ನಟಿ ಸಮಂತಾಗೆ ಬಂದಿತ್ತು ಬೆದರಿಕೆ! ಮದುವೆಯ ಬೆನ್ನಲ್ಲೇ ಶಾಕಿಂಗ್​ ವಿಷಯವೂ ಮತ್ತೆ ಮುನ್ನೆಲೆಗೆ

Published : Dec 01, 2025, 11:30 PM IST

ನಟಿ ಸಮಂತಾ ರುತ್ ಪ್ರಭು ಅವರು ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಬೆನ್ನಲ್ಲೇ, ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ 'ಊ ಅಂಟವಾ' ಐಟಂ ಹಾಡನ್ನು ಮಾಡದಂತೆ ಕುಟುಂಬ ಮತ್ತು ಸ್ನೇಹಿತರಿಂದಲೇ ತಮಗೆ ಬೆದರಿಕೆ ಬಂದಿತ್ತು ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದರು.

PREV
17
ಮದುವೆಯ ಸರ್​ಪ್ರೈಸ್​

ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು 'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಇಂದು ಅರ್ಥಾತ್​ ಡಿ.1ರಂದು ಮದುವೆ ಆಗಿ ಸರ್​ಪ್ರೈಸ್​ ಕೊಟ್ಟಿದ್ದಾರೆ. ಸದ್ಗುರು ಅವರ ಈಶಾ ಯೋಗ ಕೇಂದ್ರದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಸಮಂತಾ-ರಾಜ್‌ ನಿಡಿಮೋರು ಮದುವೆ ಸರಳವಾಗಿ ನೆರವೇರಿದೆ.

27
ಮತ್ತೊಮ್ಮೆ ಮುನ್ನೆಲೆಗೆ

ಇದರ ಬೆನ್ನಲ್ಲೇ ನಟಿಗೆ ಬಂದಿದ್ದ ಬೆದರಿಕೆ ಕರೆಯ ವಿಷಯವೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದು ನಟ ನಾಗ ಚೈತನ್ಯ ಜೊತೆಗಿನ ಬ್ರೇಕಪ್​ ಬಳಿಕ ಆಗಿರುವ ಘಟನೆ. ಅಷ್ಟಕ್ಕೂ ಸಮಂತಾ ಎಂದಾಕ್ಷಣ ಸಿನಿ ಪ್ರಿಯರ ನೆನಪಿಗೆ ಬರುವುದು ಊ ಅಂಟವಾ ಮಾವಾ ಹಾಡು. ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೈಸ್' ಚಿತ್ರದಲ್ಲಿ ಈ ಐಟಂ ಸಾಂಗ್​ ಮಾಡಿದ್ದರು ಸಮಂತಾ. ಈಗಲೂ ಈ ಹಾಡಿಗೆ ಸ್ಟೆಪ್​ ಹಾಕುವವರು ಇದ್ದಾರೆ.

37
ನಾಗ ಚೈತನ್ಯ ಜೊತೆ ಡಿವೋರ್ಸ್​

ಆದರೆ ಈ ಐಟಂ ಸಾಂಗ್​ ಮಾಡುವುದಕ್ಕೆ ತಡೆಯೊಡ್ಡಿಯೇ ಬೆದರಿಕೆ ಬಂದಿತ್ತಂತೆ! ಅಷ್ಟಕ್ಕೂ ಸಮಂತಾ ಅವರು ಆ ಸಂದರ್ಭದಲ್ಲಿ ನಾಗ ಚೈತನ್ಯ ಜೊತೆ ಡಿವೋರ್ಸ್​ ಆಗಿದ್ದರು. ಬಹು ವರ್ಷಗಳು ಪ್ರೀತಿಸಿ ಮದುವೆಯಾದ ಜೋಡಿ 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

47
ಬೆದರಿಕೆ ಬಂದಾಗ...

ಡಿವೋರ್ಸ್​ ಆದ ಕೆಲವೇ ದಿನಗಳಲ್ಲಿ ಐಟಂ ಸಾಂಗ್​ಗೆ ಸಮಂತಾಗೆ ಕರೆ ಬಂದಿತ್ತು. ಆದರೆ ಈಗಷ್ಟೇ ಡಿವೋರ್ಸ್​ ಆಗಿದೆ, ಐಟಂ ಸಾಂಗ್​ ಮಾಡಬೇಕು, ಮನೆಯಲ್ಲಿ ಸುಮ್ಮನೇ ಕೂತಿರು ಅಂತೆಲ್ಲಾ ಹೇಳಲಾಗಿತ್ತಂತೆ ನಟಿಗೆ. ಈ ಕುರಿತು ಬೆದರಿಕೆಯನ್ನೂ ಹಾಕಲಾಗಿತ್ತು ಎನ್ನುವುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಿದವರು ಖುದ್ದು ಸಮಂತಾ ತವರು ಮನೆಯವರು ಮಾತ್ರವಲ್ಲದೇ ಬಹುತೇಕ ಎಲ್ಲಾ ಫ್ರೆಂಡ್ಸ್​ಗಳು!

57
ಎಲ್ಲರೂ ಬೈದರು

'ಹೂ ಅಂಟವಾ..' ಐಟಂ ಸಾಂಗ್​ಗೆ ನನಗೆ ಆಫರ್ ಬಂದಿತ್ತು. ಆದರೆ ಆಗಷ್ಟೇ ನಾಗ ಚೈತನ್ಯ ಜೊತೆ ಡಿವೋರ್ಸ್​ ಆಗಿತ್ತು. ನನಗೆ ಆಫರ್​ ಬಂದದ್ದು ಐಟಂ ಸಾಂಗ್​ ಎಂದು ಗೊತ್ತಾಗುತ್ತಿದ್ದಮತೆಯೇ ನನ್ನ ಕುಟುಂಬದವರು, ನನ್ನ ಫ್ರೆಂಡ್ಸ್ ಎಲ್ಲರೂ ಕಾಲ್​ ಮಾಡಿ ಒಪ್ಪಿಕೊಳ್ಳಲೇಬೇಡ ಎಂದರು. ಮನೆಯವರು ಕೂಡ ಸುಮ್ಮನೇ ಬಾಯಿಮುಚ್ಚಿಕೊಂಡು ಮನೆಯಲ್ಲಿ ಇರು, ಇದಕ್ಕೆಲ್ಲಾ ಒಪ್ಪಿಕೊಳ್ಳಬೇಡ ಎಂದಿದ್ದರು. ಇದರ ಬದಲು ಬೇಕಿದ್ದರೆ ಯಾವುದಾದ್ರೂ ಸಿನಿಮಾ ಒಪ್ಪಿಕೋ ಎಂದಿದ್ದರು. ಆದರೆ ಆ ಮಾತುಗಳನ್ನು ನಾನು ಕೇಳಲಿಲ್ಲ ಎಂದಿದ್ದಾರೆ ನಟಿ ಸಮಂತಾ.

67
ನಾನೇನು ತಪ್ಪು ಮಾಡಿದ್ನಾ?

ನಾನ್ಯಾಕೆ ಅವರ ಮಾತನ್ನು ಕೇಳಬೇಕಿತ್ತು ಹೇಳಿ? ಡಿವೋರ್ಸ್​ ಕೊಟ್ಟು ನಾನೇನು ತಪ್ಪು ಮಾಡಿದ್ನಾ? ನಟಿಯಾದರೂ ವೈವಾಹಿಕ ಜೀವನಕ್ಕೆ 100 ಪರ್ಸೆಂಟ್​ ಮುಡುಪಾಗಿಟ್ಟಿದ್ದೆ. ಆದರೆ ಅದು ವರ್ಕ್​ಔಟ್​ ಆಗಲಿಲ್ಲ. ಬೇರೆಯಾದ್ವೆ. ನಾನೇನೂ ತಪ್ಪು ಮಾಡಿಲ್ಲವಲ್ಲ, ಮತ್ಯಾಕೆ ಮನೆಯಲ್ಲಿ ಬಚ್ಚಿಟ್ಟುಕೊಳ್ಳಬೇಕು ಎನ್ನಿಸಿತು. ಹೀಗೆ ಮಾಡಿದ್ದೇ ಆದಲ್ಲಿ ನಾನು ಮಾಡದ ತಪ್ಪಿಗಾಗಿ ನನ್ನನ್ನು ತಪ್ಪಿಸ್ಥಳು ಎಂದು ಎನಿಸಿಕೊಳ್ಳಬೇಕಿತ್ತು. ಅದಕ್ಕಾಗಿ ನಾನು ಈ ಐಟಂ ಸಾಂಗ್​ಗೆ ಒಪ್ಪಿಕೊಂಡೆ ಎಂದಿದ್ದಾರೆ ನಟಿ. ಮೂರು ನಿಮಿಷಗಳ ಈ ಸಾಂಗ್​ಗೆ ನಟಿ ಐದು ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

77
ಮತ್ತೊಮ್ಮೆ ಮದುವೆ

ಕಳೆದ ವರ್ಷ ನಾಗ ಚೈತನ್ಯ ಅವರು ನಟಿ ಶೋಭಿತಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡರೆ. ಸಮಂತಾ ಮಯೋಸೈಟಿಸ್‌ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅಭಿಮಾನಿಗಳಲ್ಲಿ ಖುಷಿ ತಂದಿದ್ದಾರೆ.

Read more Photos on
click me!

Recommended Stories