ಸಲ್ಮಾನ್ ಖಾನ್ ಅವರ ತಾಯಿಯ ಹೆಸರು ಸುಶಿಲಾ ಚರಕ್. ಇವರು ಚಿತ್ರಕಥೆಗಾರ ಸಲೀಂ ಖಾನ್ ಅವರ ಮೊದಲ ಪತ್ನಿಯಾಗಿದ್ದು, ಮದುವೆಯ ನಂತರ ಸಲ್ಮಾ ಎಂದು ತಮ್ಮ ಹೆಸರು ಬದಲಾಯಿಸಿಕೊಂಡರು. ಸಲ್ಮಾನ್ ಖಾನ್ ಅವರಿಗೆ ತಾಯಿ ಅತ್ಯಂತ ಪ್ರಿಯ. ಅನೇಕ ಸಂದರ್ಭಗಳಲ್ಲಿ, ಅವರು ತನ್ನ ತಾಯಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಕಾಣಬಹುದು.