ಮೊದಲ ಮಗಳನ್ನು 24ನೇ ವಯಸ್ಸಿಗೇ ದತ್ತು ತೆಗೆದುಕೊಂಡ ಸುಶ್ಮಿತಾ ಸೇನ್; ವಿಶ್ವಸುಂದರಿಗೆ ಎದುರಾಗಿತ್ತು ಹಲ ಸವಾಲು

First Published Jan 27, 2024, 4:02 PM IST

ಇತ್ತೀಚಿನ ,ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಒಂಟಿಯಾಗಿಯೇ ಉಳಿಯುವ, ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತನ್ನ ನಿರ್ಧಾರದ ಬಗ್ಗೆ ಮಾತಾಡಿದ್ದಾರೆ. ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿದಾಗ ಎದುರಾದ ಅನಿರೀಕ್ಷಿತ ಅಡೆತಡೆಗಳ ಬಗ್ಗೆ ಕೂಡಾ ಅಚ್ಚರಿಯ ವಿಷಯ ಹೇಳಿದ್ದಾರೆ.

ತಾಯಿ ಮಗುವಿನ ಬಾಂಧವ್ಯ ಕರುಳ ಸಂಬಂಧ ಎನ್ನುತ್ತಾರೆ. ಆದರೆ, ಇದು ಹೃದಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಸಾಬೀತು ಮಾಡಿದ್ದಾರೆ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್. 
 

24ರ ವಯಸ್ಸಿನಲ್ಲೇ ಸುಶ್ಮಿತಾ ಯಶಸ್ವಿ ಮಹಿಳೆಯಾಗಿದ್ದೂ, ಮದುವೆಯಾಗದೆ ಮಗು ದತ್ತು ತೆಗೆದುಕೊಳ್ಳುವ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರು. ತಮ್ಮ ತಾಯಿಯ ವಿರೋಧದ ನಡುವೆಯೂ ರೀನಿಯನ್ನು ದತ್ತು ತೆಗೆದುಕೊಂಡರು.

ದತ್ತು ಕೇಂದ್ರದಲ್ಲಿ ರೀನಿಯನ್ನು ಆಯ್ಕೆ ಮಾಡಿಕೊಂಡಾಗ ಆಕೆಗೆ ಆರೋಗ್ಯ ಸಮಸ್ಯೆಗಳಿರುವುದನ್ನು ತಿಳಿಸಲಾಗಿತ್ತು. ಆದರೂ, ಸುಶ್ಮಿತಾ ಸೇನ್  ಅವಳೇ ಬೇಕೆಂದು ಆಯ್ಕೆ ಮಾಡಿಕೊಂಡರು. 

21ನೇ ವಯಸ್ಸಿನಲ್ಲೇ ಎಲ್ಲ ರೀತಿಯಲ್ಲೂ ಆರೋಗ್ಯವಂತವಾಗಿದ್ದ ಸುಶ್ಮಿತಾ ಮಗುಗಾಗಿ ಅರ್ಜಿ ಸಲ್ಲಿಸಿದ್ದರು. ಆಗ ಅವರಿಗೆ ಸಿಂಗಲ್, ಹೆಲ್ದಿ ಎಂಬುದೆಲ್ಲ ದೊಡ್ಡ ಸಮಸ್ಯೆಯಾಗಿ ಅಡ್ಡಿಯಾಗಿದ್ದವು. 

ನಂತರ ರೀನಿಯನ್ನು ಇವರು ನೋಡಿಕೊಳ್ಳುತ್ತಿದ್ದ 6 ತಿಂಗಳ ಬಳಿಕ ಹೈ ಕೋರ್ಟ್‌ನಲ್ಲಿ ಮಗುವನ್ನು ದತ್ತು ಕೊಡಬಹುದೇ ಎಂಬ ಚರ್ಚೆ ನಡೆದಿತ್ತು. ಅದುವರೆಗೂ 29 ವರ್ಷದ ವಿಚ್ಚೇದಿತ ಮಹಿಳೆಯೇ ಅತಿ ಚಿಕ್ಕ ವಯಸ್ಸಿನ ಮಹಿಳೆ ಮಗು ದತ್ತು ಪಡೆದ ಹೆಸರಿನಲ್ಲಿದ್ದರು. 

ಕೋರ್ಟ್‌ನಲ್ಲಿ ಜಜ್ ಸುಶ್ಮಿತಾಳ ತಂದೆಗೆ ಪ್ರಶ್ನಿಸಿದರಂತೆ, ನಿಮ್ಮ ಮಗಳ ಈ ನಿರ್ಧಾರದಿಂದ ಆಕೆಯ ವಿವಾಹ ಸಮಸ್ಯೆಯಾಗುತ್ತದೆ, ತೊಂದರೆಯಿಲ್ಲವೇ ಎಂದು. ಆಗ ಸೇನ್ ತಂದೆ, ನಾನು ಮಗಳನ್ನು ಮತ್ತೊಬ್ಬರ ಪತ್ನಿಯಾಗಿರಲಷ್ಟೇ ಬೆಳೆಸಿಲ್ಲ. ಅವಳ ಹೃದಯ ಹೇಳಿದಂತೆ ಮಾಡಲಿ ಎಂದರಂತೆ. 

ಕಾನೂನಿನ ಪ್ರಕಾರ ದತ್ತು ತೆಗೆದುಕೊಳ್ಳುವಾಗ ಮಗುವಿನ ಹೆಸರಲ್ಲಿ ತಂದೆಯಾಗುವವನು ಅರ್ಧ ಆಸ್ತಿ ಬರೆಯಬೇಕು. ಆದರೆ, ಇಲ್ಲಿ ಸುಶ್ಮಿತಾ ತಂದೆಯೇ ರೀನಿಗಾಗಿ ಈ ಎಲ್ಲ ಕೆಲಸ ಪೂರೈಸಿದರು.
 

ಸುಶ್ಮಿತಾಳ ತಂದೆಯ ದೊಡ್ಡ ಮನಸ್ಸು, ಮಗಳ ಗಟ್ಟಿಯಾದ ನಿರ್ಧಾರ 3 ಅನಾಥ ಮಕ್ಕಳ ಬಾಳಿಗೆ ಬೆಳಕಾಯಿತು. ಅಷ್ಟೇ ಅಲ್ಲ, ಸುಶ್ಮಿತಾ ದತ್ತು ಪಡೆದ ಮೇಲಷ್ಟೇ, ಭಾರತದಲ್ಲಿ ದತ್ತು ಪ್ರಮಾಣ ಶೇ.40ರಷ್ಟು ಜಾಸ್ತಿಯಾಗಿತ್ತು. 

ಸುಶ್ಮಿತಾ ಸೇನ್ 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಪಡೆದರು. ಅವರು 1996ರ ಚಲನಚಿತ್ರ ದಸ್ತಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2000ನೇ ಇಸವಿಯಲ್ಲಿ ರೀನಿಯನ್ನು ದತ್ತು ಪಡೆವ ನಿರ್ಧಾರ ಅವರ ವೈಯಕ್ತಿಕ ಹಾಗೂ ಪ್ರೊಫೆಶನಲ್ ಲೈಫ್‌ಗೆ ಸಮಸ್ಯೆ ತರುತ್ತದೆ ಎಂಬ ಎಚ್ಚರಿಕೆಯ ನಡುವೆಯೂ ಅವರು ಮನಸ್ಸು ಹೇಳಿದ ಮಾತು ಕೇಳಿದರು. 2010ರಲ್ಲಿ ಅಲಿಸಾಳನ್ನು ದತ್ತು ತೆಗೆದುಕೊಂಡರು.

ಸುಶ್ಮಿತಾ ಮಗುವನ್ನು ಅಡಾಪ್ಟ್ ಮಾಡಿಕೊಂಡ ಮೇಲೆಯೇ ಸಿಂಗಲ್ ಮದರ್ ಮಗುವನ್ನು ದತ್ತು ಪಡೀಬಹುದು ಅಂತ ಕಾನೂನು ಬಂದಿತು. ಮೊದಲ ಮಗಳಿಗೆ ಪಾಸ್ಪೋರ್ಟ್ ಕೊಡಲು ತಂದೆ ಇಲ್ಲ ಎನ್ನುವ ಕಾರಣದಿಂದ ನಿರಾಕರಿಸಿದಾಗ, ಅಥಾರಿಟಿ ವಿರುದ್ಧ ಕೋರ್ಟಿಗೆ ಹೋಗಿದ್ದರು ಈ ವಿಶ್ವಸುಂದರಿ. 

ಇಂದಿಗೂ ಸುಶ್ಮಿತಾ ತಮ್ಮ ನಿರ್ಧಾರದ ಬಗ್ಗೆ ಸಂತೋಷದಿಂದಿದ್ದಾರೆ. ಕೇವಲ ಬಾಹ್ಯ ಸೌಂದರ್ಯವಲ್ಲ, ಸುಶ್ಮಿತಾರ ಆಂತರಿಕ ಸೌಂದರ್ಯ ಅವರನ್ನು ಹೆಚ್ಚು ಎತ್ತರದಲ್ಲಿ ನಿಲ್ಲಿಸುತ್ತದೆ. 
 

2023ರಲ್ಲಿ ಕಡೆಯದಾಗಿ 50 ವರ್ಷದ ಸುಶ್ಮಿತಾ ತಾಲಿ, ಆರ್ಯ- 3 ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ನೋ ಪ್ರಾಬ್ಲಂ, ಮೈನೆ ಪ್ಯಾರ್ ಕ್ಯೂ ಕಿಯಾ, ಮೈ ಐಸಾ ಹಿ ಹೂಂ, ಮೈ ಹೂಂ ನಾ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಸುಶ್ಮಿತಾ ನಟಿಸಿದ್ದಾರೆ. 

ಕಳೆದ ವರ್ಷ ಲಲಿತ್ ಮೋದಿ ಜೊತೆ ಸುಶ್ಮಿತಾ ಇರುವ ಫೋಟೋಗಳು ಕಾಂಟ್ರೋವರ್ಸಿಗೆ ಕಾರಣವಾಗಿದ್ದವು. ಆದರೆ, ಈ ಸಂದರ್ಭದಲ್ಲಿ ತಾನು ಸಿಂಗಲ್ ಎಂಬುದರ ಹೊರತಾಗಿ ಹೆಚ್ಚು ಮಾತನಾಡದೆ ನಟಿ ಡಿಗ್ನಿಫೈಯ್ಡ್ ಆಗಿ ನಡೆದುಕೊಂಡರು. 

click me!