ಹೇಗಿದೆ ಜಾಹ್ನವಿ ಕಪೂರ್ 65 ಕೋಟಿ ಬಂಗಲೆ? ಮೂಲೆ ಮೂಲೆಯಲ್ಲಿದ್ದಾರೆ ಶ್ರೀದೇವಿ!

First Published | Jan 27, 2024, 4:55 PM IST

ಜಾಹ್ನವಿ ಕಪೂರ್ ಮುಂಬೈನಲ್ಲಿ ಖರೀದಿಸಿದಂತಹ ಐಷಾರಾಮಿ ಡ್ಯುಪ್ಲೆಕ್ಸ್ ಬಂಗಲೆ ಹೇಗಿದೆ ನೋಡಿ. 65 ಕೋಟಿಯ ಈ ಬಂಗಲೆಯಲ್ಲಿ ಎಲ್ಲವೂ ಇದೆ. ಇಲ್ಲಿದೆ ಜಾಹ್ನವಿ ಮನೆಯ ಒಳಗಿನ ಸುಂದರ ಫೋಟೋಗಳು. 
 

ಜಾಹ್ನವಿ ಕಪೂರ್ (Jahnvi Kapoor) ಮುಂಬೈನ ಐಷಾರಾಮಿ ಡ್ಯುಪ್ಲೆಕ್ಸ್‌ನಲ್ಲಿ ವಾಸಿಸುತ್ತಿದ್ದಾರೆ, ಅದನ್ನು ಅವರು ಇತ್ತೀಚೆಗೆ ಖರೀದಿಸಿದ್ದಾರೆ. ಜಾನ್ವಿ ತನ್ನ ಜುಹು ಅಪಾರ್ಟ್ಮೆಂಟ್ ಅನ್ನು ರಾಜ್ ಕುಮಾರ್ ರಾವ್ ಗೆ ಮಾರಿದರು. ಈಗ ನಟಿ ಪಾಲಿ ಹಿಲ್ ನ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಜಾಹ್ನವಿ ಕಪೂರ್ 3 ಲಕ್ಷ ರೂ.ಸ್ಟ್ಯಾಂಪ್ ಡ್ಯೂಟಿಯೊಂದಿಗೆ 65 ಕೋಟಿ ರೂ.ಗೆ ಮನೆಯನ್ನು ಖರೀದಿಸಿದ್ದಾರೆ. ಈ ಸುಂದರ ಮನೆ ಹೇಗಿದೆ ನೋಡೋಣ. 
 

ಜಾಹ್ನವಿ ಕಪೂರ್ ಅವರ ಮನೆಯನ್ನು ಬಿಳಿ ಥೀಮ್ ನಿಂದ ತಯಾರಿಸಲಾಗಿದೆ, ಇದು ಆಧುನಿಕ ಮತ್ತು ಕ್ಲಾಸಿಕ್ ಒಳಾಂಗಣ (clasic interior design) ವಿನ್ಯಾಸಕ್ಕೆ ಉದಾಹರಣೆ. ಪಾಲಿಯಲ್ಲಿ ಈ ಅಪಾರ್ಟ್ಮೆಂಟ್ ಖರೀದಿಸಿದ ನಂತರ, ಜಾನ್ವಿ ಇದೀಗ ರಣಬೀರ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಸಂಜಯ್ ದತ್ ಮೊದಲಾದ ತಾರೆಯರ ಮನೆಯ ಬಳಿಯೇ ಬಂದಿದ್ದಾರೆ. ಅಂದ್ರೆ ಈ ನಟರ ಬಂಗಲೆಯ ಪಕ್ಕವೇ ಜಾನ್ವಿ ವಾಸಿಸುತ್ತಾರೆ. 

Tap to resize

ಪಾಲಿ ಹಿಲ್ ನಲ್ಲಿರುವ Kubelisque Building ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ನಿರ್ಮಿಸಲಾದ ಈ ಮನೆಯಲ್ಲಿ ಖಾಸಗಿ ಈಜುಕೊಳ (Private Swimming Pool) ಮತ್ತು ದೊಡ್ಡ ತೆರೆದ ಉದ್ಯಾನವಿದೆ. ಈ ಉದ್ಯಾನದಲ್ಲಿ ಓಪನ್ ಕಿಚನ್ (Oper Kitchen) ಮತ್ತು ಬಾರ್ ಪ್ರದೇಶವೂ ಇದೆ, ಅಲ್ಲಿ ಕಪೂರ್ ಗಳು ಪಾರ್ಟಿ ಮಾಡುತ್ತಿರುತ್ತಾರೆ. ಈ ಮನೆಗೆ ಕೂಲ ಲುಕ್ ನೀಡುವ ಮಿಲಿಮಲಿಸ್ಟಿಕ್ ಬಣ್ಣವನ್ನು ಬಳಿಯಲಾಗಿದೆ. 
 

ತನ್ನ ಮನೆಯಲ್ಲಿ ಬಣ್ಣ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಕಲಾಕೃತಿಗಳು ಪ್ರಮುಖ ಕಾರಣವಾಗಿವೆ ಎನ್ನುತ್ತಾರೆ ಜಾನ್ವಿ. ಮನೆಯಲ್ಲಿರುವ ಎಲ್ಲಾ ಕಲಾಕೃತಿಗಳು ಶ್ರೀದೇವಿಯ ಆಯ್ಕೆಯಾಗಿದೆ. ತನ್ನ ತಾಯಿ ಆಯ್ಕೆ ಮಾಡಿದ ಈ ವರ್ಣಚಿತ್ರಗಳು ಮತ್ತು ಕಲಾಕೃತಿಗಳು ಈ ಮನೆಯಲ್ಲಿವೆ, ಅದು ಶ್ರೀದೇವಿಯೇ ಮನೆಯಲ್ಲಿರುವ ಫೀಲ್ ನೀಡುತ್ತಂತೆ. 
 

ಇನ್ನ್ ಜಾಹ್ನವಿ ಕಪೂರ್ ಮನೆಯ ನಿರ್ಮಾಣಕ್ಕೆ ಬಿಳಿ ಅಮೃತಶಿಲೆಯನ್ನು ಇಲ್ಲಿ ಸಾಕಷ್ಟು ಬಳಸಲಾಗಿದೆ ಎಂದು ಜಾಹ್ನವಿ ಹೇಳುತ್ತಾರೆ. ಬಿಳಿ ಅಮೃತಶಿಲೆಯನ್ನು ಬಳಸುವುದರ ದೊಡ್ಡ ಪ್ರಯೋಜನವೆಂದರೆ ನೀವು ಮನೆಯಲ್ಲಿ ಯಾವುದೇ ಬಣ್ಣದ ವಸ್ತುಗಳನ್ನು ಅಲಂಕರಿಸಬಹುದು. ಏಕೆಂದರೆ ಬಿಳಿ ಬಣ್ಣವು ಇತರ ಎಲ್ಲಾ ಬಣ್ಣಗಳಿಗೆ ಪೂರಕವಾಗಿದೆ.
 

ಜಾಹ್ನವಿ ತನ್ನ ಮನೆಯ ಲಿವಿಂಗ್ ಏರಿಯಾವನ್ನು ಹೆಚ್ಚು ಇಷ್ಟಪಡುತ್ತಾರೆ. ಜಾಹ್ನವಿ ಪ್ರಕಾರ, ನಟಿ ಈ ಮನೆಗೆ ಬಂದಾಗ, ಅವರು ತಮ್ಮ ಮೊದಲ ದಿನವನ್ನು ಲಿವಿಂಗ್ ರೂಮ್ ನ ಮಂಚದ ಮೇಲೆ ಕಳೆದರಂತೆ. ಮನೆಯ ಈ ಭಾಗವು ಮರದ ಫ್ಲೋರಿಂಗ್ ಹೊಂದಿದೆ, ಇದು ಉಳಿದ ಪ್ರದೇಶಗಳಿಗಿಂತ ಹೆಚ್ಚು ಬೆಚ್ಚಗಿರುತ್ತದೆ
 

ಅಲ್ಲದೆ,  ಲಿವಿಂಗ್ ರೂಮ್ ನಲ್ಲಿ (living room) ದೊಡ್ಡದಾದ ಕಿಟಕಿ ಇದೆ, ಅದು ನೇರವಾಗಿ ಪ್ರಕೃತಿಯ ಹಸಿರನ್ನು ತೋರಿಸುತ್ತದೆ. ಈ ದೊಡ್ಡ ಕಿಟಕಿಯಿಂದಾಗಿ, ಈ ಸಣ್ಣ ಪ್ರದೇಶವೂ ತುಂಬಾ ದೊಡ್ಡದಾಗಿ ಕಾಣುತ್ತದೆ., ಈ ಗಾಜಿನ ಕಿಟಕಿಯು ಮೂಲಕ ಪ್ರಕೃತಿ ಸೌಂದರ್ಯ ಸವಿಯಬಹುದು. 
 

ಎರಡನೇ ಮಹಡಿಯಲ್ಲಿರುವ ಕಾರಿಡಾರ್ ಪ್ರದೇಶವನ್ನು ಜಾಹ್ನವಿ ಕಪೂರ್ ಫೋಟೋ ವಾಲ್ (Photo wall) ಆಗಿ ಬಳಸಿದ್ದಾರೆ. ಇದು ಈ ಮನೆ ಮನೆಯ ಎರಡು ಭಾಗಗಳನ್ನು ಸಂಪರ್ಕಿಸುತ್ತದೆ, ಹಾಗಾಗಿ ಈ ಕಾರಿಡಾರ್ ಅನ್ನು ಖಾಲಿ ಬಿಡುವ ಬದಲು ವಿವಿಧ ರೀತಿಯ ಚಿತ್ರಗಳನ್ನು ಜೋಡಿಸಿ ಇಡಲಾಗಿದೆ. 
 

ಜಾಹ್ನವಿಯ ಈ ಮನೆಯಲ್ಲಿ ಈ ಚಿತ್ರಕಲೆ ಅತ್ಯಂತ ವಿಶೇಷವಾಗಿದೆ. ಕೆಲವೊಂದು ಚಿತ್ರಗಳನ್ನು ಶ್ರೀದೇವಿ ಸ್ವತಃ ತಯಾರಿಸಿದ್ದಾರೆ. ಆದ್ದರಿಂದ, ಇದನ್ನು ಮನೆಯ ಪ್ರಮುಖ ಭಾಗದಲ್ಲಿ ಫ್ರೇಮ್ ಮಾಡಿ ಇಡಲಾಗಿದೆ. ಶ್ರೀದೇವಿ ಈ ಇಡೀ ಮನೆಯಲ್ಲಿ ವಾಸಿಸುತ್ತಿದ್ದಾರೆ ಅನ್ನುವ ರೀತಿಯಲ್ಲಿ ಶ್ರೀದೇವಿ (Sridevi) ಇಷ್ಟಪಡುವ ವಸ್ತುಗಳನ್ನು ಮನೆಯ ಮೂಲೆ ಮೂಲೆಯಲ್ಲಿಟ್ಟು ಮನೆಯ ಇಂಟೀರಿಯರ್ ಮಾಡಲಾಗಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ. 
 

Latest Videos

click me!