ನೀವು ನಿಮ್ಮ ಸಂಗಾತಿ ಜೊತೆ ನೋಡಲೇಬೇಕಾದ Romantic Movies

First Published | Jan 27, 2024, 5:28 PM IST

ಜನವರಿ ತಿಂಗಳು ಮುಗಿಯುತ್ತಾ ಬಂದಿದೆ. ಇನ್ನೇನು ಪ್ರೀತಿಯ ತಿಂಗಳು ಫೆಬ್ರವರಿ ಬರಲಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಸಂಗಾತಿ, ಪ್ರೀತಿ ಪಾತ್ರರ ಜೊತೆ ಯಾವ ರೋಮ್ಯಾಂಟಿಕ್ ಸಿನಿಮಾ ನೋಡಬಹುದು ಎಂದು ನೀವು ಯೋಚನೆ ಮಾಡ್ತಿದ್ರೆ… ಇಲ್ಲಿದೆ ನಿಮಗಾಗಿ ಬೆಸ್ಟ್ ರೊಮ್ಯಾಂಟಿಕ್ ಸಿನಿಮಾಗಳ ಲಿಸ್ಟ್. 
 

ಸಾಥಿಯಾ  (ಅಮೇಜಾನ್ ಪ್ರೈಮ್ ವಿಡಿಯೋ)
ವಿವೇಕ್ ಓಬೆರಾಯ್ ಮತ್ತು ರಾಣಿ ಮುಖರ್ಜಿ ನಟಿಸಿರುವ ಈ ಸಿನಿಮಾದಲ್ಲಿ ಪ್ರೀತಿಗೆ ಸಂಬಂಧಿಸಿದ ಎಲ್ಲವೂ ಇದೆ. ಇದೊಂದು ಸಂಪೂರ್ಣ ರೊಮ್ಯಾಂಟಿಕ್ ಸಿನಿಮಾ (romantic cinema). ಫಸ್ಟ್ ಲವ್ (First Love) ನಿಂದ ಆರಂಭವಾಗಿ, ಪ್ರೀತಿಸಿದವಳ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿ, ನಂತರ ಏನೇಲ್ಲಾ ಕಷ್ಟ ಅನುಭವಿಸಬೇಕಾಗಿ ಬರುತ್ತೆ ಅನ್ನೋದನ್ನು ಇದು ಹೇಳುತ್ತೆ.

ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ (ಅಮೇಜಾನ್ ಪ್ರೈಮ್ ವೀಡಿಯೋ)
ಕರಣ್ ಜೋಹರ್ (Karan Johar) ನಿರ್ದೇಶನದ ಆಲಿಯಾ ಭಟ್ ಮತ್ತು ರಣ್ ವೀರ್ ಸಿಂಗ್ ನಟಿಸಿರುವ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಚಿತ್ರ ತುಂಬಾನೆ ರೊಮ್ಯಾಂಟಿಕ್ ಆಗಿದ್ದು, ಜೊತೆಗೆ ಎಂಟರ್’ಟೇನಿಂಗ್ ಕೂಡ ಆಗಿದೆ. ನಿಮ್ಮ ಸಂಗಾತಿ ಜೊತೆ ನೀವಿದನ್ನು ನೋಡಬಹುದು. 

Tap to resize

ಜಬ್ ವಿ ಮೆಟ್ (ಅಮೇಜಾನ್ ಪ್ರೈಮ್ ವೀಡಿಯೋ)
ಮಾತಿನ ಮಲ್ಲಿ ಗೀತಾ ಮತ್ತು ಶಿಸ್ತಿನ ಸಿಪಾಯಿಯಾಗಿರುವ ಆದಿತ್ಯ ಜೋಡಿ ಎಂದಿಗೂ ಹಳೆಯದಾಗಲು ಸಾಧ್ಯವೇ ಇಲ್ಲ. ಕರೀನಾ ಕಪೂರ್ ಮತ್ತು ಶಾಹೀದ್ ಕಪೂರ್ ನಟಿಸಿರುವ ಜಬ್ ವಿ ಮೆಟ್ (Jab we met) ಚಿತ್ರ ನೋಡುವುದೇ ಒಂಥರಾ ಖುಷಿ. 

ಲೂಟೇರಾ (ಡಿಸ್ನಿ + ಹಾಟ್ ಸ್ಟಾರ್)
ರಣ್ ವೀರ್ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ (Sinakshi Sinha) ಅಭಿನಯಿಸಿದ ಲೂಟೇರಾ ಸಿನಿಮಾ ಒಂದು ಸುಂದರವಾದ ಪ್ರೇಮಕಾವ್ಯ. ಆರ್ಕಿಯೋಲಜಿಸ್ಟ್ ಎಂದು ಹೇಳಿಕೊಂಡು ಬರುವ ಹುಡುಗನೊಬ್ಬ, ಮದುವೆಯಾಗುವ ಪ್ರಾಮಿಸ್ ಮಾಡಿ, ಬಳಿಕ ಮೋಸ ಮಾಡಿ, ದುಡ್ಡು ಹೊಡೆದು ಹೋಗುತ್ತಾನೆ, ನಂತರ ಏನಾಗುತ್ತದೆ ಅನ್ನೋದೆ ಸ್ಟೋರಿ. 

ಯೇ ಜವಾನಿ, ಯೇ ದಿವಾನಿ (ನೆಟ್ ಫ್ಲಿಕ್ಸ್)
ನೀವು ಒಂದು ರೊಮ್ಯಾಂಟಿಕ್ ಮತ್ತು ಅಡ್ವೆಂಚರಸ್ ಸಿನಿಮಾ ನೋಡಲು ಬಯಸಿದರೆ ಯೇ ಜವಾನಿ, ಯೇ ದಿವಾನಿ ಸಿನಿಮಾ ಬೆಸ್ಟ್. ಈ ಸಿನಿಮಾದಲ್ಲಿ ನೀವು ನಿಮ್ಮನ್ನೆ ನೋಡಿದಂತಾಗುತ್ತೆ, ಜೊತೆಗೆ ಬೇರೆ ಬೇರೆ ರೀತಿಯ ಪ್ರೀತಿಯ ಬಗ್ಗೆ ತಿಳಿಸಲಾಗಿದೆ.

ಲುಕ್ಕ ಚುಪ್ಪಿ (ನೆಟ್ ಫ್ಲಿಕ್ಸ್)
ಸಣ್ಣ ಗ್ರಾಮ ಒಂದರಲ್ಲಿ ಲಿವ್ ಇನ್ ರಿಲೇಶನ್ ಶಿಪ್ (live in relationship) ನಲ್ಲಿದ್ರೆ ಏನೆಲ್ಲಾ ಆನಾಹುತ ಆಗುವ ಸಾಧ್ಯತೆ ಇದೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ನಟಿಸಿದ್ದಾರೆ. 

ದ ಲಂಚ್ ಬಾಕ್ಸ್  (ನೆಟ್ ಫ್ಲಿಕ್ಸ್)
ಇದು ಪ್ರತಿಯೊಬ್ಬರು ನೋಡಲೇಬೇಕಾದ ಒಂದು ಪ್ರಬುದ್ಧ ಪ್ರೇಮ ಕಥೆ. ಇದೇನು ಹೊಸ ಜನರೇಶನ್ ಲವ್ ಸ್ಟೋರಿ ಅಲ್ಲ, ಆದರೆ ಇರ್ಫಾನ್ ಖಾನ್ ಮತ್ತು ನಿಮ್ರತ್ ಕೌಟ್ ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರ. ಈ ಚಿತ್ರದ ಕತೆ ಮುಂಬೈನ ಖ್ಯಾತ ಡಬ್ಬಾವಾಲಗಳ ಮೇಲೆ ನಿಂತಿದೆ. ಒಬ್ಬರಿಗೆ ತಲುಪಬೇಕಾದ ಡಬ್ಬ ಬೇರೆಯವರಿಗೆ ತಲುಪಿ ನಂತರ ಏನಾಗುತ್ತೆ ಅನ್ನೋದೆ ಸ್ಟೋರಿ. 
 

ಲವ್ ಆಜ್ ಕಲ್ (ಅಮೇಜಾನ್ ಪ್ರೈಮ್ ವಿಡಿಯೋ)
ಇದೊಂದು ಓಲ್ಡ್ ಸ್ಕೂಲ್ ರೋಮ್ಯಾನ್ಸ್ ಇರೋ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಸೈಫ್ ಆಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

Latest Videos

click me!