ತುಡಕ್ಕಮ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೋಹನ್‌ಲಾಲ್‌ ಮಗಳು ವಿಸ್ಮಯ!

Published : Jul 03, 2025, 12:29 PM IST

‘ತುಡಕ್ಕಮ್‌’ ಅವರ ನಟನೆಯ ಮೊದಲ ಚಿತ್ರವಾಗಿದ್ದು, ಈ ಸಿನಿಮಾವನ್ನು ಘೋಷಣೆ ಮಾಡಿರುವ ಮೋಹನ್‌ಲಾಲ್‌ ಮಗಳ ಸಿನಿಮಾ ಬದುಕು ಚೆನ್ನಾಗಿರಲಿ ಅಂತ ಶುಭ ಹಾರೈಸಿದ್ದಾರೆ.

PREV
15

ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಮಗಳು ವಿಸ್ಮಯ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ತುಡಕ್ಕಮ್‌’ ಅವರ ನಟನೆಯ ಮೊದಲ ಚಿತ್ರವಾಗಿದ್ದು, ಈ ಸಿನಿಮಾವನ್ನು ಘೋಷಣೆ ಮಾಡಿರುವ ಮೋಹನ್‌ಲಾಲ್‌ ಮಗಳ ಸಿನಿಮಾ ಬದುಕು ಚೆನ್ನಾಗಿರಲಿ ಅಂತ ಶುಭ ಹಾರೈಸಿದ್ದಾರೆ.

25

‘ಪ್ರೀತಿಯ ಮಗಳೇ, ಜೀವನ ಪರ್ಯಂತ ಪ್ರೇಮದಲ್ಲಿ ಬೀಳಬೇಕಿರುವ ಸಿನಿಮಾ ಜಗತ್ತಿಗೆ ತುಡಕ್ಕಮ್‌ ಸಿನಿಮಾ ಮೊದಲ ಹೆಜ್ಜೆಯಾಗಲಿ’ ಎಂದು ಮೋಹನ್‌ಲಾಲ್‌ ಹೇಳಿದ್ದಾರೆ. ಜೇಡ್‌ ಆ್ಯಂಟನಿ ಜೋಸೆಫ್‌ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

35

ಮೋಹನ್‌ಲಾಲ್ ಪುತ್ರಿ ಈ ಚಿತ್ರಕ್ಕಾಗಿ ಹಾಗೂ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವುದಕ್ಕಾಗಿ ತೂಕ ಇಳಿಸುವುದರ ಜೊತೆಗೆ ಪೂರಕವಾದ ತರಬೇತಿಯನ್ನ ಥಾಯ್ಲೆಂಡ್‌ನಲ್ಲಿ ಪಡೆದಿದ್ದಾರೆ ಎನ್ನಲಾಗ್ತಿದೆ.

45

ವಿಸ್ಮಯ ಈ ಹಿಂದೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಮೋಹನ್‌ಲಾಲ್‌ ಪುತ್ರ ಪ್ರಣವ್‌ ಈಗಾಗಲೇ ಮಲಯಾಳಂನ ಪ್ರಮುಖ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

55

ಇನ್ನು ಮೋಹನ್ ಲಾಲ್ ಬಗ್ಗೆ ಹೇಳುವುದಾದರೆ, ಈ ವರ್ಷ ಅವರ ನಟನೆಯ ಎಂಪುರಾನ್ -2 ಸಿನಿಮಾ ಸೂಪರ್ ಹಿಟ್ ಆಯ್ತು. ಅದಾದ ನಂತರ ಅವರು 'ತುಡುರಮ್' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

Read more Photos on
click me!

Recommended Stories