Throwback Photos: ಭಾರತದ ಮೊದಲ Miss Universe ಸುಶ್ಮಿತಾ ಸೇನ್‌ 27 ವರ್ಷಗಳ ಹಿಂದೆ!

First Published | Dec 13, 2021, 7:28 PM IST

ಈ ಬಾರಿ ಮಿಸ್ ಯೂನಿವರ್ಸ್ 2021 (Miss Universe 2021) ರ ಕಿರೀಟವು ಭಾರತೀಯ ನಾರಿಯ ಮುಡಿಗೇರಿದೆ. ಚಂಡೀಗಢದ ಹರ್ನಾಜ್ ಸಂಧು (Harnaaz Sandhu) ಅವರು 70ನೇ ಭುವನ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಭಾರತದ ಹೆಸರನ್ನು ವಿಶ್ವದೆಲ್ಲೆಡೆ ಬೆಳಗಿದ್ದಾರೆ. ಈ ವರ್ಷ ಭುವನ ಸುಂದರಿ 2021 ಸ್ಪರ್ಧೆಯು ಇಸ್ರೇಲ್‌ನಲ್ಲಿ ನಡೆಯಿತು. ಈ ಸ್ಪರ್ಧೆಯ ಪ್ರಾಥಮಿಕ ಹಂತದಲ್ಲಿ 75ಕ್ಕೂ ಹೆಚ್ಚು ಸುಂದರಿಯರು ಸ್ಪರ್ಧಿಸಿದ್ದರು. 21 ವರ್ಷದ ಹರ್ನಾಜ್ ಅವರು ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮಸ್ವಾನೆ ಅವರನ್ನು ಹಿಂದಿಕ್ಕಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಂದಹಾಗೆ, ಮಿಸ್ ಯೂನಿವರ್ಸ್ ಕಿರೀಟವನ್ನು 1994ರಲ್ಲಿ ಭಾರತಕ್ಕಾಗಿ ಮೊದಲ ಬಾರಿಗೆ ಸುಶ್ಮಿತಾ ಸೇನ್ (Sushmita Sen) ಗೆದ್ದಿದ್ದರು. ಅವರ ನಂತರ  ಲಾರಾ ದತ್ತಾ 2000 ರಲ್ಲಿ ಮಿಸ್ ಯೂನಿವರ್ಸ್ (Lara Dutta) ಆದರು. ಈ  ಕಿರೀಟ ಭಾರತಕ್ಕೆ ಬಂದಿರುವುದು ಇದು ಮೂರನೇ ಬಾರಿ. ಸುಶ್ಮಿತಾ ಸೇನ್ ಮತ್ತು ಲಾರಾ ದತ್ತಾ ಥ್ರೋಬ್ಯಾಕ್‌ ಫೋಟೋಗಳು ಇಲ್ಲಿವೆ.

ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಲು  ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರನ್ನು ಸೋಲಿಸಿದ್ದರು. ವಾಸ್ತವವಾಗಿ, ಆ ವರ್ಷ ಮಿಸ್‌ ಇಂಡಿಯಾ ಸ್ಪರ್ಧೆಯ ಕೊನೆಯಲ್ಲಿ, ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಒಂದು ಸಾಮಾನ್ಯ ಪ್ರಶ್ನೆ ಕೇಳಲಾಗಿದ್ದು, ಅದರಲ್ಲಿ ಸುಶ್ಮಿತಾ ನೀಡಿದ ಉತ್ತರ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಸಾಮಾನ್ಯ ಪ್ರಶ್ನೆಯಲ್ಲಿ, ಸುಶ್ಮಿತಾ ಮತ್ತು ಐಶ್ವರ್ಯಾ ರೈಗೆ ನೀವು ಯಾವುದೇ ಐತಿಹಾಸಿಕ ಘಟನೆಯನ್ನು ಬದಲಾಯಿಸಲಾರಿರಿ, ಅದು ಏನು ಎಂದು ಕೇಳಲಾಯಿತು. ಇದಕ್ಕೆ ಐಶ್ವರ್ಯಾ ಅವರ ಉತ್ತರ - ಅವರು ಹುಟ್ಟಿದ ಸಮಯ ಎಂದು ಉತ್ತರಿಸಿದರು. ಆದರೆ ಸುಶ್ಮಿತಾ ಸೇನ್ ಅವರು ಹೇಳಿದರು - 'ಇಂದಿರಾ ಗಾಂಧಿಯವರ ಸಾವು' ಎಂದು ಉತ್ತರ ನೀಡಿದ್ದರು.

Latest Videos


ಈ ಉತ್ತರದ ಮೂಲಕ  ಸುಶ್ಮಿತಾ ಕೇವಲ 18 ನೇ ವಯಸ್ಸಿನಲ್ಲಿಯೇ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವಂತಾಯಿತು.ಸ್ ಇಂಡಿಯಾ ಸ್ಪರ್ಧೆಯಲ್ಲಿ ಐಶ್ವರ್ಯಾ ರೈ ಸೋಲು ಅನುಭವಿಸಿದ್ದರು. ಇದರ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ.

ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಇಬ್ಬರೂ 1994 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯನ್ನು ಗೋವಾದಲ್ಲಿ ಆಯೋಜಿಸಲಾಗಿತ್ತು. ಮಿಸ್ ಇಂಡಿಯಾ ಗೆಲ್ಲಲು ಇಬ್ಬರೂ ಪ್ರಬಲ ಸ್ಪರ್ಧಿಗಳಾಗಿದ್ದರು. ಅಷ್ಟೇ ಅಲ್ಲ, ಐಶ್ವರ್ಯಾ ತುಂಬಾ ಸುಂದರವಾಗಿದ್ದರು ಮತ್ತು ಆಗಲೇ ಹೆಸರು ಸಹ ಮಾಡಿದ್ದರು. 

ಆದರೆ ಐಶ್ವರ್ಯಾ ಸೌಂದರ್ಯಕ್ಕೆ ಹೆದರಿ ಸುಶ್ಮಿತಾ ಸ್ವರ್ಧೆಯ ಎಂಟ್ರಿಯನ್ನು ವಾಪಸ್ಸು ತೆಗೆದು ಕೊಂಡಿದ್ದರಂತೆ. ಆದರೆ ನಂತರ ಅವರ ತಾಯಿಯ ಬುದ್ಧಿ ಮಾತು ಅವರನ್ನು ಉತ್ತೇಜಿಸಿತು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ವಿಷಯವನ್ನು ಸ್ವತಃ ಸುಶ್ಮಿತಾ ಸಂದರ್ಶನವೊಂದರಲ್ಲಿ  ಹೇಳಿದ್ದರು. 

ಈ ಪ್ರಶಸ್ತಿಯನ್ನು ಗೆದ್ದ ನಂತರ ಸುಶ್ಮಿತಾ ಸೇನ್‌ಗೆ ಬಾಲಿವುಡ್‌ನಿಂದ ಆಫರ್‌ಗಳು ಬರಲಾರಂಭಿಸಿದವು. ಅವರು ದಸ್ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ, ಅವರ ಸಿನಿಮಾ ಪಯಣ ವಿಶೇಷವೇನೂ ಆಗಿರಲಿಲ್ಲ. ಕೆಲವೇ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಅವರು ನಟನೆಯನ್ನು ತೊರೆದರು. ಆದರೆ, ಇತ್ತೀಚಿನ ದಿನಗಳಲ್ಲಿ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.

ಸುಶ್ಮಿತಾ ಸೇನ್ ನಂತರ, ಲಾರಾ ದತ್ತಾ 2000 ರಲ್ಲಿ ಮತ್ತೊಮ್ಮೆ ದೇಶದ ಹೆಸರನ್ನು ಬೆಳಗಿಸಿದರು. ಲಾರಾ ದತ್ತಾ ಅವರನ್ನು ವಿಶ್ವ ಸುಂದರಿಯನ್ನಾಗಿ ಮಾಡಬಾರದು ಎಂದು ಪ್ರತಿಭಟನೆಯಾಗಿದ್ದರೆ, ನೀವು ವಿಶ್ವ ಸುಂದರಿ ಎಂದು ಆ ಜನರಿಗೆ ಹೇಗೆ ಮನವರಿಕೆ ಮಾಡುತ್ತೀರಿ ಎಂದು ಸ್ಪರ್ಧೆಯ ಅಂತಿಮ ಸುತ್ತನ್ನು ತಲುಪಿದ ಲಾರಾ ಅವರನ್ನು ಕೇಳಲಾಯಿತು

ನನ್ನ ಪ್ರಕಾರ ವಿಶ್ವ ಸುಂದರಿ ಕಿರೀಟ ಹಲವು ವೇದಿಕೆಗಳನ್ನು ನೀಡುತ್ತದೆ. ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ಪ್ರತಿಯೊಂದು ಕ್ಷೇತ್ರದಲ್ಲೂ ನಾವು ನಿರ್ಭಯದಿಂದ ಮುನ್ನಡೆಯಬಹುದು. ಉದ್ಯಮದಿಂದ ಸೇನೆ ಮತ್ತು ರಾಜಕೀಯದವರೆಗೆ, ನಾವು ಎಲ್ಲೆಡೆ ನಮ್ಮ ಸಲಹೆಗಳನ್ನು ನೀಡಬಹುದು ಎಂದು ಪ್ರತಿಕ್ರಿಯಿಸಿದರು ಲಾರಾ ದತ್ತಾ.

ಈ ಪ್ರಶಸ್ತಿಯನ್ನು ಗೆದ್ದ ನಂತರ ಲಾರಾ ದತ್ತಾ ಬಾಲಿವುಡ್‌ಗೆ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆಗಿನ ಅಂದಾಜ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆದರೆ ಪ್ರಸ್ತುತ ಲಾರಾ ಚಲನಚಿತ್ರಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ.

click me!