ಕೊರಳಲ್ಲಿ ಮಂಗಳಸೂತ್ರ ಹಣೆಯಲ್ಲಿ ಸಿಂಧೂರ! ಹುಮಾ ಖುರೇಷಿ ಮದುವೆಯಾದ್ರಾ?
First Published | Mar 2, 2022, 6:24 PM ISTಹುಮಾ ಖುರೇಷಿ (Huma Qureshi) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರಿಯರಾಗಿದ್ದಾರೆ. ನಟಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ವಲಿಮೈ (Valimai) ಚಿತ್ರದಿಂದ ಅವರು ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಹುಮಾ ಸೌತ್‌ನ ಸೂಪರ್‌ಸ್ಟಾರ್ ಅಜಿತ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ Actin Roleನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಹುಮಾ ಅವರ ಕೆಲಸಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಹುಮಾ ತನ್ನ ಮುಂದಿನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಬಾಂದ್ರಾದಲ್ಲಿ ಹುಮಾ ಖುರೇಷಿ ಕಾಣಿಸಿಕೊಂಡಾಗ, ಎಲ್ಲರೂ ಅವರನ್ನು ನೋಡಿ ಆಶ್ಚರ್ಯಚಕಿತರಾದರು. ಹುಮಾ ಅವರ ಹಣೆಯಲ್ಲಿ ಸಿಂಧೂರವನ್ನು ಮತ್ತು ಕೊರಳಲ್ಲಿ ಮಂಗಳಸೂತ್ರವನ್ನು ಧರಿಸಿರುವುದನ್ನು ನೋಡಿದರೆ ಅವರು ಮದುವೆಯಾಗಿರುವ ಹಾಗೇ ತೋರುತ್ತದೆ.