ಜಯಾ ಬಚ್ಚನ್‌ರಂತೆ ಪಾಪಾರಾಜಿ ವಿರುದ್ಧ ಹರಿಹಾಯ್ದ ಮೌಶುಮಿ ಚಟರ್ಜಿ! ನೆಟ್ಟಿಗರು ಶಾಕ್

Published : Mar 16, 2024, 06:01 PM IST

ಬಾಲಿವುಡ್‌ನ  70 ರ ದಶಕದ ನಟಿಯ ಮೌಶುಮಿ ಚಟರ್ಜಿ ಅವರ ವೀಡಿಯೋವೊಂದು ವೈರಲ್‌ ಆಗಿದೆ. ಇದರಲ್ಲಿ ನಟಿ  ಅವರು ಪ್ರಶಸ್ತಿ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಜಯಾ ಬಚ್ಚನ್ ಅವರಂತೆ ವರ್ತಿಸಿದ್ದಾರೆ  ಎಂದು ಜನ ಅಕ್ಷೇಪಿಸಿದ್ದಾರೆ.  ವೀಡಿಯೋ ವೈರಲ್‌ ಆಗಿದ್ದು ನೆಟಿಜನ್‌ಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ

PREV
18
   ಜಯಾ ಬಚ್ಚನ್‌ರಂತೆ ಪಾಪಾರಾಜಿ ವಿರುದ್ಧ ಹರಿಹಾಯ್ದ ಮೌಶುಮಿ ಚಟರ್ಜಿ!  ನೆಟ್ಟಿಗರು ಶಾಕ್

ಜಯಾ ಬಚ್ಚನ್ ಮತ್ತು ಪಾಪರಾಜಿಗಳ ನಡುವಿನ ಘರ್ಷಣೆಯ ವೀಡಿಯೋಗಳು ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ . ಜಯಾ ಮೀಡಿಯಾದವರ ಮೇಲೆ ಅಸಹನೆ ಹೊಂದಿದ್ದಾರೆ ಮತ್ತು ಬಲ, ಎಡ ಮತ್ತು ಮಧ್ಯದಲ್ಲಿ ನಿಂತು ಪೋಸ್‌ ನೀಡಲು ಹೇಳುವ ಪ್ಯಾಪ್‌ಗಳ  ವಿನಂತಿಗಳಿಗೆ ಮಿಸಸ್ ಅಮಿತಾಭ್ ಬಚ್ಚನ್ ಯಾವತ್ತೂ ಕ್ಯಾರೇ ಅನ್ನೋದಿಲ್ಲ. 

28

ಕೆಲವು ಆಯ್ದ ಸಂದರ್ಭಗಳಲ್ಲಿ ಮಾತ್ರ ಜಯಾ ಅವರು ಮಾದ್ಯಮದವರ ವಿನಂತಿಗಳನ್ನು ಪುರಸ್ಕರಿಸುತ್ತಾರೆ. ಹೀಗೆ ಪತ್ರಿಕಾ ಮಾಧ್ಯಮದೊಂದಿಗೆ ಅಸಹನೆಯಿಂದ ವರ್ತಿಸುವುದು ಕೇವಲ ಜಯಾ ಬಚ್ಚನ್‌ ಅವರು  ಮಾತ್ರವಲ್ಲ.  

38

ಮುಂಬೈನಲ್ಲಿ ನಡೆದ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ನಟಿ ಮೌಶುಮಿ ಚಟರ್ಜಿ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಆ ಸಮಯದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದ ಕುತೂಹಲಕಾರಿ ಘಟನೆಯೊಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ಮಾಡಿದೆ. 

48

ವೀಡಿಯೊದಲ್ಲಿ, ಪ್ರಶಸ್ತಿ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಮೌಶುಮಿ ಚಟರ್ಜಿ ಎಂಟ್ರಿ ನೀಡುತ್ತಿರುವುದನ್ನು ಕಾಣಬಹುದು..ಆದರೆ ಅವರು  ಆತುರದಲ್ಲಿದ್ದರು ಮತ್ತು ಪೋಸ್ ನೀಡಲು ಇರಿಟೇಟ್ ಮಾಡಿಕೊಳ್ಳುತ್ತಿದ್ದರು. ಹೀಗೆ ಜಯಾ ಬಚ್ಚನ್ ಕೂಡ ಯಾವಾಗಲೂ ಆತುರದಲ್ಲಿರುತ್ತಾರೆ ಎಂದು ಮಹಿಳೆಯೊಬ್ಬರು ಹೇಳುತ್ತಾರೆ.   

58

ವೈರಲ್ ಆಗಿರುವ ವೀಡಿಯೋದಲ್ಲಿ ಮೌಶುಮಿ ಚಟರ್ಜಿಯನ್ನು ರೆಡ್ ಕಾರ್ಪೆಟ್ ಮೇಲೆ ಜಯಾ ಬಚ್ಚನ್‌ಗೆ ಹೋಲಿಸಲಾಗಿದೆ ಮತ್ತು  ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. 70 ರ ದಶಕದ ನಟ-ನಟಿಯರು ಹೇಗೆ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು ಮತ್ತು ಡಿಪ್ಲೋಮೆಸಿಯೇ ಗೊತ್ತಿರಲಿಲ್ಲ ಎಂದು  ಅಭಿಮಾನಿಗಳು ಹೇಳಿದ್ದಾರೆ. 

68

'ಅವರು ವ್ಯಕ್ತಿತ್ವವನ್ನು ಹೊಂದಿದ್ದಾರೆ ಮತ್ತು ಆನ್‌ಲೈನ್‌ನಲ್ಲಿ ಜನರು ಅವರ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.

78

'ಸುಂದರ ಮಹಿಳೆ ಮೌಶುಮಿ ಚಟರ್ಜಿ. ನಾನು ಅವಳನ್ನು ಮೌಸಮ್‌ನಲ್ಲಿ ಪ್ರೀತಿಸುತ್ತಿದ್ದೆ ಮತ್ತು ಆ ಮಳೆ ಹಾಡು ರಿಮ್ ಜಿಮ್ ಗಿರೆ ಸಾವನ್ ಸುಲಗ್ ಸುಲಗ್ ಜಾಯೆ ಮನ್ ' ಎಂದು  ಬರೆದಿದ್ದಾರೆ.

88

'ಜೀವನದಲ್ಲಿ ಸಾಕಷ್ಟು ಸಂಕಟಗಳನ್ನು ಎದುರಿಸಿದ್ದಾರೆ. ಹೆತ್ತಮಗಳನ್ನು ಕಳೆದುಕೊಂಡಿದ್ದಾರೆ. ಎಷ್ಟು ನಿಗರ್ವಿಯಾಗಿ ನಗುವುದು ನಂಗಿಷ್ಟ.  ಎಂದು ಕಾಮೆಂಟ್‌ ಮಾಡಿದ್ದಾರೆ.


 

Read more Photos on
click me!

Recommended Stories