‘Sarvam Maya’... ನಗಿಸುತ್ತಾ, ಕಣ್ಣಂಚನ್ನು ಒದ್ದೆ ಮಾಡುವ ಮುದ್ದಾದ ದೆವ್ವದ ಕಥೆ ಮಿಸ್ ಮಾಡ್ದೆ ನೋಡಿ

Published : Jan 06, 2026, 01:42 PM IST

‘Sarvam Maya’ : ‘ಸು ಫ್ರಮ್ ಸೋ’ ಸಿನಿಮಾ ಹಾರರ್ ಎಳೆಯನ್ನು ಹೊಂದಿರುವ ಕಾಮಿಡಿ ಸಿನಿಮಾ, ಈ ಸಿನಿಮಾ ಕನ್ನಡದಲ್ಲಿ ಮೋಡಿ ಮಾಡಿದಂತೆ, ಇದೀಗ ಮಲಯಾಳಂ ನಲ್ಲಿ ‘ಸರ್ವಮ್ ಮಾಯ’ ಸಿನಿಮಾ ರಿಲೀಸ್ ಆಗಿ ಭಾರಿ ಸದ್ದು ಮಾಡುತ್ತಿದೆ. ಒಂದೊಳ್ಳೆ ಸಿನಿಮಾ ನೋಡುವ ಹಂಬಲ ಇದ್ರೆ ಈ ಸಿನಿಮಾ ಮಿಸ್ ಮಾಡದೇ ನೋಡಿ.

PREV
16
ಸರ್ವಮ್ ಮಾಯ

ಕನ್ನಡ ಚಿತ್ರರಂಗದಲ್ಲಿ ‘ಸು ಫ್ರಮ್ ಸೋ’ ಹೇಗೆ ಹಾರರ್ ಕಾಮಿಡಿ ಮೂಲಕ ಕಚಗುಳಿ ಇಟ್ಟಿತ್ತೋ, ಅದೇ ರೀತಿ ಇದೀಗ ಮಲಯಾಳಂನಲ್ಲಿ ‘ಸರ್ವಮ್ ಮಾಯ’ ಎಂಬ ಹಾರರ್ ಕಾಮಿಡಿ ಸಿನಿಮಾ ಜನರನ್ನ ಚಿತ್ರಮಂದಿರದತ್ತ ಮುನ್ನುಗ್ಗುವಂತೆ ಮಾಡುತ್ತಿದೆ.

26
ನಿವಿನ್ ಪೌಲಿ ಕಂ ಬ್ಯಾಕ್

ಈ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ನಿವಿನ್ ಪೌಲಿ ನಟಿಸಿದ್ದಾರೆ. ಈ ಸಿನಿಮಾವನ್ನು ನಿವಿನ್ ಪೌಲಿ ಗ್ರ್ಯಾಂಡ್ ಕಂ ಬ್ಯಾಕ್ ಎಂದೇ ಹೇಳಬಹುದು. ಹಲವು ವರ್ಷಗಳ ಬಳಿಕ ನಿವಿನ್ ಭರ್ಜರಿ ಯಶಸ್ಸು ತಂದುಕೊಟ್ಟಂತಹ ಸಿನಿಮಾ ಇದಾಗಿದೆ.

36
ನಿರ್ದೇಶಕರು ಯಾರು?

ಸರ್ಮಮ್ ಮಾಯ ಸಿನಿಮಾ ಡಿಸೆಂಬರ್ 25ರಂದು ಕ್ರಿಸ್ಮಸ್ ದಿನ ಕೇರಳದಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವನ್ನು ಅಖಿಲ್ ಸತ್ಯನ್ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಿವಿನ್ ಜೊತೆ ಅಜು ವರ್ಗೀಸ್, ರಿಯಾ ಶಿಭು, ಪ್ರೀತಿ ಮುಕುಂದನ್ ನಟಿಸಿದ್ದಾರೆ.

46
ಕಥೆ ಏನು?

ಇದೊಂದು ಮುದ್ದಾದ ದೆವ್ವದ ಕಥೆ. ಈ ಸಿನಿಮಾದಲ್ಲಿ ಖಂಡಿತವಾಗಿಯೂ ದೆವ್ವ ನಿಮ್ಮನ್ನು ಹೆದರಿಸೋದಿಲ್ಲ. ಬದಲಾಗಿ ನಗಿಸುತ್ತದೆ. ಕೊನೆಗೆ ಕಣ್ಣಂಚನ್ನು ಒದ್ದೆ ಮಾಡಿಯೇ ಹೋಗುತ್ತದೆ. ನಾಯಕ ಪ್ರಭೇಂದು ಗಿಟಾರಿಸ್ಟ್, ಆತನ ತಂದೆ, ಅಣ್ಣ ಪುರೋಹಿತಿಕೆ ಮಾಡುತ್ತಿರುತ್ತಾರೆ. ಆದರೆ ಈತನಿಗೆ ಅದರಲ್ಲಿ ನಂಬಿಕೆ ಇಲ್ಲ, ದೇವರಲ್ಲೂ ನಂಬಿಕೆ ಇಲ್ಲ. ಅಪ್ಪನ ಮೇಲೂ ಕೋಪ. ಕೊನೆಗೆ ದೆವ್ವ ಆತನ ಜೀವನದಲ್ಲಿ ಬಂದಾಗ ಏನಾಗುತ್ತೆ

56
ರಿಯಾ ಶಿಭು

ಈ ಚಿತ್ರದಲ್ಲಿ ರಿಯಾ ಶಿಭು ಡೆಲೂಲು ಆಗಿ ನಟಿಸಿದ್ದಾರೆ. ಈಕೆ ದೆವ್ವವಾಗಿ ನಾಯಕ ಪ್ರಭೇಂದು (ನಿವಿನ್ ಪೌಲಿ) ಜೀವನದಲ್ಲಿ ಬಂದು ಏನೆಲ್ಲಾ ಬದಲಾವಣೆ ತರುತ್ತಾಳೆ ಅನ್ನೋದು ಕಥೆ. ಈ ಮುದ್ದಾದ ದೆವ್ವಕ್ಕೆ ತನ್ನ ಬಗ್ಗೆಯೇ ಮರೆತು ಹೋಗಿರುತ್ತೆ, ಹೇಗೆ ಸತ್ತು ದೆವ್ವವಾಗಿದ್ದೆ ಅನ್ನೋದು ಮರೆತು ಅಲೆದಾಡುತ್ತಿರುತ್ತದೆ. ಕೊನೆಗೆ ಮುಕ್ತಿ ಹೇಗೆ ಸಿಗುತ್ತದೆ ಅನ್ನೋದನ್ನು ನೀವು ಸಿನಿಮಾ ನೋಡಿದ್ರೆ ತಿಳಿಯಬಹುದು.

66
ಕೇರಳ ಪೂರ್ತಿ ಡೆಲೂಲು ಮಯ

ಸಿನಿಮಾ ಬಿಡುಗಡೆಯಾಗಿ ಇದೀಗ 10 ದಿನ ಕಳೆದಿದ್ದು, ಹತ್ತು ದಿನದಲ್ಲಿ ಸಿನಿಮಾ ಕೇರಳ ಮಾತ್ರವಲ್ಲದೇ ದೇಶ, ವಿದೇಶ ಸೇರಿ ಬರೋಬ್ಬರಿ 100 ಕೋಟಿ ಕಲೆಕ್ಟ್ ಮಾಡಿದೆ. ಅಷ್ಟೇ ಅಲ್ಲದೇ ಕೇರಳದಲ್ಲಿ ಜನ ಡೆಲೂಲು ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಂತದ್ದೊಂದು ಮುದ್ದಾದ ದೆವ್ವ ನಮ್ಮ ಜೀವನದಲ್ಲೂ ಬರಬಾರದೆ ಎಂದು ಬಯಸುತ್ತಿದ್ದಾರೆ. ಒಂದೊಳ್ಳೆ ಫೀಲ್ ಗುಡ್ ಚಿತ್ರ ಬೇಕೆಂದರೆ ಇವತ್ತೆ ಈ ಸಿನಿಮಾ ನೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories