Rajinikanth Foundation: ಬಡ ಮಕ್ಕಳಿಗೆ PSC ಪರೀಕ್ಷಾ ತರಬೇತಿ

First Published Dec 13, 2021, 6:49 PM IST

Rajinikanth Foundation ಬಡ ಮಕ್ಕಳಿಗೆ ಪಿಎಸ್‌ಸಿ ತರಬೇತಿ ನೀಡಲಿದೆ. ನಟ ಇತ್ತೀಚೆಗಷ್ಟೇ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದು ಇದರ ಬೆನ್ನಲ್ಲೇ ಈ ಘೋಷಣೆ ಮಾಡಲಾಗಿದೆ.

ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ (ಟಿಎನ್‌ಪಿಎಸ್‌ಸಿ) ನಡೆಸುತ್ತಿರುವ ಪರೀಕ್ಷೆಗಳಿಗೆ ಬಡ ವರ್ಗಗಳ 100 ವಿದ್ಯಾರ್ಥಿಗಳಿಗೆ ರಜನಿಕಾಂತ್ ಫೌಂಡೇಶನ್ ತರಬೇತಿಯನ್ನು ನೀಡಲಿದೆ ಎಂದು ರಜಿನಿ ಮಕ್ಕಳ್ ಮಂಡ್ರಂ ತಿಳಿಸಿದೆ.

ರಜಿನಿ ಮಕ್ಕಳ ಮಂಡ್ರಂ ಸಂಚಾಲಕ ವಿ.ಎಂ. ಸುಧಾಕರ್ ಅವರು ಟ್ವಿಟರ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಈ ಮೂಲಕ 100 ವಿದ್ಯಾರ್ಥಿಗಳು ಪಿಎಸ್‌ಸಿಗೆ ತರಬೇತಿ ಪಡೆಯಲಿದ್ದಾರೆ.

Latest Videos


ಸುಧಾಕರ್, ಸೂಪರ್ ಸ್ಟಾರ್ ಶ್ರೀ ರಜನಿಕಾಂತ್ ಅವರ 72 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ನಮ್ಮ ಪ್ರೀತಿಯ ತಲೈವರ್ ಅವರು TNPSC ನಡೆಸುವ ಗುಂಪು ಪರೀಕ್ಷೆಗಳಿಗೆ ಸಮಾಜದ ಬಡ 100 ವಿದ್ಯಾರ್ಥಿಗಳಿಗೆ ರಜನಿಕಾಂತ್ ಫೌಂಡೇಶನ್ ಮೂಲಕ ತರಬೇತಿ ನೀಡಲಿದ್ದಾರೆ ಎಂದು ಘೋಷಿಸಲು ಸಂತೋಷವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಅಣ್ಣಾತ್ತೆ ಸಿನಿಮಾ ರಿಲೀಸ್‌ಗೂ ಮುನ್ನ ಹಲವು ಬಾರಿ ಆಸ್ಪತ್ರೆಗೆ ದಾಖಲಾದ ರಜನೀಕಾಂತ್ ಕುರಿತು ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ ನಟ ಹುಷಾರಾಗಿ ಡಿಶ್ಚಾರ್ಜ್ ಆದರು

ಕಾಲಿವುಡ್‌ನ ಖ್ಯಾತ  ನಟ ತಮ್ಮ ಫೌಂಡೇಷನ್‌ ಮೂಲಕ ಬಹಳಷ್ಟು ಬಡ ಮಕ್ಕಳ, ಬಡ ಜನರಿಗೆ ನೆರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

click me!