2006 ರಲ್ಲಿ ಬಿಡುಗಡೆಯಾದ ಹೃತಿಕ್ ರೋಷನ್ (Hrithik Roshan) ಅವರ ಬ್ಲಾಕ್ಬಸ್ಟರ್ ಚಿತ್ರ 'ಕ್ರಿಶ್' ನೆನಪಿದ್ಯಾ?, ಈ ಸಿನಿಮಾದಲ್ಲಿ ಹೃತಿಕ್ ಅವರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ ಹುಡುಗ ನೆನಪಿದ್ದಾನ? ಥೇಟ್ ಹೃತಿಕ್ ರೋಷನ್ ನಂತೆ ಕಾಣಿಸ್ತಿದ್ದ ಆ ಬಾಲಕ ಖಂಡಿತಾ ನೆನಪಿರಬಹುದು ಅಲ್ವಾ? ಅವರ ಹೆಸರು ಮಿಕ್ಕಿ ಧಮಿಜಾನಿ.
ಬಾಲ ಕಲಾವಿದನಾಗಿ ಗುರುತಿಸಿಕೊಂಡಿದ್ದ ಮಿಕ್ಕಿ ಧಮಿಜಾನಿ (Mickey Dhamejani) ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿ ತಾವೇ ಕೃಷ್ ಚಿತ್ರದಲ್ಲಿ ಜ್ಯೂನಿಯರ್ ಕೃಷ್ ಆಗಿರೋದಾಗಿ ಹೇಳಿದ್ದಾರೆ, ಜೊತೆಗೆ ತಾವು ಈಗ ಐ ಸರ್ಜನ್ ಆಗಿರೋದಾಗಿಯೂ ತಿಳಿಸಿದ್ದಾರೆ. ನೀವು ಈಗ ಮಿಕ್ಕಿಯನ್ನು ನೋಡಿದರೆ, ಇವರು ಅದೇ ನಟ ಎಂದು ಹೇಳೋದಕ್ಕೂ ಸಾಧ್ಯವಿಲ್ಲ, ಏಕೆಂದರೆ ಅಷ್ಟೊಂದು ಬದಲಾಗಿದ್ದಾರೆ ಮಿಕಿ.
18 ವರ್ಷಗಳ ಹಿಂದೆ ಬಿಡುಗಡೆಯಾದ ಹೃತಿಕ್ ರೋಷನ್ ಅವರ 'ಕ್ರಿಶ್' (Krrish) ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ನಂತರ, ಹೃತಿಕ್ ರೋಷನ್ ಸೂಪರ್ಸ್ಟಾರ್ಗೆ ಸ್ಟಾರ್ ಆದರು. ಈ ಚಿತ್ರದಲ್ಲಿ ಹೃತಿಕ್ ಜೊತೆ ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಮಿಕ್ಕಿ ಜೂನಿಯರ್ 'ಕ್ರಿಶ್' (ಹೃತಿಕ್ ರೋಷನ್) ಪಾತ್ರವನ್ನು ನಿರ್ವಹಿಸಿದ್ದಾರೆ.
ಕೃಷ್ ಚಿತ್ರದಲ್ಲಿ ಮಿಕ್ಕಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ಆ ಸಮಯದಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು. ಬಾಲ ಕಲಾವಿದ (Child artist) ಮಿಕ್ಕಿ ನಟನೆಯನ್ನು ತೊರೆದು ಈಗ ವೈದ್ಯರಾಗಿದ್ದಾರೆ. ಮಿಕ್ಕಿ ಸ್ವತಃ ತಮ್ಮ ಜೂನಿಯರ್ 'ಕ್ರಿಶ್' ಆಗಿರುವ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಜೊತೆಗೆ ಅವರು ಈಗ ಕಣ್ಣಿನ ವೈದ್ಯರಾಗಿದ್ದಾರೆ ಅನ್ನೋದನ್ನು ಸಹ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡ ಮಿಕ್ಕಿ 'ಜೂನಿಯರ್ ಕ್ರಿಶ್ ಪಾತ್ರವನ್ನು ನಿರ್ವಹಿಸಲು ಮತ್ತು ಸೂಪರ್ ಟ್ಯಾಲೆಂಟೆಡ್ ನಟರೊಂದಿಗೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದ್ದೆ ನನ್ನ ಅದೃಷ್ಟ, ಈ ಸಿನಿಮಾದ ಭಾಗವಾಗಲು ನಿಜವಾಗಿಯೂ ಸಂತೋಷವಾಗಿದೆ. ಬಾಲ ಕಲಾವಿದನಿಂದ ಈಗ ಕಣ್ಣಿನ ಶಸ್ತ್ರಚಿಕಿತ್ಸಕನಾಗುವವರೆಗಿನ (eye surgen) ನನ್ನ ಪ್ರಯಾಣ ಅದ್ಭುತವಾಗಿದೆ. ಈ ಬದಲಾವಣೆಯು ಅದ್ಭುತ ಅನುಭವಗಳು ಮತ್ತು ಅಧ್ಯಯನ ಎಲ್ಲವನ್ನೂ ಒಳಗೊಂಡು ಇಂದು ನನ್ನನ್ನ ಈ ಸ್ಥಾನಕ್ಕೆ ತಲುಪಿಸಿದೆ ಎಂದು ಅವರು ಹೇಳಿದ್ದಾರೆ.
"ನಟನೆಯ ದಿನಗಳಿಂದ ಕಲಿತ ಪಾಠಗಳು ಕಣ್ಣಿನ ಸರ್ಜನ್ ಆಗಿ ನನ್ನ ವೃತ್ತಿಜೀವನದಲ್ಲಿ ನನ್ನ ಕೆಲಸಕ್ಕೆ ಸ್ಫೂರ್ತಿ ನೀಡುತ್ತಲೇ ಇವೆ. ಈ ವಿಶಿಷ್ಟ ಹಾದಿಯ ಪ್ರತಿಯೊಂದು ಹೆಜ್ಜೆಗೂ ನಾನು ಕೃತಜ್ಞನಾಗಿದ್ದೇನೆ. ಈಗ ನಾನು ನಿಮ್ಮ ಕಣ್ಣಿನ ಆರೈಕೆಗಾಗಿ ಸೂಪರ್ ಹೀರೋ ಆಗಬಹುದು. ಮಿಕ್ಕಿಯ ಈ ಪೋಸ್ಟ್ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದು. ಒಬ್ಬರು "ನನಗೆ ನಿಮ್ಮ ಮೇಲೆ ಕ್ರಶ್ ಇತ್ತು. ನಿಮ್ಮ ಕಣ್ಣು ತುಂಬಾನೆ ಇಷ್ಟ ಆಗಿತ್ತು ಎಂದರೆ, ಇನ್ನೊಬ್ಬರು ಹೃತಿಕ್ ರೋಷನ್ ನಂತಹ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡಿದ್ದಕ್ಕೆ ನಿಮ್ಮ ಜೀವನ ಯಶಸ್ವಿಯಾಯಿತು ಎಂದು ಬರೆದುಕೊಂಡಿದ್ದಾರೆ.
ಮಿಕ್ಕಿ ಎಂಬಿಬಿಎಸ್ ಪದವಿ ಪಡೆದು , ಕಣ್ಣಿನ ತಜ್ಞರಾದರು. ಮಾಧ್ಯಮ ವರದಿಗಳ ಪ್ರಕಾರ, ಅವರು ಎಫ್ಐಸಿಒ ಮತ್ತು ಎಂಆರ್ಸಿಎಸ್ನಿಂದ ವೈದ್ಯಕೀಯ ವೃತ್ತಿಜೀವನದಲ್ಲಿ ಪ್ರಮಾಣಪತ್ರವನ್ನು ಸಹ ಪಡೆದಿದ್ದಾರೆ. 'ಕ್ರಿಶ್' ಚಿತ್ರದ ಹೊರತಾಗಿ, ಮಿಕ್ಕಿ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಇಷ್ಕ್ ವಿಶ್ಕ್', 'ಘರ್ವಾಲಿ ಬಹರ್ವಾಲಿ' ಟಿವಿ ಸೀರಿಯಲ್ ನಲ್ಲೂ (television serial) ನಟಿಸಿದ್ದರು, ಸದ್ಯ ಸಿನಿಮಾ ಜೀವನ ತೊರೆದು ಸಂಪೂರ್ಣವಾಗಿ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈನಲ್ಲಿ ಮೂರು ಕ್ಲಿನಿಕ್ ಗಳನ್ನ ಸಹ ಹೊಂದಿದ್ದಾರೆ.