20 ವರ್ಷದ ಹಿಂದಿನ ಸಿನಿಮಾ ಥಿಯೇಟರ್‌ನಲ್ಲಿ ರಿ-ರಿಲೀಸ್‌; ಬಾಕ್ಸಾಫೀಸ್ ಹಿಟ್‌, ಬರೋಬ್ಬರಿ 15 ಕೋಟಿ ಗಳಿಕೆ!

First Published Apr 23, 2024, 5:56 PM IST

2024 ಭಾರತೀಯ ಚಿತ್ರರಂಗಕ್ಕೆ ಹಿಂದಿನ ಎರಡು ವರ್ಷಗಳಷ್ಟು ಸಕ್ಸಸ್‌ಫುಲ್ ಇಯರ್‌ ಎಂದು ಪರಿಗಣಿಸಲ್ಪಟ್ಟಿಲ್ಲ. ವರ್ಷ ಆರಂಭವಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಒಂದು ಚಿತ್ರವೂ 1000 ಕೋಟಿ ರೂಪಾಯಿಗಳ ಪ್ರಾಫಿಟ್‌ನ್ನು ದಾಟಿಲ್ಲ. ಹೀಗಿರುವಾಗ 2004ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ರಿ-ರಿಲೀಸ್ ಆಗಿ ಬಾಕ್ಸಾಫೀಸಿನಲ್ಲಿ ಹಿಟ್ ಆಗಿದೆ.

2024 ಭಾರತೀಯ ಚಿತ್ರರಂಗಕ್ಕೆ ಹಿಂದಿನ ಎರಡು ವರ್ಷಗಳಷ್ಟು ಸಕ್ಸಸ್‌ಫುಲ್ ಇಯರ್‌ ಎಂದು ಪರಿಗಣಿಸಲ್ಪಟ್ಟಿಲ್ಲ. ವರ್ಷ ಆರಂಭವಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಒಂದು ಚಿತ್ರವೂ 1000 ಕೋಟಿ ರೂಪಾಯಿಗಳ ಪ್ರಾಫಿಟ್‌ನ್ನು ದಾಟಿಲ್ಲ. ಪ್ರಪಂಚದಾದ್ಯಂತ 500 ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಿಲ್ಲ. ಈ ವಾರ, ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವು ಮೂಲತಃ 2004ರಲ್ಲಿ ಬಿಡುಗಡೆಯಾದ ಸಿನಿಮಾವಾಗಿದೆ.

20 ವರ್ಷಗಳ ಹಿಂದೆ ಬಿಡುಗಡೆಯಾದ ತಮಿಳು ಸಿನಿಮಾ ಗಿಲ್ಲಿ ಈ ವಾರ ಥಿಯೇಟರ್‌ಗಳಲ್ಲಿ ರಿ-ರಿಲೀಸ್ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಮೈದಾನ್, LSD 2 ಸಿನಿಮಾದ ಗಳಿಕೆಯನ್ನು ಮೀರಿಸಿದೆ.

ಧರಣಿ ನಿರ್ದೇಶನದ ಗಿಲ್ಲಿ ಸಿನಿಮಾದಲ್ಲಿ ದಳಪತಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್ ಮತ್ತು ಆಶಿಶ್ ವಿದ್ಯಾರ್ಥಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 

ತೆಲುಗಿನ ಹಿಟ್ ಒಕ್ಕಡು ಚಿತ್ರದ ರಿಮೇಕ್ ಆಗಿರುವ ಈ ಚಿತ್ರವು ತಮಿಳುನಾಡಿನಾದ್ಯಂತ ಮತ್ತು ಹೊರಗಿನ ಆಯ್ದ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಯಿತು. ಗಿಲ್ಲಿ ತನ್ನ ಮರು ಬಿಡುಗಡೆಯ ದಿನವೇ ವಿಶ್ವದಾದ್ಯಂತ 15 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.

ಈ ವಾರ ಥಿಯೇಟರ್‌ನಲ್ಲಿ ಮೈದಾನ್, ಲವ್ ಸೆಕ್ಸ್ ಔರ್ ಧೋಖಾ 2, ಮತ್ತು ಬಡೇ ಮಿಯಾನ್ ಚೋಟೆ ಮಿಯಾ ಮೊದಲಾದ ಚಿತ್ರಗಳು ಬಿಡುಗಡೆಯಾಗಿವೆ. ಆದ್ರೆ ಯಾವುದೇ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿಲ್ಲ.

ಗಿಲ್ಲಿ ವಿಜಯ್ ಅವರನ್ನು ಸೂಪರ್‌ಸ್ಟಾರ್‌ಡಮ್‌ಗೆ ಏರಿಸಿದ ಚಲನಚಿತ್ರಗಳಲ್ಲಿ ಒಂದಾಗಿದೆ, ಇದು ಏಪ್ರಿಲ್ 2004 ರಲ್ಲಿ ಬಿಡುಗಡೆಯಾಯಿತು. ಆ ಕಾಲದಲ್ಲಿ ಸಿನಿಮಾ ಕಲೆಕ್ಷನ್ 50 ಕೋಟಿ ರೂಪಾಯಿಗಳ ಗಡಿ ದಾಟಿತ್ತು. 

ಹಲವು ವರ್ಷಗಳ ವರೆಗೆ ವಿಜಯ್ ಅವರ ದೊಡ್ಡ ಹಿಟ್ ಆಗಿ ಉಳಿಯಿತು. ಈ ಚಿತ್ರವನ್ನು 2015 ರಲ್ಲಿ ಹಿಂದಿಯಲ್ಲಿ ತೇವರ್ ಎಂದು ಮರುನಿರ್ಮಾಣ ಮಾಡಲಾಯಿತು, ಇದರಲ್ಲಿ ಅರ್ಜುನ್ ಕಪೂರ್, ಸೋನಾಕ್ಷಿ ಸಿನ್ಹಾ ಮತ್ತು ಮನೋಜ್ ಬಾಜಪೇಯಿ ನಟಿಸಿದ್ದಾರೆ.

ಚಿತ್ರ ರಿ-ರಿಲೀಸ್ ಆಗಿರುವ ಖುಷಿಯನ್ನು ನಟಿ ತ್ರಿಶಾ ಕೃಷ್ಣನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಟೋಗಳನ್ನು ಹಂಚಿಕೊಂಡು ಬ್ಲಾಕ್‌ಬಸ್ಟರ್‌ ವೈಬ್ಸ್‌ ಎಗೈನ್ ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ.

click me!