ಅಹಾನ ಕೃಷ್ಣ ಹುಟ್ಟಿದ್ದು ಅಕ್ಟೋಬರ್ 13,1995
2014ರಲ್ಲಿ 'ಎನ್ಜನ್ ಸ್ಟೀವ್ ಲೋಪೆಜ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ಇತ್ತೀಚಿಗೆ ತೆರೆ ಕಂಡ 'ಲೂಕಾ' ಚಿತ್ರ ಹೆಸರು ತಂದು ಕೊಟ್ಟಿತು.
ಕೃಷ್ಣ ಕುಮಾರ್ ಹಾಗೂ ಸಿಂಧು ದಂಪತಿಯ ಮೊದಲ ಪುತ್ರಿ ಅಹಾನ
ಹೋಲಿ ಏಂಜಲ್ಸ್ ಟ್ರಿವಾಂಡ್ರಮ್‌ನಲ್ಲಿ ಶಾಲಾ ದಿನಗಳನ್ನು ಕಳೆದಿದ್ದಾರೆ.
ಹೈದರಾಬಾದ್‌ನಲ್ಲಿ ಮಾಸ್ಟರ್ಸ್ ಇನ್ ಅಡ್ವೈರ್ಟೈಸಿಂಗ್ ಹಾಗೂ ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ಡ್ಯಾನ್ಸ್ ಎಂದರೆ ಅಹಾನಾಳಿಗೆ ಪಂಚ ಪ್ರಾಣ. ಸಹೋದರಿಯರೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ಈಗಾಗಲೇ 5 ಚಿತ್ರಗಳಲ್ಲಿ ಮಿಂಚಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ 1.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ನಟನೆ ಹೊರತಾಗಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.