ಈಕೆಯ ಮೊದಲೆರಡು ಚಿತ್ರ ಗಳಿಸಿದ್ದು ಬರೋಬ್ಬರಿ 2900 ಕೋಟಿ ರೂ! ಆದ್ರೆ ನಟನೆಗಿಂತ ಧರ್ಮನೇ ಹೆಚ್ಚು ಅಂತ ಬಾಲಿವುಡ್ ಬಿಟ್ಟ ನಟಿ

Published : Apr 13, 2024, 11:38 AM IST

ಚೊಚ್ಚಲ ಸಿನಿಮಾದಿಂದಲೇ ಸ್ಟಾರ್ ಆಗಿ ರಾಷ್ಟ್ರಪ್ರಶಸ್ತಿ ಪಡೆದ ಈ ನಟಿ ಈಗ ಗ್ಲಾಮರ್ ಲೋಕದಿಂದ ದೂರವಾಗಿದ್ದಾರೆ.

PREV
110
ಈಕೆಯ ಮೊದಲೆರಡು ಚಿತ್ರ ಗಳಿಸಿದ್ದು ಬರೋಬ್ಬರಿ 2900 ಕೋಟಿ ರೂ! ಆದ್ರೆ ನಟನೆಗಿಂತ ಧರ್ಮನೇ ಹೆಚ್ಚು ಅಂತ ಬಾಲಿವುಡ್ ಬಿಟ್ಟ ನಟಿ

ಚಿಕ್ಕ ವಯಸ್ಸಿನಲ್ಲಿ, ಚೊಚ್ಚಲ ಚಿತ್ರದಲ್ಲೇ ಸೂಪರ್‌ಸ್ಟಾರ್ ಆಗಿ, ರಾಷ್ಟ್ರಪ್ರಶಸ್ತಿ ಗಳಿಸಿ, ಬಾಲಿವುಡ್‌ನಲ್ಲಿ ಹಲವು ಅವಕಾಶಗಳ ಹೊಸ್ತಿಲಲ್ಲಿ  ನಿಂತಿದ್ದ ಈ ನಟಿ 3ನೇ ಚಿತ್ರಕ್ಕೇ ಚಿತ್ರರಂಗಕ್ಕೆ ಗುಡ್ ಬೈ ಹೇಳಿದಳು. 

210

ಯಾರಪ್ಪಾ ಈಕೆ ಅಂದ್ರಾ? ಇವಳೇ ದಂಗಲ್‌ನಲ್ಲಿ ಗೀತಾ ಫೋಗಟ್ ಬಾಲ್ಯದ ಪಾತ್ರ ಮಾಡಿದ್ದ, ನಂತರ ಸೀಕ್ರೆಟ್ ಸೂಪರ್‌ಸ್ಟಾರ್ ಆಗಿ ಜನಮನ ರಂಜಿಸಿದ ಝೈರಾ ವಾಸಿಂ.

310

ಝೈರಾ ವಾಸಿಮ್ ತನ್ನ 15 ನೇ ವಯಸ್ಸಿನಲ್ಲಿ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಜೊತೆಗೆ ನಟಿಸಿ ಭಾರೀ ಯಶಸ್ಸನ್ನು ನೋಡಿದರು. ಇದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಯಿತು.

410

ದಂಗಲ್‌ಗಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿ ಪಡೆದ ನಂತರ 'ಸೀಕ್ರೆಟ ಸೂಪರ್‌ಸ್ಟಾರ್' ಕೂಡಾ ಝೈರಾಗೆ ಯಶಸ್ಸನ್ನೇ ತಂದಿತು. ಕೇವಲ ಆಕೆಯೇ ಮುಖ್ಯಪಾತ್ರದಲ್ಲಿ ತುಂಬಿದ್ದ ಚಿತ್ರವು, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 912 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು.

510

ಎರಡು ವರ್ಷಗಳ ಕಾಲ ನಿರಂತರವಾಗಿ ಕೆಲವು ಪ್ರಶಸ್ತಿ ವಿಜೇತ ಪ್ರದರ್ಶನಗಳನ್ನು ನೀಡಿದ ನಂತರ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ರೂ 2900 ಕೋಟಿ ಗಳಿಸಿದ ನಂತರ, ನಟಿ ನಂತರ 'ದಿ ಸ್ಕೈ ಈಸ್ ಪಿಂಕ್‌'ನಲ್ಲಿ ಫರ್ಹಾನ್ ಅಖ್ತರ್, ರೋಹಿತ್ ಸರಾಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ನಟಿಸಿದರು. 

610

ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಆದಾಗ್ಯೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. ಆದರೆ, ಚಿತ್ರ ಬಿಡುಗಡೆಗೂ ಮುನ್ನವೇ ನಟಿ, ಮಟನೆಗೆ ನಿವೃತ್ತಿ ಘೋಷಿಷಿ ಎಲ್ಲರನ್ನೂ ಅಚ್ಚರಿಗೆ ದೂಡಿದರು. 

710

ಜೂನ್ 30, 2019 ರಂದು, ಝೈರಾ ವಾಸಿಮ್ ತನ್ನ ಧಾರ್ಮಿಕ ನಂಬಿಕೆಗಳು ಮತ್ತು ನಟನಾ ವೃತ್ತಿಗೆ ಘರ್ಷಣೆಯಾಗುತ್ತಿರುವುದರಿಂದ ತನ್ನ ನಟನಾ ವೃತ್ತಿಯನ್ನು ನಿಲ್ಲಿಸುವುದಾಗಿ ಘೋಷಿಸಿದರು.

810

ನವೆಂಬರ್ 2020 ರಲ್ಲಿ, ಝೈರಾ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವುದರಿಂದ ಸಾಮಾಜಿಕ ಮಾಧ್ಯಮದಿಂದ ತನ್ನ ಚಿತ್ರಗಳನ್ನು ತೆಗೆಯುವಂತೆ ಅಭಿಮಾನಿಗಳಿಗೆ ವಿನಂತಿಸಿದರು. 

910

'ಜನರು ತನಗೆ ಇಷ್ಟೊಂದು ಪ್ರೀತಿಯನ್ನು ನೀಡಿದ್ದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ. ಆದರೆ ಅಲ್ಲಾಗೆ ಶರಣಾಗುವ ಸಮಯ ಬಂದಿದೆ ಮತ್ತು ಗ್ಲಾಮರ್ ಪ್ರಪಂಚದಿಂದ ದೂರವಿರಲು ನಿರ್ಧರಿಸಿದ್ದೇನೆ' ಎಂದು ಝೈರಾ ಹೇಳಿದರು. 

1010

 ಝೈರಾ ವಾಸಿಮ್ ಪ್ರಸ್ತುತ ಕಾಶ್ಮೀರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಗ್ಲಾಮರ್ ಪ್ರಪಂಚದಿಂದ ದೂರವಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳ ಕುರಿತು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. 

Read more Photos on
click me!

Recommended Stories