ಮೀಜಾನ್ ಜಾಫ್ರಿ ಹೆಸರು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿಯೊಂದಿಗೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.
ಅವರ ರಿಲೆಷನ್‌ಶಿಪ್ ರೂಮರ್ ಕಾರಣದಿಂದ ವಿಷಯಗಳು ವಿಚಿತ್ರವಾಗಿದೆ. ಪೋಷಕರು ಸಹ ಇಬ್ಬರ ನಡುವಿನ ಸಂಬಂಧವೇನು ಎಂದು ಕೇಳುತ್ತಲೇ ಇರುತ್ತಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಮೀಜಾನ್.
ದೀರ್ಘಕಾಲದವರೆಗೆ ಯಾರೂ ನನ್ನನ್ನು ನವ್ಯಾ ಬಗ್ಗೆ ಕೇಳಲಿಲ್ಲ. ಸತ್ಯವನ್ನು ಹೇಳುವುದಾದರೆ, ನವ್ಯಾ ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರು ಮತ್ತು ನನ್ನ ಕಾರಣದಿಂದಾಗಿ, ಅವಳ ಹೆಸರು ಅನೇಕ ಸ್ಥಳಗಳಲ್ಲಿ ಬರುತ್ತದೆ. ಅದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ. ಇದು ಅವರ ಖಾಸಗಿ ಜೀವನ. ಅವರ ಕುಟುಂಬದ ಯಾವುದೇ ಸದಸ್ಯರ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಜಲ್ಸಾಗೆ ಹೋಗಲು ಹಿಂಜರಿಯುತ್ತೀರಾ ಎಂದು ಮೀಜಾನ್‌ಗೆ ಕೇಳಿದಾಗ ಹೌದು, ವಿಚಿತ್ರವೆನಿಸುತ್ತದೆ ಏಕೆಂದರೆ ಪಾಪರಾಜಿಗಳಿಗೆ ನನ್ನ ಕಾರ್ ಸಂಖ್ಯೆ ಇತ್ಯಾದಿ ತಿಳಿದಿದೆ ಮತ್ತು ನಾನು ನವ್ಯಾಳನ್ನು ಭೇಟಿಯಾಗಲು ಹೋದಾಗ ತಿಳಿಯುತ್ತದೆ.
ಅಷ್ಟೇ ಅಲ್ಲ, ಏನಾಗುತ್ತಿದೆ ಎಂದು ತಂದೆ ಜಾವೇದ್ ಜಾಫ್ರಿ ಕೂಡ ಆಶ್ಚರ್ಯ ಪಡುತ್ತಾರೆ. ಕೆಲವೊಮ್ಮೆ ಮನೆಗೆ ಪ್ರವೇಶಿಸಲು ಸಹ ವಿಚಿತ್ರವೆನಿಸುತ್ತದೆ. ನನ್ನ ಹೆತ್ತವರು ವಿಚಿತ್ರ ಕಣ್ಣುಗಳಿಂದ ನನ್ನನ್ನು ನೋಡುತ್ತಲೇ ಇರುತ್ತಾರೆ ಮತ್ತು ಏನಾಗುತ್ತಿದೆ ಎಂದು ಕೇಳುತ್ತಾರೆ? ಅದಕ್ಕೆ ನನ್ನ ಉತ್ತರ, ನನಗೆ ಏನೂ ಗೊತ್ತಿಲ್ಲ ಎನ್ನುತ್ತೇನೆ ಎಂದು ಮೀಜನ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ, ಮೀಜಾನ್ ನವ್ಯಾ ಅವರೊಂದಿಗಿನ ಸಂಬಂಧ ಮತ್ತು ವಿವಾಹದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಸಾರಾ ಅಲಿ ಖಾನ್, ನವ್ಯಾ ನವೇಲಿ ನಂದಾ ಮತ್ತು ಅನನ್ಯಾ ಪಾಂಡೆ ಅವರಲ್ಲಿ ಯಾರನ್ನು ಕೊಲ್ಲಲು, ಮದುವೆಯಾಗಲು ಮತ್ತು ಸಮಯ ಕಳೆಯಲು ಆಯ್ಕೆ ಮಾಡುತ್ತೀರಾ ಎಂದು ಮೀಜಾನ್‌ಗೆ ಕೇಳಲಾಯಿತು.
ನವ್ಯಾಳನ್ನು ಮದುವೆಯಾಗಲು, ಸಾರಾ ಅಲಿ ಖಾನ್ ಜೊತೆಬೆರೆಯಲು ಮತ್ತು ಅನನ್ಯಾ ಪಾಂಡೆಯನ್ನು ಕೊಲ್ಲಲು ಬಯಸುತ್ತೇನೆ ಎಂದು ಹೇಳಿದರು.
ಮೀಜಾನ್ ವೃತ್ತಿ ಜೀವನವನ್ನು ಸಂಜಯ್ ಲೀಲಾ ಭನ್ಸಾಲಿ ಅವರ ಮಲಾಲ್ ಚಿತ್ರದೊಂದಿಗೆ ಪ್ರಾರಂಭಿಸಿದರು.
ಈಗ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ ಮತ್ತು ಪ್ರಣೀತಾ ಸುಭಾಷ್ ಜೊತೆ ಹಂಗಮಾ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಜುಲೈ 23 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಬಿಗ್ ಬಿ ಮೊಮ್ಮಗಳು ನವ್ಯಾ ನವೇಲಿ ನಂದಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ನವ್ಯಾ ಕಳೆದ ವರ್ಷ 2020 ರ ಮೇನಲ್ಲಿ ಪದವಿ ವಿಷಯವನ್ನು ಸ್ವತಃ ಅಮಿತಾಬ್ ಫ್ಯಾನ್ಸ್ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು