ದಯೆ, ಔದಾರ್ಯ, ಪ್ರೋತ್ಸಾಹ, ಇವೆಲ್ಲವನ್ನೂ ನನ್ನ ತಂದೆಯಿಂದಲೇ ಕಲಿತಿದ್ದೇನೆ ಎಂದು ಎ.ಆರ್.ರಹಮಾನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ, ತನ್ನ ತಂದೆ ತೀರಿಕೊಂಡ ನಂತರ ತಾಯಿ ತುಂಬಾ ಕಷ್ಟಗಳನ್ನು ಎದುರಿಸಬೇಕಾಯಿ. ಆ ಸಮಯದಲ್ಲಿ ತನ್ನ ತಾಯಿ ಇಸ್ಲಾಂ ಧರ್ಮಕ್ಕೆ ಆಕರ್ಷಿತರಾಗಿ ಕುಟುಂಬ ಸಮೇತರಾಗಿ ಇಸ್ಲಾಂಗೆ ಮತಾಂತರಗೊಂಡ ನಂತರ, ಎ.ಆರ್.ರಹಮಾನ್ ತನ್ನನ್ನು ಸಂಪೂರ್ಣ ಇಸ್ಲಾಮರನ್ನಾಗಿ ಪರಿವರ್ತಿಸಿಕೊಳ್ಳಲು ಸುಮಾರು 10 ವರ್ಷಗಳು ಬೇಕಾಯಿತು ಎಂದು ಹೇಳಿದ್ದಾರೆ.ಇನ್ನು ಎ.ಆರ್.ರಹಮಾನ್ ಊಟ ಮಾಡುವುದನ್ನು ಮರೆತರೂ, ಎಲ್ಲೇ ಹೋದರೂ ಐದು ಬಾರಿ ನಮಾಜ್ ಮಾಡುವುದನ್ನು ಮಾತ್ರ ಮರೆಯುವುದಿಲ್ಲ.