ಮೋಹನ್ ಲಾಲ್ ಅಥವಾ ಮಮ್ಮುಟ್ಟಿ: ಯಾರು ಹೆಚ್ಚು ಶ್ರೀಮಂತರು?

First Published | Sep 8, 2021, 1:40 PM IST

ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಇಬ್ಬರೂ ಮಲಯಾಳಂ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರು. ಇವರಿಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಅವರ ಸಂಪಾದನೆ ಮತ್ತು ನೆಟ್‌ ವರ್ತ್‌ ಮಾಹಿತಿಯ ವಿವರ ಇಲ್ಲಿದೆ. ಕೆಳಗಿನ ಡೇಟಾ ವಿವಿಧ ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ.

ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಇಬ್ಬರೂ ಮಲಯಾಳಂನ ಸೂಪರ್ ಸ್ಟಾರ್ಸ್‌. ಮಲಯಾಳಂ ಚಿತ್ರರಂಗದಲ್ಲಿನ ತಮ್ಮ ಅದ್ಭುತ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ತಮ್ಮ ಕಲೆಯ ಮೂಲಕ ಇಡೀ ದೇಶದಲ್ಲಿ ಫ್ಯಾನ್ಸ್‌ ಹೊಂದಿದ್ದಾರೆ ಈ ನಟರಿಬ್ಬರು.

ಇಬ್ಬರೂ ಭಾರೀ ಸೂಪರ್‌ಸ್ಟಾರ್‌ಗಳಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಉತ್ತಮ ಸ್ನೇಹಿತರು ಕೂಡ ಹೌದು. ತಮ್ಮ ಫ್ರೆಂಡ್‌ಶಿಪ್‌ ಮೂಲಕ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಅವರೆಲ್ಲರಲ್ಲಿ ಯಾರು ಹೆಚ್ಚು ಶ್ರೀಮಂತರು ನೋಡೋಣ.

Tap to resize

ಕಳೆದ ವರ್ಷ ವರದಿಯಾದಂತೆ, ಅಂತಾರಾಷ್ಟ್ರೀಯ ನಿಯತಕಾಲಿಕವೊಂದು ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ನಟರು ಎಂದು ಬಹಿರಂಗಪಡಿಸಿತು. 2019 ರಲ್ಲಿ ಮೋಹನ್ ಲಾಲ್ 64.5 ಕೋಟಿ ಗಳಿಸಿದ್ದಾರೆ ಮತ್ತು ಮಮ್ಮುಟ್ಟಿ 33.5 ಕೋಟಿ ಸಂಪಾದಿಸಿದ್ದಾರೆ ಎಂದು ಹೇಳಲಾಗಿದೆ,. 

ಬಿಗ್ ಬಾಸ್ ಮಲಯಾಳಂ ಸೀಸನ್ 3 ಗಾಗಿ ಮೋಹನ್ ಲಾಲ್ ಅವರ ಸಂಬಳ ಕೂಡ ಅವರ ಸಂಪಾದನೆ ಮಾಡಲು ಸಹಾಯ ಮಾಡಿತು. ಇದು ಮಲಯಾಳಂ ದೂರದರ್ಶನದ ಇತಿಹಾಸದಲ್ಲಿ ಸೆಲೆಬ್ರಿಟಿಗಳು ಪಡೆದ ಅತ್ಯಧಿಕ ಮೊತ್ತವೆಂದು ಪರಿಗಣಿಸಲಾಗಿದೆ.

ಮಲಯಾಳಂ ಬಿಗ್ ಬಾಸ್ ಸೀಸನ್ 2 ಗಾಗಿ ಮೋಹನ್ ಲಾಲ್ 12 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತವೆ, ಆದರೆ ನಟ ಈ ಬಾರಿ 18 ಕೋಟಿ ರೂಪಾಯಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. 

ಮೋಹನ್ ಲಾಲ್ ತನ್ನ ಸಿನೆಮಾಗೆ ಸುಮಾರು 5-8 ಕೋಟಿ ಶುಲ್ಕ ವಿಧಿಸುತ್ತಾರೆ ಮತ್ತು ಪ್ರತಿ ವರ್ಷ 20 ಕೋಟಿ ಗಳಿಸುತ್ತಾರೆ. 2019 ರಿಂದ ಮೋಹನ್ ಲಾಲ್ ತುಂಬಾ ವೇಗವಾಗಿ ಬೆಳೆದಿದ್ದಾರೆ ಎಂದು ವರದಿಗಳು ಹೇಳುತ್ತವೆ. 

ಮಮ್ಮುಟ್ಟಿ ಬಗ್ಗೆ ಹೇಳುವುದಾದರೆ, ಅವರು ಪ್ರತಿ ಚಿತ್ರಕ್ಕೆ 4-5 ಕೋಟಿ ರೂ ಚಾರ್ಜ್‌ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ . ಅವರ ನಿವ್ವಳ ಮೌಲ್ಯ 40 ಮಿಲಿಯನ್ ಎಂದು ವರದಿಯಾಗಿದೆ. ನಟ ಪ್ರತಿ ವರ್ಷ 10 ಮಿಲಿಯನ್ ಗಳಿಸುತ್ತಾರೆ. 

ಇಬ್ಬರು ಸೂಪರ್‌ಸ್ಟಾರ್‌ಗಳು ಇತ್ತೀಚೆಗೆ ಯುಎಇ ಸರ್ಕಾರಿ ಅಧಿಕಾರಿಗಳಿಂದ ಗೋಲ್ಡನ್ ವೀಸಾ ಪಡೆದರು. ಅವರು ಅಲ್ಲಿ ಒಂದು ಮದುವೆಗೆ ಕೂಡ ಹಾಜರಾಗಿದ್ದರು. ಇಬ್ಬರೂ ಮಲಯಾಳಂ ಇಂಡಸ್ಟ್ರಿಯ ಸೂಪರ್‌ಸ್ಟಾರ್‌ಗಳು ತುಂಬಾ ಆಪ್ತ ಸ್ನೇಹಿತರು.

Latest Videos

click me!