Lakme Fashion Week 2021 : ನೆಟ್ಟಿಗರಿಂದ ಕರೀನಾ ಟ್ರೋಲ್!

Suvarna News   | Asianet News
Published : Oct 13, 2021, 04:46 PM IST

ಇತ್ತೀಚೆಗೆ Lakme Fashion Week 2021 ಅನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಫ್ಯಾಷನ್ ವೀಕ್‌ನ ರ‍್ಯಾಂಪ್‌ನಲ್ಲಿ ಅನೇಕ ಪ್ರಸಿದ್ಧ ಮಾಡೆಲ್‌ಗಳ ಜೊತೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕಾಣಿಸಿಕೊಂಡರು. ವಾರದ ಅಂತಿಮ ಶೋನಲ್ಲಿ ಕರೀನಾ ಕಪೂರ್ (Kareena Kapoor) ಶೋಸ್ಟಾಪರ್ ಆಗಿದ್ದರು. ಈ ಸಂದರ್ಭದಲ್ಲಿ, ಕರೀನಾ ಕಪೂರ್ ಖಾನ್ ಬಿಳಿ ಬಣ್ಣದ ಫ್ಲೋರ್‌ ಲೆಂತ್‌ ಸಿಮರ್ ಗೌನ್‌ನಲ್ಲಿ ಕಾಣಿಸಿಕೊಂಡರು. ಅವರು ತಮ್ಮ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದಾರೆ. ಕರೀನಾಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿದ್ದವೆ. ಆದರೆ, ಅನೇಕರಿಗೆ ಆಕೆಯ ಲುಕ್‌ ಮತ್ತು ಸ್ಟೈಲ್‌ ಇಷ್ಟವಾಗಲಿಲ್ಲ. ಕರೀನಾರ ಈ ಲುಕ್‌ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದೆ.  ಅಂದಹಾಗೆ, ಕರೀನಾರ ಜೊತೆ ಮಲೈಕಾ ಅರೋರಾ (Malaika Arora), ಸೋಹಾ ಅಲಿ ಖಾನ್ (Soha Ali Khan), ಚಿತ್ರಾಂಗದಾ ಸಿಂಗ್  (Chitrangada Singh) ರ‍್ಯಾಂಪ್ ಮೇಲೆ ನಡೆದರು.

PREV
19
Lakme Fashion Week 2021 : ನೆಟ್ಟಿಗರಿಂದ ಕರೀನಾ ಟ್ರೋಲ್!
Kareena

ಲ್ಯಾಕ್ಮೆ ಫ್ಯಾಶನ್ ವೀಕ್ 2021 (Lakme Fashion Week-2021) ಕರೀನಾ ಕಪೂರ್ ಅವರ ಮುಖ ಮತ್ತು ಡ್ರೆಸ್‌ಗಾಗಿ ಟ್ರೋಲ್ (Troll) ಆಗಿದ್ದಾರೆ. ಕರೀನಾ ಕಪೂರ್‌ ಕೆನ್ನೆಗಳನ್ನು ನೋಡಿ, 'ಆಕೆಯ ಎರಡು ಕೆನ್ನೆಗಳಿಗೆ ಯಾರೋ ಹೊಡೆದಿದ್ದಾರೆ. ಅದರಿಂದ ಹಾಗೆ ಕಾಣುತ್ತಿದೆ,'ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

29
Kareena

'ಎಂತಹ ಕೆಟ್ಟ ಲುಕ್‌, ಮುಖದಲ್ಲಿ ಯಾವುದೇ ಹೊಳಪು ಇಲ್ಲ' ಮತ್ತು 'ನೀವು ಹೂವಿನ ಪಾಟ್‌ ಧರಿಸಿದ್ದೀರಾ?'ಎಂದು ಹೀಗೆ ಹಲವು ತರದ ಕಾಮೆಂಟ್‌ಗಳನ್ನು ಮಾಡುವ ಮೂಲಕ ಕರೀನಾರ ಲುಕ್‌ ಮತ್ತು ಔಟ್‌ಫಿಟ್‌ ಅನ್ನು ಟ್ರೋಲ್‌ ಮಾಡುತ್ತಿದ್ದಾರೆ ಜನ.

39
Kareena

'ಲ್ಯಾಕ್ಮೆ ಫ್ಯಾಶನ್ ಫೇಸ್‌ ಬದಲಿಸಿ, ಕರೀನಾ ಅಲ್ಲ, ಈಗ ಬೇರೆಯವರು ಬೇಕಾಗಿದ್ದಾರೆ,' ಎಂದು ಒಬ್ಬರು ಬರೆದಿದ್ದಾರೆ. 'ಈಗಂತೂ ಇವಳು ವ್ಯಾಂಪ್ಯಾರ್‌ ರೀತಿ ಕಾಣಿಸುತ್ತಿದ್ದಾಳೆ' ಎಂದು ಮತ್ತೊಬ್ಬರು ಹೇಳಿದರು. 'ಹಾಟ್‌ ಡ್ರೆಸ್‌ನಲ್ಲಿ ದಪ್ಪ ಹೆಂಗಸು', ಎಂದು ಇನ್ನೊಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ.

49

'ನೀವು ತುಂಬಾ ಕೆಟ್ಟದಾಗಿ ಕಾಣುತ್ತಿದ್ದೀರಾ, ಈಗ ನೀವು ಮನೆಯಲ್ಲಿ ಕುಳಿತುಕೊಳ್ಳಿ. ರೆಸ್ಟ್ ಮಾಡಿ' ಎಂದು ಸಲಹೆ ನೀಡಿ ಕಾಮೆಂಟ್‌ ಮಾಡಿದ್ದಾರೆ  'ಈಗ ತನ್ನ  ಚಾರ್ಮ್‌ ಕಳೆದುಕೊಂಡಿದ್ದಾರೆ, ವಯಸ್ಸಾಗಿದೆ. ಆದ್ದರಿಂದ ಇಲ್ಲ. ಆದರೆ ಕರೀನಾಗೆ  ಏನೋ ಆಗಿದೆ' ಎಂದು ಇನ್ನೊಂದು ಕಾಮೆಂಟ್‌ನಲ್ಲಿ ನೋಡಬಹುದು .


 

59

ಮಲೈಕಾ ಅರೋರಾ  (Malaika Arora)ಕೂಡ ಫ್ಯಾಶನ್ ವೀಕ್‌ನಲ್ಲಿ ರ‍್ಯಾಂಪ್‌ನಲ್ಲಿ ನಡೆದರು. ಈ ಸಮಯದಲ್ಲಿ ಅವರು ಸಾಂಪ್ರದಾಯಿಕ ಲುಕ್‌ನಲ್ಲಿ (Traditional Wear) ಕಾಣಿಸಿಕೊಂಡರು.  ಕೆಂಪು-ಗೋಲ್ಡನ್‌ ಬಣ್ಣದ ಲೆಹೆಂಗಾ ಧರಿಸಿದ್ದ ಮಲೈಕಾ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.

69

ಮಲೈಕಾ ಅರೋರಾ ಕೆಂಪು ಬಣ್ಣದ ಲೆಹಂಗಾ ಜೊತೆ ದೊಡ್ಡ ಮಾಂಗ್ ಟಿಕಾ ಮತ್ತು ಭಾರೀ ಹಾರವನ್ನು ಧರಿಸಿದ್ದರು. ಆದಾಗ್ಯೂ, ಅವರು ಕಿವಿಗೆ ಯಾವುದೇ ಅಭರಣ ಧರಿಸಿರಲಿಲ್ಲ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

.

79

ಕರೀನಾ ಕಪೂರ್ ರ‍್ಯಾಂಪ್‌ ಮೇಲೆ ನಡೆದರೆ, ಆಕೆಯ ನಾದಿನಿ ಸೋಹಾ ಅಲಿ ಖಾನ್ (Soha Ali Khan) ಕೂಡ ರ‍್ಯಾಂಪ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಪ್ಪು ಬಣ್ಣದ  ಶೋಲ್ಡರ್‌ ಲೆಸ್‌ ಗೌನ್ ಧರಿಸಿದ್ದರು.

 

89

ಸೋಹಾ ಅಲಿ ಖಾನ್ ಕಪ್ಪು ಗೌನ್ ಜೊತೆ ಯಾವುದೇ ಭಾರೀ ಆಭರಣಗಳನ್ನು ಧರಿಸಲಿಲ್ಲ. ಸರಳವಾದ ಆಭರಣ (Jewellery) ಮತ್ತು ಲಘು ಮೇಕಪ್‌ನೊಂದಿಗೆ (Light Make up) ಸೋಹಾ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. 

99

ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ದಿವ್ಯಾ ಖೋಸ್ಲಾ ಕುಮಾರ್ ಗೋಲ್ಡನ್ ಬಾರ್ಡರ್ ಇರುವ ಕಪ್ಪು ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಅವರು ತನ್ನ ಕೂದಲಿಗೆ ಮಾಂಗ್ ಟಿಕಾ ಜೊತೆಗೆ ಮಲ್ಲಿಗೆ ಮುಡಿದು ತಮ್ಮ ಲುಕ್‌ ಕಂಪ್ಲೀಟ್‌ ಮಾಡಿದ್ದರು.

click me!

Recommended Stories