ಬಂಗಲೆ ಕೆಡವದಂತೆ ಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಹಿನ್ನಡೆ; ಮತ್ತೆ ಶುರುವಾಗುತ್ತಾ ಗುದ್ದಾಟ?

First Published Jan 2, 2021, 3:13 PM IST

ಬಾಲಿವುಡ್ ನಟಿ ಕಂಗನಾ ರನಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಬಂಗಲೆ ಪ್ರಕರಣದಿಂದ ಮುಗಿಲು ಮುಟ್ಟಿತ್ತು. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಕಂಗನಾಗೆ ಮುಂಬೈ ಪಾಲಿಕೆ ಶಾಕ್ ನೀಡಿತ್ತು. ಕಂಗನಾ ಬಂಗಲೆಯನ್ನು ಜೆಸಿಬಿ ಮೂಲಕ ಕೆಡವಿತು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಯಶಸ್ಸು ಕೂಡ ಸಿಕ್ಕಿತ್ತು. ಆದರೆ ಇದೀಗ ಕೋರ್ಟ್ ಕಂಗನಾಗೆ ಶಾಕ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಮುಂಬೈನ ಪಾಲಿ ಹಿಲ್‌ನಲ್ಲಿರುವ ನಟಿ ಕಂಗನಾ ರನಾವತ್ ಬಂಗಲೆ ಅನಧಿಕೃತ ಎಂದು ಮುಂಬೈ ಮಹಾನಗರ ಪಾಲಿಕೆ ಕೆಡವಿತ್ತು. ಜಿಸಿಬಿ ಮೂಲಕ ಕಟ್ಟಡ ನಾಶ ಮಾಡಿತ್ತು.
undefined
ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಆರಂಭಿಕ ಜಯ ದೊರಕಿತ್ತು. ಕಾನೂನು ದುರುದ್ದೇಶಕ್ಕೆ ಬಳಕೆಯಾಗಿ ಎಂದು ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಶಾಕ್ ನೀಡಿತ್ತು.
undefined
ಆದರೆ ಇದೀಗ ಕಂಗನಾಗೆ ಹಿನ್ನಡೆಯಾಗಿದೆ. ಮುಂಬೈ ನಿವಾಸದಲ್ಲಿ ಮಾಡಿರುವ ಮಾರ್ಪಡುಗಳನ್ನು ಕೆಡವದಂತೆ ಮುಂಬಾ ಮಹಾನಗರ ಪಾಲಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕಂಗನಾ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
undefined
16 ಅಂತಸ್ತಿನ ಕಟ್ಟದ 5ನೇ ಮಹಡಿಯಲ್ಲಿ ಕಂಗನಾ 3 ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಮಾರ್ಪಾಡು ಮಾಡುವಾಗ ಈ ಮೂರು ಫ್ಲಾಟ್‌ಗಳನ್ನು ಒಂದಾಗಿ ಪರಿವರ್ತಿಸಿದ್ದಾರೆ.
undefined
ಆದರೆ ಕಂಗನಾ, ಖಾಲಿ ಹಾಗೂ ಇತರ ಜಾಗಗಳನ್ನು ಈ ಮಾರ್ಪಡುವಿನಲ್ಲಿ ಬಳಸಿಕೊಂಡಿದ್ದಾರೆ. ಸಾಮಾನ್ಯ ಪ್ಯಾಸೇಜ್, ಸಂಕ್ ವಲಯ, ಡಕ್ಟ್ ವಲಯ, ಇತರ ಸ್ಥಳಗಳನ್ನು ಕಂಗನಾ ಬಳಸಿಕೊಂಡು ತಮ್ಮ ನಿವಾಸ ನಿರ್ಮಿಸಿದ್ದಾರೆ.
undefined
ಕಂಗನಾ ನಿವಾಸ ಮಾರ್ಪಡು ವೇಳೆ ಗಂಭೀರ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಕಂಗನಾ ಸಲ್ಲಿಸಿರುವ ತಡೆಯಾಜ್ಞೆ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡುವುದಿಲ್ಲ ಎಂದು ನ್ಯಾಯಧೀಶ ಎಲ್ ಎಸ್ ಚವಾನ್ ಹೇಳಿದ್ದಾರೆ.
undefined
ಕಂಗನಾ ಯಾವುದೇ ಮಾರ್ಪಾಡು ಮಾಡುವಾಗ ತನ್ನದಲ್ಲದ ಪ್ರದೇಶಗಳನ್ನು ಬಳಸಿಕೊಳ್ಳುವಂತಿದ್ದರೆ, ಮಹಾ ನಗರ ಪಾಲಿಕೆಯಿಂದ ಅನುಮತಿ ಕಡ್ಡಾಯವಾಗಿದೆ. ಆದರೆ ಇಲ್ಲಿ ಕಂಗನಾ ಯಾವುದೇ ಅನುಮತಿ ಪಡೆದಿಲ್ಲ ಎಂದು ಕೋರ್ಟ್ ಹೇಳಿದೆ.
undefined
ಕಂಗನಾ ಅನಧೀಕೃತವಾಗಿ ನಿವಾಸ ನಿರ್ಮಾಣ ಮಾಡಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆ ನೊಟೀಸ್ ಜಾರಿ ಮಾಡಿತ್ತು. ಮೊದಲು ಇದ್ದಂತೆ ಮಾಡಲು ಸೂಚಿಸಿತ್ತು. ಸರ್ಕಾರದ ವಿರುದ್ಧ ಮಾತನಾಡಿದ ನನಗೆ ಈ ರೀತಿ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದಳು.
undefined
click me!