ಸಿಕ್ಕಾಪಟ್ಟೆ ಲವ್, ರಕ್ತದಲ್ಲಿ ಲವ್ ಲೆಟರ್, ಓಡಿ ಹೋಗಿ ಮದ್ವೆ…2 ಮಕ್ಕಳಾದ್ಮೇಲೆ ಡಿವೋರ್ಸ್ ಕೊಟ್ಟ ಬಾಲಿವುಡ್ ಸ್ಟಾರ್ ನಟ

First Published | Jul 24, 2024, 2:12 PM IST

ರೀನಾ ದತ್ತಾ ಬಗ್ಗೆ ನಿಮಗೆ ಗೊತ್ತೆ ಇದ್ಯಾಲ್ವ? ಅಮೀರ್ ಖಾನ್ ಅವರ ಮೊದಲ ಪತ್ನಿ. ಇವರಿಬ್ಬರದ್ದು ಲವ್ ಮ್ಯಾರೇಜ್. ಓಡಿಹೋಗಿ ಮದುವೆಯಾಗಿದ್ದ ಇವರ ಪ್ರೇಮಕಥೆ ಬಾಲಿವುಡ್‌ನ ಪ್ರಸಿದ್ಧ ಪ್ರೇಮಕಥೆಗಳಲ್ಲಿ ಒಂದಾಗಿದೆ. ಇವರ ಲವ್ ಸ್ಟೋರಿ ಬಗ್ಗೆ ತಿಳಿಯೋಣ.  
 

ಅಮೀರ್ ಖಾನ್ ಅವರನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ (Mister Pefectionist) ಎಂದೂ ಕರೆಯುತ್ತಾರೆ. ಅಮೀರ್ ಖಾನ್ ಅವರ ವೈಯಕ್ತಿಕ ಜೀವನ ಯಾವಾಗ್ಲೂ ಸುದಿದ್ಯಲ್ಲಿರುತ್ತೆ. ಅಮೀರ್ ಖಾನ್ ಎರಡು ಮದ್ವೆ ಆಗಿದ್ದಾರೆ. ಮೊದಲನೇ ಹೆಂಡ್ತಿ ರೀನಾ ದತ್ತಾ ಮತ್ತು ಎರಡನೇ ಹೆಂಡ್ತಿ ಕಿರಣ್ ರಾವ್. ಇಬ್ಬರಿಗೂ ಅಮೀರ್ ಡಿವೋರ್ಸ್ ನೀಡಿದ್ದಾರೆ. ಆದ್ರೆ ಅಮೀರ್ ಮತ್ತು ರೀನಾ ದತ್ತಾ ಲವ್ ಸ್ಟೋರಿ ಬಾಲಿವುಡ್ ನ ಯಾವ ಲವ್ ಸ್ಟೋರಿಗೂ ಕಡಿಮೆ ಇರಲಿಲ್ಲ. ಬನ್ನಿ ಅವ್ರ ಲವ್ ಸ್ಟೋರಿ ಬಗ್ಗೆ ತಿಳಿಯೋಣ. 
 

ಒಂದು ಕಾಲದಲ್ಲಿ ಅಮೀರ್ ಖಾನ್ (Aamir Khan) ರೀನಾ ದತ್ತಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು , ಇವರಿಬ್ಬರ ಲವ್ ಸ್ಟೋರಿ ಅದೆಷ್ಟು ಸ್ಟ್ರಾಂಗ್ ಆಗಿತ್ತೆಂದರೆ, ಅಮೀರ್ ಖಾನ್ ತಮ್ಮ ಪ್ರೀತಿಯನ್ನು ತಿಳಿಸಲು ರೀನಾ ಅವರಿಗೆ ರಕ್ತದಲ್ಲಿ ಲವ್ ಲೆಟರ್ ಬರಿದ್ರಂತೆ. ಇಲ್ಲಿ ಅಮೀರ್ ಖಾನ್ ಅವರ ಕ್ರೇಜ್ ರಿಲೇಶನ್ ಶಿಪ್ ಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ. 
 

Tap to resize

ಅಮೀರ್ ಖಾನ್ ರೀನಾ ದತ್ತಾ ಲವ್ ಸ್ಟೋರ್
ಬಾಲಿವುಡ್ ಗೆ ಎಂಟ್ರಿ ಕೊಡುವ ಮೊದಲೇ ಅಮೀರ್ ಖಾನ್,  ರೀನಾ ದತ್ತಾ (Reena Dutta) ಅವರನ್ನು ಪ್ರೀತಿಸುತ್ತಿದ್ದರು. ರೀನಾಳನ್ನು ಮೆಚ್ಚಿಸಲು ಅಮೀರ್ ತನಗೆ ಸರಿ ಎನಿಸಿದ ಎಲ್ಲವನ್ನೂ ಮಾಡುತ್ತಿದ್ದಂತೆ. ತಾವು ಮಾಡ್ತಿರೋದು ಸರಿ ಅಲ್ಲ ಅನ್ಸಿದ್ರೂ ಸಹ ಅದನ್ನ ತಮ್ಮ ಪ್ರೀತಿಗಾಗಿ ಮಾಡ್ತಿದ್ರಂತೆ.. ಆ ಸಮಯದಲ್ಲಿ, ಅಮೀರ್ ರೀನಾಳನ್ನು ಎಷ್ಟು ಹುಚ್ಚಾಗಿ ಪ್ರೀತಿಸುತ್ತಿದ್ರೂ ಅಂದ್ರೆ, ಅಮೀರ್ ಖಾನ್ ರಕ್ತದಲ್ಲಿಯೇ ಪ್ರೇಮ ಪತ್ರಗಳನ್ನು ಬರೆದು ರೀನಾಗೆ ಕಳುಹಿಸುತ್ತಿದ್ದರಂತೆ. 

ಇತ್ತೀಚೆಗೆ, ಅಮೀರ್ ಖಾನ್ ಸಿಮಿ ಗರೇವಾಲ್ ಅವರೊಂದಿಗಿನ ಸಂದರ್ಶನದಲ್ಲಿ ರೀನಾ ದತ್ತಾರ ಮೇಲಿದ್ದ ತಮ್ಮ ಹುಚ್ಚು ಪ್ರೀತಿಯಾ ಬಗ್ಗೆ ಹಂಚಿಕೊಂಡಿದ್ದಾರೆ.  ತಾನು ರಕ್ತದಿಂದ ಪ್ರೇಮ ಪತ್ರ ಬರೆದ್ರೆ ರೀನಾ ದತ್ತ ತುಂಬಾನೆ ಖುಷಿ ಪಡ್ತಾರೆ ಅಂತ ಭಾವಿಸಿ ಅಮೀರ್ ರಕ್ತದಿಂದ ಪತ್ರ ಬರೆಯುವ ಮೂಲಕ ರೀನಾ ಸಂತೋಷಪಡುತ್ತಾಳೆ ಎಂದು ಅಮೀರ್ ಅಂದುಕೊಂಡಿದ್ರಂತೆ, ಆದ್ರೆ ಆಗಿದ್ದು ಮಾತ್ರ ಉಲ್ಟಾ. ರಕ್ತದಿಂದ ಬರೆದ ಲೆಟರ್ ನೋಡಿ ರೀನಾ ತುಂಬಾನೆ ನೋವು ಅನುಭವಿಸಿದ್ರಂತೆ. 
 

ಅಮೀರ್ ಖಾನ್ ಬರೆದ ಪತ್ರದಲ್ಲಿ ಏನಿದೆ? 
ರೀನಾ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸೋ ಸಲುವಾಗಿ ಅಮೀರ್ ಖಾನ್ ರಕ್ತದಲ್ಲಿ ಲೆಟರ್ ಬರಿದಿದ್ರಂತೆ. ತಮ್ಮ ಪ್ರೀತಿಯನ್ನೆಲ್ಲಾ ಧಾರೆ ಎರೆದು ಪತ್ರವನ್ನು ತುಂಬುತ್ತಿದ್ರಂತೆ. ಆದ್ರೆ ಇಂದಿನ ಯುವಕರು ರಕ್ತದಲ್ಲಿ ಲವ್ ಲೆಟರ್ ಬರೆಯೋದು ನನಗೆ ಇಷ್ಟ ಆಗ್ತಿಲ್ಲವಂತೆ ಅಮೀರ್ ಖಾನ್ ಗೆ..

ರಕ್ತದಲ್ಲಿ ಬರೆದ ಅನೇಕ ಪತ್ರಗಳು (love letter) ಇವತ್ತೂ ನನಗೆ ಸಿಗುತ್ತಿವೆ, ಆದರೆ ಇಂದು ಅದು ನನಗೆ ಇಷ್ಟವಾಗ್ತಿಲ್ಲ ಎಂದು ಅಮೀರ್ ಹೇಳಿದರು. ಯಾರಿಗೂ ಯಾವತ್ತೂ ರಕ್ತದಲ್ಲಿ ಲವ್ ಲೆಟರ್ ಬರೆಯೋದಕ್ಕೆ ಹೋಗ್ಬೇಡಿ ಎಂದು ಸಲಹೆ ನೀಡ್ತಾರೆ. 
 

ಓಡಿ ಹೋಗಿ ಮದ್ವೆಯಾದ ರೀನಾ ಮತ್ತು ಅಮೀರ್ ಖಾನ್
ರೀನಾಳನ್ನು ಮದುವೆಯಾದಾಗ, ಅಮೀರ್ ಖಾನ್ ಗೆ ಕೇವಲ 19 ವರ್ಷ ವಯಸ್ಸಾಗಿತ್ತಂತೆ  ಮತ್ತು ರೀನಾ ಅಮೀರ್ ಗಿಂತಾ 2 ವರ್ಷ ದೊಡ್ಡವರಂತೆ. ಇಬ್ಬರ ಪೋಷಕರಿಗೆ ಅವರ ಸಂಬಂಧದ ಬಗ್ಗೆ ತಿಳಿದಿರಲಿಲ್ಲವಂತೆ. ಆದ್ರೆ ಎಲ್ಲಿ ಒಬ್ಬರನ್ನೊಬ್ರು ಕಳೆದುಕೊಳ್ಳುವ ಭಯದಿಂದ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ್ದರಂತೆ ಈ ಜೋಡಿ. 
 

ಇಬ್ಬರದ್ದೂ ಬೇರೆ ಬೇರೆ ಧರ್ಮ ಆಗಿರೋದ್ರಿಂದ ಎರಡು ಕುಟುಂಬಗಳ ನಡುವೆ ದಂಗೆ ಆಗೋ ಭಯದಿಂದ ಮನೆಯಲ್ಲಿ ಇಬ್ಬರೂ ತಿಳಿಸಿರಲೇ ಇಲ್ಲವಂತೆ.  ರೀನಾರನ್ನು ಕಳೆದುಕೊಳ್ಳುವ ಭಯದಿಂದಾಗಿ ಓಡಿ ಹೋಗಿ ಮದ್ವೆಯಾಗಿದ್ರಂತೆ ಈ ಜೋಡಿ. ರೀನಾ ಅವರನ್ನು ಮದುವೆಯಾದಾಗ ಅಮೀರ್ ಗೆ 21 ವರ್ಷ ವಯಸ್ಸಾಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೀನಾ ಕಾನೂನುಬದ್ಧವಾಗಿ ಮದುವೆಯಾಗಲು ಕೆಲವು ತಿಂಗಳು ಕಾಯಬೇಕಾಗಿ ಬಂದಿತ್ತಂತೆ. 
 

Latest Videos

click me!