ನೆಪೊಟಿಸಂ ಆಯ್ತು: ಬಾಲಿವುಡ್‌ನಲ್ಲಿ ವರ್ಣಭೇದ ನೀತಿ ಇದೆ ಎಂದ ನವಾಝುದ್ದೀನ್ ಸಿದ್ದಿಕಿ

Published : Oct 13, 2021, 04:48 PM ISTUpdated : Oct 13, 2021, 04:50 PM IST

ನೆಪೊಟಿಂಗಿಂತ ಹೆಚ್ಚಿದೆ ರೇಸಿಸಂ  ಬಾಲಿವುಡ್‌ನಲ್ಲಿ ವರ್ಣಭೇದ ನೀತಿ ಬಗ್ಗೆ ನವಾಝುದ್ದೀನ್ ಮಾತು

PREV
17
ನೆಪೊಟಿಸಂ ಆಯ್ತು: ಬಾಲಿವುಡ್‌ನಲ್ಲಿ ವರ್ಣಭೇದ ನೀತಿ ಇದೆ ಎಂದ ನವಾಝುದ್ದೀನ್ ಸಿದ್ದಿಕಿ

ಭಾರತೀಯ ಚಿತ್ರರಂಗದಲ್ಲಿ ಸುಶಾಂತ್ ಸಿಂಗ್ ರಜಪೂತ್  ಸಾವಿನ ನಂತರ ಸ್ವಜನ ಪಕ್ಷಪಾತದ ಚರ್ಚೆ ಜೋರಾಗಿದೆ. ಆಗೊಮ್ಮೆ ಈಗೊಮ್ಮೆ ನಟ, ನಟಿಯರು ಈ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಈಗ ನಟ ನವಾಜುದ್ದೀನ್ ಸಿದ್ದಿಕಿ ಈಗ ಬಾಲಿವುಡ್ ಬಗ್ಗೆ ಮತ್ತೊಂದು  ನಿರ್ಣಾಯಕ ಪ್ರಶ್ನೆಯನ್ನು ಎತ್ತಿದ್ದಾರೆ.

27

ಸ್ವಜನ ಪಕ್ಷಪಾತಕ್ಕಿಂತ ಹೆಚ್ಚಾಗಿ, ಹಿಂದಿ ಚಲನಚಿತ್ರೋದ್ಯಮವು ವರ್ಣಭೇದ ನೀತಿಯ ಸಮಸ್ಯೆಯನ್ನು ಹೊಂದಿದೆ ಎಂದು ಅದರ ವಿರುದ್ಧ ಹೋರಾಡುತ್ತಿರುವ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ.

37

ಇತ್ತೀಚಿನ ಸಂದರ್ಶನದಲ್ಲಿ ನವಾಜುದ್ದೀನ್ ತನ್ನ 'ಸೀರಿಯಸ್ ಮ್ಯಾನ್' ಸಹ-ನಟಿ ಇಂದಿರಾ ತಿವಾರಿ ಅವರನ್ನು ಚಲನಚಿತ್ರ ನಿರ್ಮಾಪಕರು ಇನ್ನೂ ಸಿನಿಮಾದಲ್ಲಿ ಮುಖ್ಯ ಪಾತ್ರಗಳಿಗಾಗಿ ಆಯ್ಕೆ ಮಾಡಲಿಲ್ಲ ಎಂಬುದರ ಕುರಿತು ಮಾತನಾಡಿದ್ದಾರೆ.

47

ಸುಧೀರ್ ಸಾಬ್ (ಸುಧೀರ್ ಮಿಶ್ರಾ-ಸೀರಿಯಸ್ ಮೆನ್ ನಿರ್ದೇಶಕ) ಸಿನಿಮಾ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರ ಚಿಂತನೆಯ ಪ್ರಕ್ರಿಯೆಯು ಬಹಳ ಪ್ರಾಯೋಗಿಕವಾಗಿದೆ. ಅವರು ಅವಳನ್ನು ನಾಯಕಿಯನ್ನಾಗಿ ಮಾಡಿದರು. ನಾನು ಅದನ್ನು ಖಾತರಿಪಡಿಸುತ್ತೇನೆ.

57

ನಮ್ಮ ಉದ್ಯಮದಲ್ಲಿ ಹೆಚ್ಚು ವರ್ಣಭೇದ ನೀತಿ ಇದೆ. ಆಕೆ ಮತ್ತೊಮ್ಮೆ ನಾಯಕಿಯಾಗಿ ನಟಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಸುಧೀರ್ ಮಿಶ್ರಾ ಅದನ್ನು ಮಾಡಿದರು ಎಂದಿದ್ದಾರೆ.

ಸುಶಾಂತ್ ಘಟನೆ ನಂತರವೂ ಚಿತ್ರರಂಗದವರಿಗೆ ಬುದ್ಧಿ ಬಂದಿಲ್ಲ: ವಿವೇಕ್ ಒಬೆರಾಯ್

67

ಇದು ಬಹಳ ಮುಖ್ಯ. ನಾನು ಚರ್ಮದ ಬಣ್ಣವನ್ನು ಕುರಿತು ಕೂಡ ಮಾತನಾಡುವುದಿಲ್ಲ. ಉದ್ಯಮದಲ್ಲಿ ಒಂದು ಪಕ್ಷಪಾತವಿದೆ. ನಾನು ಚಿಕ್ಕವನಾಗಿದ್ದರಿಂದ ಮಾತ್ರ ನಾನು ಅನೇಕ ವರ್ಷಗಳಿಂದ ತಿರಸ್ಕರಿಸಲ್ಪಟ್ಟಿದ್ದೇನೆ. ಆದರೂ ನಾನು ಈಗ ದೂರು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

77

ಯಾವಾಗಲೂ ಅಭಿಮಾನಿಗಳಿಂದ ಪ್ರಶಂಸೆ ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯುವ ನಟ ನವಾಝುದ್ದೀನ್ ಅವರ 'ಸೀರಿಯಸ್ ಮೆನ್' ಸಿನಿಮಾ 2021 ರ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳ ಭಾಗವಾಗಿ ನಾಮನಿರ್ದೇಶನಗೊಂಡಾಗ ಸುದ್ದಿಯಾಯಿತು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories