34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಸುದ್ದಿಯಿಂದ ಹೊರಬರಲಾರದಷ್ಟು ಶಾಕ್ ಆಗಿರುವ ಬಿಟೌನ್ ಶೋಕಸಾಗರದಲ್ಲಿ ಮುಳುಗಿದೆ.
ಕಾರಣವಾಗಿದ್ದೇ ಅಲಿಯಾ ಭಟ್ ತಂದೆ ಕೊಟ್ಟ ಒಂದು ಹೇಳಿಕೆ ಸುಶಾಂತ್ ಸಾವಿನ ಬಗ್ಗೆ ಮತ್ತಷ್ಟು ಅನುಮಾನಗಳು ಹೆಚ್ಚಾಗಲು ಕಾರಣವಾಗಿದೆ.
'ಕೆಲ ದಿನಗಳ ಹಿಂದೆಯೇ ಸುಶಾಂತ್ ಹೀಗೆ ಮಾಡಿಕೊಳ್ಳುತ್ತಾನೆಂದು ನಾನು ನನ್ನ ತಮ್ಮನಿಗೆ ಹೇಳಿದ್ದೆ' ಎಂದಿರುವ ಮುಕೇಶ್ ಭಟ್ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಿನಿಮಾ ನಿರ್ಮಾಪಕನಾಗಿ ನನ್ನ ವೃತ್ತಿಯನ್ನು ಪರ್ವೀನ್ ಬಾಬಿ ಜತೆ ಆರಂಭಿಸಿದೆ ಆಕೆಯೂ ಹೀಗೆ ಮನೋವ್ಯಾಧಿಯಾಗಿದ್ದಳು' ಸುಶಾಂತ್ ಕೂಡ ಅದೇ ಸ್ಥಿತಿಯಲ್ಲಿದ್ದರು ಒಂದೆರಡು ಬಾರಿ ಭೇಟಿಯಾದಾಗ ಗಮನಿಸಿದ್ದೆ ಎಂದು ಮಹೇಶ್ ಭಟ್ ಹೇಳಿದ್ದಾರೆ.
'ಆದರೆ ನಿಜಕ್ಕೂ ಹೀಗೆ ಆಗಿರುವುದು ಎಲ್ಲರಂತೆ ನನಗೂ ಕೂಡ ಶಾಕ್ ಆಗಿದೆ ಆದರೆ ಇದು ಮುಂಚೆಯೇ ನನಗೆ ತಿಳಿದಿತ್ತು' ಎಂದಿದ್ದಾರೆ.ಹೀಗಾಗಬಹುದು ಎಂದು ನಾನು ಊಹಿಸಿದ್ದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಹೇಶ್ ಭಟ್ ಮಾತುಗಳನ್ನು ಕೇಳಿದ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಿಷಯ ತಿಳಿದಿದ್ದು ಸಹಾಯ ಮಾಡದೇ ಹಾಗೇ ಉಳಿದಿರಿಲ್ಲ ನೀವೇನು ಅಸಹಾಯಕರೇ ಎಂದು ಪ್ರಶ್ನಿಸಿದ್ದಾರೆ.
ಸುಶಾಂತ್ ಅವರನ್ನು ಪರ್ಮಿನ್ ಬಾಬಿಗೆ ಹೋಲಿಸಿದ ಕಾರಣ ಕಂಗನಾ ಮಹೇಶ್ ಹಾಗು ಮುಕೇಶ್ ಫ್ಯಾಮಿಲಿ ವಿರುದ್ಧ ಗರಂ ಆಗಿದ್ದಾರೆ.
ನಿರ್ಮಾಪಕ 'ಮುಕೇಶ್ ಫ್ಯಾಮಿಲಿ ಪರ್ಮಿನ್ ಬಾಬಿಗೆ ಏನು ಮಾಡಿದ್ದರು, ಆಕೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂದು ಇಡೀ ಚಿತ್ರರಂಗಕ್ಕೆ ತಿಳಿದಿದೆ' ಸುಶಾಂತರನ್ನು ಆಕೆಗೆ ಹೋಲಿಸುವುದು ಸರಿಯಲ್ಲ, ಎಂದು ನಟಿ ಕಂಗನಾ ಗರಂ ಆಗಿದ್ದಾರೆ.
ಸುಶಾಂತ್ ಸಾವಿಗೆ ಕಂಬನಿ ಮಿಡಿದ ಬಾಲಿವುಡ್ ನಟ-ನಟಿಯರು ಇಲ್ಲಿ ಕರಣ್ ಜೋಹರ್ ಸೇರಿದಂತೆ ಅನೇಕ ಸ್ಟಾರ್ ನಟರ ಗುಂಪುಗಾರಿಕೆ ಹೆಚ್ಚಾಗಿದೆ ಅದಕ್ಕೆ ಈರೀತಿಯ ಘಟನೆಗಳು ನಡೆಯುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ನಟಿ , ನಿರ್ದೇಶಕ , ನಿರ್ಮಾಪಕರ ಬಂಡವಾಳವನ್ನು ನೇರವಾಗಿ ಬಯಲು ಮಾಡುತ್ತಿರುವ ಕಂಗನಾ ಸುಶಾಂತ್ ಸಿಂಗ್ ಪರವಾಗಿ ಪರವಾಗಿ ಮಾತನಾಡಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ದೊಡ್ಡ ಕುಟುಂಬಗಳ ಮತ್ತು ಸ್ಟಾರ್ ನಟರ ವರ್ತನೆ ಹೇಗಿರುತ್ತದೆ ಎಂದು ಜನರಿಗೆ ಮನವರಿಕೆ ಮಾಡಿದ್ದಾರೆ.