ಲವ್‌ ಲೆಟರ್‌ ಬರೆದು ಮನೆಯಲ್ಲಿ ಸಿಕ್ಕಿಬಿದ್ದ ಸಾಯಿ ಪಲ್ಲವಿ; ಪೋಷಕರ ಕಂಡಿಷನ್ ಏನು?

Published : Apr 24, 2024, 02:40 PM IST

ಸಾಯಿ ಪಲ್ಲವಿ ಸಿಂಗ್ ಆಗಿರಲು ಕಾರಣವೇನು? ಕಾಲೇಜ್‌ನಲ್ಲಿ ಬರೆದ ಲವ್‌ ಲೆಟರ್‌ ಮ್ಯಾಟರ್‌ ಈಗ ಲೀಕ್....

PREV
17
ಲವ್‌ ಲೆಟರ್‌ ಬರೆದು ಮನೆಯಲ್ಲಿ ಸಿಕ್ಕಿಬಿದ್ದ ಸಾಯಿ ಪಲ್ಲವಿ; ಪೋಷಕರ ಕಂಡಿಷನ್ ಏನು?

ಮಾಲಿವುಡ್ ಮಲ್ಲರ್ ಸಾಯಿ ಪಲ್ಲವಿ ಈಗ ಪ್ಯಾನ್ ಇಂಡಿಯಾ ನಟ. ಯಾವ ಸಿನಿಮಾ ಶೀರ್ಷಿಕೆ ರಿಲೀಸ್ ಆದರೂ ಪಲ್ಲವಿನೇ ನಾಯಕಿ ಎನ್ನುವ ಮಟ್ಟಕ್ಕೆ ಹೆಸರು ಮಾಡಿದ್ದಾರೆ. 

27

ಸಾಯಿ ಪಲ್ಲವಿ ಎಂಬಿಬಿಎಸ್​ ಮಾಡಿದ್ದಾರೆ. ವೈದ್ಯಯಾಗಿಯೇ ವೃತ್ತಿ ಆರಂಭಿಸಿದವರು. ಇವರು ಎಲ್ಲಿಯೇ ಹೋದರೂ ಸದ್ಯ ಇವರ ಮದುವೆಯ ವಿಷಯ ಮುನ್ನೆಲೆಗೆ ಬರುತ್ತದೆ. 
 

37

1990ರಲ್ಲಿ ಹುಟ್ಟಿರೋ ನಟಿ ಸಾಯಿ ಪಲ್ಲವಿಗೆ ಈಗ 33 ವರ್ಷದ ಅವಿವಾಹಿತೆ. ಕಳೆದ ವರ್ಷ ಸಾಯಿ ಪಲ್ಲವಿ ಮದುವೆ ತಯಾರಿಯನ್ನು ನಡೆಸಿದ್ದಾರೆ ಎನ್ನುವ ಗಾಳಿ ಸುದ್ದಿ ಸಕತ್​ ಸದ್ದು ಮಾಡಿತ್ತು.  
 

47

ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ (Love) ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್.
 

57

ಇದೀಗ ಅವರ ಬಾಲ್ಯದ ಘಟನೆಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ,  ಬಾಲ್ಯದಲ್ಲಿಯೇ ನಟಿ ಪ್ರೇಮಪಾಶಕ್ಕೆ ಸಿಲುಕಿ ಪ್ರೇಮ ಪತ್ರ ಬರೆದಿದ್ದರಂತೆ. ಆದರೆ ಈ ಪ್ರೇಮ ಪತ್ರದ ವಿಷಯ ಮನೆಯವರಿಗೆ ತಿಳಿದು ಸಾಯಿಪಲ್ಲವಿ ಅವರನ್ನು ತೀವ್ರವಾಗಿ ಥಳಿಸಿದ್ದಂತೆ.  
 

67

ಅಲ್ಲಿಂದ ಇಲ್ಲಿಯವರೆಗೂ ಪ್ರೇಮ, ಮದುವೆ ಎಂದರೆ ಉಸಾಬರಿಯೇ ಬೇಡ ಎನ್ನುವ ಮಟ್ಟಿಗೆ ಹೋಗಿದ್ದಾರೆ ನಟಿ.  ನಿಜ ಜೀವನದಲ್ಲಿ ಆಕೆಗೆ ಬಾಯ್‌ಫ್ರೆಂಡ್ ಇದ್ದಾನೋ ಇಲ್ಲವೋ ಎಂಬುದು ಬಹಿರಂಗವಾಗಿಲ್ಲ.

77

ಆದರೆ ಬಾಲ್ಯದಲ್ಲಿ, ಅವರು ಪ್ರೀತಿಸಿ ಸೋಲನ್ನು ಕಂಡವರು. ಈ ಕುರಿತು  ಸ್ವತಃ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  ಈಗಲೂ ಪಲ್ಲವಿ ಯಸ್‌ ಅಂದ್ರೆ ಮದುವೆಯಾಗಲು ಹುಡುಗರು ರೆಡಿಯಾಗಿದ್ದಾರೆ. 

Read more Photos on
click me!

Recommended Stories