ಹಿಂದೆ, ನಾಗಾರ್ಜುನ್ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸೋದು, ಹಳೆ ಕ್ಲಾಸಿಕ್ ಚಿತ್ರಗಳನ್ನ ರೀಮೇಕ್ ಮಾಡೋ ಬಗ್ಗೆ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದರು. ಈ ಹಿಂದೆ ನಾಗ ಚೈತನ್ಯ, ಜೂನಿಯರ್ ಎನ್ಟಿಆರ್ ಗುಂಡಮ್ಮ ಕಥಾ ತರ ಆಲ್ ಟೈಮ್ ಕ್ಲಾಸಿಕ್ ಮೂವಿ ರೀಮೇಕ್ನಲ್ಲಿ ನಟಿಸೋಕೆ ಪ್ಲಾನ್ ಮಾಡಿದ್ದರಂತೆ. ಆದರೆ ಆ ಪ್ರಯತ್ನಗಳು ಈಡೇರಲಿಲ್ಲ. 


ಆ ಟೈಮಲ್ಲಿ ನಾಗಾರ್ಜುನ್ ಸೂಪರ್ ಸ್ಟಾರ್ ಕೃಷ್ಣ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ನಾಗಚೈತನ್ಯ, ತಾರಕ್ ಗುಂಡಮ್ಮ ಕಥಾ ರೀಮೇಕ್‌ನಲ್ಲಿ ನಟಿಸೋಕೆ ಇಂಟರೆಸ್ಟ್ ತೋರಿಸುತ್ತಿದ್ದಾರೆ. ಅವರಿಬ್ಬರೂ ಸೇರಿ ನಟಿಸೋಕೆ ಇಷ್ಟಪಡ್ತಿರೋದು ಒಳ್ಳೆ ವಿಷಯ. ಆದರೆ ಗುಂಡಮ್ಮ ಕಥೆ ಯಾವ ತರ ಸಿನಿಮಾ ಅಂತ ಅವರಿಗೆ ಗೊತ್ತಿಲ್ಲ. ಅದಕ್ಕೆ ಆ ಸಿನಿಮಾನ ರೀಮೇಕ್ ಮಾಡಬೇಕು ಎಂದರೆ ತುಂಬಾ ಹುಷಾರಾಗಿ ಮಾಡಬೇಕು ಎಂದಿದ್ದರು. 

ನನ್ನ ಪ್ರಕಾರ ಓಲ್ಡ್ ಕ್ಲಾಸಿಕ್‌ ಟಚ್ ಮಾಡದಿದ್ದರೆ ಬೆಟರ್ ಎಂದಿದ್ದರು. ಸೂಪರ್ ಸ್ಟಾರ್ ಕೃಷ್ಣ ಅವರ ದೇವದಾಸ್ ರೀಮೇಕ್ ಏನಾಯ್ತು ನೀವೇ ನೋಡಿದ್ರಲ್ಲ ಎಂದು ನಾಗಾರ್ಜುನ್ ಪರೋಕ್ಷವಾಗಿ ಟೀಕಿಸಿದ್ದರು. 1953ರಲ್ಲಿ ಎಎನ್ಆರ್, ಸಾವಿತ್ರಿ ಸೇರಿ ನಟಿಸಿದ ದೇವದಾಸ್ ಇಂಡಿಯನ್ ಸಿನಿಮಾದಲ್ಲಿ ಗ್ರೇಟ್ ಸಿನಿಮಾಗಳಲ್ಲಿ ಒಂದು. ಅಲ್ಲೂರಿ ಸೀತಾರಾಮರಾಜು ತರ ಸನ್ಸೇಷನಲ್ ಹಿಟ್ ಆದ್ಮೇಲೆ ಸೂಪರ್ ಸ್ಟಾರ್ ಕೃಷ್ಣ ದೇವದಾಸ್ ಸಿನಿಮಾನ ರೀಮೇಕ್ ಮಾಡಿದ್ದರು. ಆದರೆ, ಆ ಸಿನಿಮಾ ತೆಲುಗುನಲ್ಲಿ ದೊಡ್ಡ ಪ್ಲಾಫ್ ಆಯಿತು. 

ಇದೇ ವಿಷಯವನ್ನು ನಾಗಾರ್ಜುನ್ ಹೇಳುತ್ತಾ ಕ್ಲಾಸಿಕ್ ಸಿನಿಮಾಗಳನ್ನ ಟಚ್ ಮಾಡದಿದ್ದರೆ ಒಳ್ಳೆಯದು ಎಂದಿದ್ದರು. ನಾಗಾರ್ಜುನ್, ಕೃಷ್ಣ ಸೇರಿ ರಾಮುಡೊಚ್ಚಾಡು, ವಾರಸುಡು ತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೂ, ಇಂತಹ ಕಾಮೆಂಟ್‌ ಮಾಡಬಾರದಿತ್ತು ಎಂದು ಅಭಿಮಾನಿಗಳೂ ಹೇಳಿದ್ದಾರೆ.

Latest Videos

click me!