2017ರಲ್ಲಿ ತೆರೆ ಕಂಡ 'ರಾಬ್ತಾ' ಸಿನಿಮಾ.
ನಿರ್ದೇಶಕ ಹೋಮಿ ಈ ಚಿತ್ರದಲ್ಲಿ ಸುಶಾಂತ್‌ಗೆ ಜೋಡಿಯಾಗಿ ಮಿಂಚಲು ನಟಿ ಆಲಿಯಾ ಭಟ್‌ಳನ್ನು ಆಯ್ಕೆ ಮಾಡಿಕೊಂಡಿದ್ದರು.
ಮೊದಲು ಚಿತ್ರ ಮಾಡುವುದಾಗಿ ಒಪ್ಪಿಕೊಂಡ ಆಲಿಯಾ ಭಟ್ ಯಾರಿಗೂ ಸರಿಯಾದ ಕಾರಣ ನೀಡದೆ ಸಿನಿಮಾದಿಂದ ಹೊರ ಬರುತ್ತಾರೆ.
ಮಾಧ್ಯಮಗಳಲ್ಲಿ ಸಿನಿಮಾದಿಂದ ಹೊರ ನಡೆದಿರುವುದು ಚರ್ಚೆ ಆಗುವ ಸಮಯದಲ್ಲಿ ಆಲಿಯಾ ಭಟ್ ಟ್ಟೀಟ್ ಮಾಡುತ್ತಾರೆ.
'ನನಗೆ ರಾಬ್ತಾ ತಂಡದ ಜತೆ ಸಿನಿಮಾ ಮಾಡುವ ಆಸೆ ತುಂಬಾನೇ ಇದೆ ಆದರೆ ಡೇಟ್ ಕ್ಲಾಶ್ ಆಗುತ್ತಿರುವ ಕಾರಣ ಮಾಡಲು ಸಾಧ್ಯವಿಲ್ಲ'
ಆಲಿಯಾ ಭಟ್ ನಿರ್ಧಾರವನ್ನು ಅನುಮಾನಿಸಿದ ಸುಶಾಂತ್ ಸಿಂಗ್ ಆಗ ಮಾಡಿದ ಟ್ಟೀಟ್ ಈಗ ವೈರಲ್ ಆಗುತ್ತಿದೆ.
'ಜನರು ತಮ್ಮ ವೈಯಕ್ತಿಕ ಬೆಳವಣಿಗಾಗಿ ಇನ್ನೊಬ್ಬರ ಸಿನಿಮಾವನ್ನು ಕೊನೆ ಕ್ಷಣದಲ್ಲಿ ಕೈ ಬಿಡುತ್ತಾರೆ. ನೀವು ಹೀಗೆ ಮಾಡುವುದರಿಂದಲೇ ಉತ್ತಮ ಕಥೆಗಳು ಹೊರ ಬರಲು ಸಾಧ್ಯ' ಎಂದು ಸುಶಾಂತ್ ಟ್ಟೀಟ್ ಮಾಡಿದ್ದರು.
ಈ ಸಿನಿಮಾವನ್ನು ನಿರಾಕರಿಸಿದ ಆಲಿಯಾ ಭಟ್ ವರುಣ್ ಧವನ್ ಜತೆ ಸಿನಿಮಾ ಒಪ್ಪಿಕೊಂಡರು.
ಆಗ ನೆಟ್ಟಿಗರಿಗೆ ತಿಳಿದಿತ್ತು ಕರಣ್ ಜೋಹರ್ ಸಲಹೆಯಿಂದ ಆಲಿಯಾ ಸುಶಾಂತ್ ಸಿನಿಮಾ ನಿರಾಕರಿಸಿ, ವರುಣ್ ಧವನ್ ಸಿನಿಮಾ ಒಪ್ಪಿಕೊಂಡಿರುವುದು ಎಂದು.
ಆಲಿಯಾ ಭಟ್ ಹೊರ ಬಂದ ನಂತರ ಕೃತಿ ಸೋನಮ್‌ನನ್ನು ನಟಿಯಾಗಿ ಆಯ್ಕೆ ಮಾಡಲಾಗಿತ್ತು.