NETFLIX ನಲ್ಲಿ ಈ ವಾರ ನೀವು ನೋಡಲೇಬೇಕಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು

Published : May 30, 2026, 07:14 PM IST

Suspense Thriller: ನೀವು ಕೂಡ ಥ್ರಿಲ್ಲರ್ ಸಿನಿಮಾಗಳ ಅಭಿಮಾನಿಯಾಗಿದ್ದರೆ, ಈ ಟಾಪ್ 7 ನೆಟ್‌ಫ್ಲಿಕ್ಸ್ ಸಿನಿಮಾಗಳನ್ನು ನೋಡಬಹುದು. ಅವುಗಳಲ್ಲಿ, ನಿಮಗೆ ಥ್ರಿಲ್ ಮತ್ತು ಸಸ್ಪೆನ್ಸ್ ಎರಡರ ಡಬಲ್ ಡೋಸ್ ಸಿಗುತ್ತದೆ. ಹಾಗಾದರೆ, ಯಾವ ಸಿನಿಮಾಗಳು ಈ ಲಿಸ್ಟ್ ನಲ್ಲಿ ಸ್ಥಾನ ಪಡೆದಿವೆ ಎಂಬುದನ್ನು ನೋಡೋಣ. 

PREV
16
ತಲ್ವಾರ್

2015 ರಲ್ಲಿ ಬಿಡುಗಡೆಯಾದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನೀವು ಮಿಸ್ ಮಾಡದೆ ನೋಡಬೇಕು. ಈ ಚಿತ್ರದ ಕಥೆಯು 2008 ರಲ್ಲಿ ನೋಯ್ಡಾದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣವನ್ನು ಆಧರಿಸಿದೆ. ಇರ್ಫಾನ್ ಖಾನ್ ಮತ್ತು ಕೊಂಕಣ ಸೇನ್ ಶರ್ಮಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 8.1 ರ IMDb ರೇಟಿಂಗ್ ಹೊಂದಿದೆ.

26
ಮಹಾರಾಜ

ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ನಟಿಸಿರುವ ಈ ಚಿತ್ರದಲ್ಲಿ, ನೀವು ಒಂದರ ನಂತರ ಒಂದರಂತೆ, ಸಸ್ಪೆನ್ಸ್ ತುಂಬಿದ ದೃಶ್ಯಗಳನ್ನು ನೋಡಬಹುದು. ಇದಲ್ಲದೆ, ಈ ಚಿತ್ರವು 8.3 ರ IMDb ರೇಟಿಂಗ್ ಹೊಂದಿದೆ. ನೀವು ನಿಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು.

36
ಬರ್ಡ್ ಬಾಕ್ಸ್

2018 ರಲ್ಲಿ ಬಿಡುಗಡೆಯಾದ ಈ ಚಿತ್ರವು ರೋಮಾಂಚಕ ದೃಶ್ಯಗಳಿಂದ ತುಂಬಿದೆ. ಈ ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಸಸ್ಪೆನ್ಸ್ ಇದೆ. ಇದು ಸೀಟಿನ ತುದಿಯಲ್ಲಿ ನಿಮ್ಮನ್ನು ತಂದು ಕೂರಿಸುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಚಿತ್ರವನ್ನು ಪ್ರೇಕ್ಷಕರು ಸಹ ಸಂಪೂರ್ಣವಾಗಿ ಎಂಜಾಯ್ ಮಾಡಿದ್ದಾರೆ. ಇದು ವಾರಾಂತ್ಯದಲ್ಲಿ ವೀಕ್ಷಿಸಲು ಸೂಕ್ತ ಆಯ್ಕೆಯಾಗಿದೆ.

46
ಮೋನಿಕಾ ಓ ಮೈ ಡಾರ್ಲಿಂಗ್

ರಾಜ್‌ಕುಮಾರ್ ರಾವ್ ಮತ್ತು ರಾಧಿಕಾ ಆಪ್ಟೆ ನಟಿಸಿರುವ ಈ ಚಿತ್ರವನ್ನು ನೀವು ವಾರಾಂತ್ಯದಲ್ಲಿ ವೀಕ್ಷಿಸಬಹುದು. ರಾಜ್‌ಕುಮಾರ್ ರಾವ್ ಮತ್ತು ರಾಧಿಕಾ ಆಪ್ಟೆ ಜೊತೆಗೆ, ಹುಮಾ ಖುರೇಷಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೆ, ಚಿತ್ರವು ಸಸ್ಪೆನ್ಸ್‌ನಿಂದ ತುಂಬಿದೆ.

56
ತು ಯಾ ಮೈ

ಶನಯಾ ಕಪೂರ್ ಮತ್ತು ಆದರ್ಶ್ ಗೌರವ್ ನಟಿಸಿರುವ ಈ ಚಿತ್ರವು ರೋಮಾಂಚಕ ಮತ್ತು ಸಸ್ಪೆನ್ಸ್‌ನಿಂದ ತುಂಬಿದ ದೃಶ್ಯಗಳನ್ನು ಸಹ ಒಳಗೊಂಡಿದೆ. ಚಿತ್ರವು ಠಿಯೇಟರ್ ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದರೂ, ನಂತರ ಅದು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರು ಮೆಚ್ಚಿಕೊಂಡರು.

66
ಮಿಸಸ್ ಸೀರಿಯಲ್ ಕಿಲ್ಲರ್

ಇದೊಂದು ಮರ್ಡರ್ ಮಿಸ್ಟ್ರಿ ಕಥೆ. ಆಘಾತಕಾರಿ ಸೀರಿಯಲ್ ಮರ್ಡರ್ ಗಾಗಿ ವೈದ್ಯನೊಬ್ಬ ಜೈಲಿಗೆ ಹೋದಾಗ, ಅವನ ನಿಷ್ಠಾವಂತ ಹೆಂಡತಿ ಅವನು ಮಾಡಿದ ರೀತಿ ಕೊಲೆಗಳನ್ನು ಮಾಡಿ, ಗಂಡ ಕೊಲೆಗಾರ ಅಲ್ಲ ಅನ್ನೋದನ್ನು ಸಾಬೀತುಪಡಿಸುವ ಕಥೆಯನ್ನು ಹೊಂದಿರುವ ಸಿನಿಮಾ ಇದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories