ಜನವರಿಯಲ್ಲಿ KGF ಚೆಲುವೆಯ ಮದುವೆ ? ಹುಡುಗ ಯಾರು ?

First Published | Oct 1, 2021, 3:39 PM IST
  • ಜನವರಿಯಲ್ಲಿ ಮದುವೆಯಾಗಲಿದ್ದಾರಾ ಮೌನಿ ರಾಯ್ ?
  • ಕೆಜಿಎಫ್ ಚೆಲುವೆಯ ಕೈ ಹಿಡಿಯೋದ್ಯಾರು ?

ನಟಿ ಮೌನಿ ರಾಯ್ ಭಾರತದ ಸಿನಿಮಾ ಮತ್ತು ಕಿರುತೆರೆ ಉದ್ಯಮದ ಅತ್ಯಂತ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ನಟಿ ಕಿರುತೆರೆಯಲ್ಲಿ ಮಿಂಚಿದ ಮೇಲೆ ಬೆಳ್ಳಿ ಪರದೆಗಳಲ್ಲೂ ಮಿಂಚಿದ್ದಾರೆ. ನಂತರ ಸಾಲು ಸಾಲು ಸಿನಿಮಾಗಳನ್ನು ಮಾಡಿ ಉದ್ಯಮದಲ್ಲಿ ಗಟ್ಟಿಯಾದರು.

ಅವರು ಇನ್‌ಸ್ಟಾಗ್ರಾಮ್‌ನಲ್ಲಿ 19.3 ಮಿಲಿಯನ್ ಫಾಲೋವರ್‌ಗಳೊಂದಿಗೆ ಒಳ್ಳೆಯ ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗಳನ್ನೂ ಹೊಂದಿದ್ದಾರೆ. ಮೌನಿ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.

Tap to resize

ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಹಲವು ಬಾರಿ ಕಂಡುಬಂದಿದ್ದಾರೆ. ಮೌನಿ ಕೊರೋನಾ ಸಮಯವನ್ನು ದುಬೈನಲ್ಲಿ ಕಳೆದರು.

ಈಗ ಇತ್ತೀಚಿನ ವರದಿಯ ಪ್ರಕಾರ, ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಮೌನಿಯ ಸೋದರಸಂಬಂಧಿ ವಿದ್ಯುತ್ ರೊಯಿಸಾರ್ಕರ್ ಮೌನಿ ಮತ್ತು ಸೂರಜ್ ಜನವರಿ 2022 ರಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಸಮಾರಂಭವು ದುಬೈ ಅಥವಾ ಇಟಲಿಯಲ್ಲಿ ನಡೆಯಲಿದೆ. ಕೂಚ್ ಬಿಹಾರದಲ್ಲಿಯೂ ಆರತಕ್ಷತೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ರಾಯ್ಸಾರ್ಕರ್ ಅವರು ಮತ್ತು ಅವರ ಕುಟುಂಬವು ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಮೌನಿ ಮುಂದೆ ಅಯಾನ್ ಮುಖರ್ಜಿಯ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫ್ಯಾಂಟಸಿ-ಸೂಪರ್ ಹೀರೋ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ನಾಗಾರ್ಜುನ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

Latest Videos

click me!