ಬಾಲಿವುಡ್ ಸ್ಟಾರ್‌ಗಳ ಟೀಕಿಸೋ ಈತನಲ್ಲಿದೆ ಭಾರೀ ಸಂಪತ್ತು, ಲಕ್ಷುರಿ ಲೈಫ್

Published : Oct 01, 2021, 11:40 AM ISTUpdated : Oct 01, 2021, 11:59 AM IST

ಬಾಲಿವುಡ್ ಸ್ಟಾರ್‌ಗಳ ಟೀಕಿಸೋ ಈತ ಭಾರೀ ಶ್ರೀಮಂತ ಲಕ್ಷುರಿ ಬಂಗಲೆಯಲ್ಲಿ ವಾಸ, ಹೈಫೈ ಲೈಫ್

PREV
19
ಬಾಲಿವುಡ್ ಸ್ಟಾರ್‌ಗಳ ಟೀಕಿಸೋ ಈತನಲ್ಲಿದೆ ಭಾರೀ ಸಂಪತ್ತು, ಲಕ್ಷುರಿ ಲೈಫ್

ಸ್ವಯಂ ಘೋಷಿತವಾಗಿ ಬಾಲಿವುಡ್ ವಿಮರ್ಶಕ ಎಂದು ತನ್ನನ್ನು ತಾನು ಕರೆಯೋ ಕಮಾಲ್ ರಶೀದ್ ಖಾನ್ ಅಥವಾ ಕೆಆರ್‌ಕೆ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಹೇಳೋದರ ಮೂಲಕವೇ ಫೇಮಸ್ ಆಗಿದ್ದಾರೆ.

29

ಈ ಕಾರಣದಿಂದಾಗಿ, ಕಮಾಲ್ ರಶೀದ್ ಖಾನ್ ಅವರ ಟ್ವಿಟರ್ ಹ್ಯಾಂಡಲ್ ಕೂಡಾ ಬ್ಯಾನ್ ಮಾಡಲಾಗಿದೆ. ಈಗ ಅವರು ತಮ್ಮ ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಬಾಲಿವುಡ್ ತಾರೆಗಳನ್ನು ಗುರಿಯಾಗಿಸಿಕೊಂಡು ಬೇಕಾಬಿಟ್ಟಿ ಮಾತನಾಡುತ್ತಿರುತ್ತಾರೆ.

39

ಕಮಾಲ್ ರಶೀದ್ ಖಾನ್ ಯುಎಇಯಲ್ಲಿ ಯಶಸ್ವಿ ವ್ಯಾಪಾರಸ್ಥರೆನ್ನುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಅವರು ದುಬೈನ ಐಷಾರಾಮಿ ಭವನದಲ್ಲಿ ವಾಸಿಸುತ್ತಿದ್ದಾರೆ.

49

ಕಮಾಲ್ ರಶೀದ್ ಖಾನ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದುಬೈನಲ್ಲಿರುವ ತನ್ನ ಐಷಾರಾಮಿ ಮನೆಯ ಒಳಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

59

ಕೆಆರ್‌ಕೆ ತನ್ನ ಪೋಸ್ಟ್‌ನಲ್ಲಿ ನನ್ನ ದುಬೈ ಮನೆ ಎಂದು ಬರೆದಿದ್ದಾರೆ. ಪೋಸ್ಟ್‌ನೊಂದಿಗೆ ಹಂಚಿಕೊಂಡಿರುವ ಚಿತ್ರಗಳಲ್ಲಿ, ಕೆಆರ್‌ಕೆ ಅವರ ಮನೆ ಜನ್ನತ್‌ನ ವಿಶಾಲವಾದ ಕೊಠಡಿಗಳು, ಈಜುಕೊಳ, ಉದ್ಯಾನ ಮತ್ತು ಸುಂದರವಾದ ವಿನ್ಯಾಸವನ್ನು ನೋಡಬಹುದು.

69

ಕೆಆರ್‌ಕೆ ದುಬಾರಿ ಮತ್ತು ರಾಯಲ್ ವಾಹನಗಳನ್ನು ಇಷ್ಟಪಡುತ್ತಾರೆ. ಕೆಆರ್ ಕೆ ಬಿಎಂಡಬ್ಲ್ಯು 5 ಸಿರೀಸ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ನಂತಹ ವಾಹನಗಳನ್ನು ಹೊಂದಿದ್ದಾರೆ.

79
=

ಕೆಆರ್‌ಕೆ ಕೊಲ್ಲಿ ರಾಷ್ಟ್ರಗಳಲ್ಲಿ ವ್ಯಾಪಾರ ನಡೆಸುತ್ತಾರೆ. ಅವರು ರಿಯಾಲಿಟಿ ಟಿವಿ ಶೋ ಬಿಗ್ ಬಾಸ್‌ನ ಭಾಗವಾಗಿದ್ದರು. ಕೆಲವು ಸಿನಿಮಾಗಳನ್ನು ಮಾಡಿದ್ದರೂ ಅವರು ಹೀನಾಯವಾಗಿ ನೆಲಕಚ್ಚಿವೆ

89

ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಕಮಾಲ್ ರಶೀದ್ ಖಾನ್ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಆದಾರೂ ಕಮಾಲ್ ರಶೀದ್ ಖಾನ್ ಸಿನಿಮಾ ವ್ಯವಹಾರದಲ್ಲಿ ಯಶಸ್ಸು ಗಳಿಸಲು ವಿಫಲರಾದರು. ಅದಕ್ಕಾಗಿಯೇ ಅವರು ಬಾಲಿವುಡ್ ತೊರೆಯಲು ನಿರ್ಧರಿಸಿದರು.

99

ಈಗ ತಮ್ಮ ಲಕ್ಷುರಿ ಮನೆಯ ಫೋಟೋ ಶೇರ್ ಮಾಡಿದ್ದು ಯಬ್ಬಾ ಇವ್ರು ಇಷ್ಟೆಲ್ಲಾ ಆಸ್ತಿ ಮಾಡ್ಕೊಂಡಿದ್ದಾರಾ ಎಂಬಂತಿದೆ ಇವರ ಭವ್ಯ ಬಂಗಲೆ ಫೊಟೋಗಳು

click me!

Recommended Stories