ಒಂದು ಸಂಬಂಧವನ್ನು ಮುರಿಯಬೇಕಾದರೆ ಅದರ ಬಗ್ಗೆ ನಾನು ಸಾವಿರ ಬಾರಿ ಯೋಚಿಸುತ್ತೇನೆ. ಏಕೆಂದರೆ ಅದರ ಪರಿಣಾಮಗಳು ನನಗೆ ತಿಳಿದಿದೆ. ನಾನು ಒಂದು ಡಿವೋರ್ಸ್ ಆಗಿರುವ ಕುಟುಂಬದಿಂದ ಬಂದವನು. ಆ ಅನುಭವ, ಆ ಪರಿಣಾಮಗಳು ಹೇಗಿರುತ್ತವೆ ಎಂದು ನನಗೆ ಗೊತ್ತು. ಆ ವಿಷಯದಲ್ಲಿ ನಾನು ಯಾವಾಗಲೂ ಬೇಸರ ಪಡುತ್ತಲೇ ಇರುತ್ತೇನೆ. ಇದು ನಾವಿಬ್ಬರೂ (ಸಮಂತಾ ಮತ್ತು ನಾನು) ಒಟ್ಟಿಗೆ ತೆಗೆದುಕೊಂಡ ನಿರ್ಧಾರ.
ದುರದೃಷ್ಟವಶಾತ್ ಅದು ಒಂದು ಚರ್ಚೆಯ ವಿಷಯವಾಗಿ, ಒಂದು ಹೆಡ್‌ಲೈನ್ ಆಗಿ, ಒಂದು ಗಾಸಿಪ್ ಆಗಿ, ಈಗ ಒಂದು ಮನರಂಜನೆಯಾಗಿಬಿಟ್ಟಿದೆ. ಅದರ ಬಗ್ಗೆ ನಾನು ಮಾತನಾಡಿದರೆ, ಆ ಸಂದರ್ಶನದಿಂದಲೂ ಇನ್ನೂ ಕೆಲವು ಲೇಖನಗಳು ಹುಟ್ಟುತ್ತವೆ. ಇದಕ್ಕೆ ಪೂರ್ಣವಿರಾಮ ಎಲ್ಲಿದೆ? ಬರೆಯುವವರೇ ಪೂರ್ಣವಿರಾಮ ಇಡಬೇಕು ಎಂದು ನಾಗ ಚೈತನ್ಯ ತಿಳಿಸಿದ್ದಾರೆ. ಪ್ರಸ್ತುತ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.