ಟ್ಯಾನ್ ಆದ ಬೆನ್ನು ತೋರಿಸಿದ ದೀಪಿಕಾ ಪಡುಕೋಣೆ; 'ಆರ್‌ಕೆ' ಟ್ಯಾಟೂ ಮರೆಯಾದ ಬಗ್ಗೆ ನೆಟ್ಟಿಗರ ಕಣ್ಣು

Published : Apr 13, 2024, 10:42 AM IST

ತಾಯಿಯಾಗಲಿರುವ ದೀಪಿಕಾ ಪಡುಕೋಣೆ ತನ್ನ ಬೀಚ್‌ಸೈಡ್ ಬೇಬಿಮೂನ್‌ ಫೋಟೋ ಹಂಚಿಕೊಂಡಿದ್ದಾಳೆ. ಟ್ಯಾನ್ ಆದ ಬೆನ್ನು ತೋರಿಸಿದ್ದಾಳೆ. ಇದಕ್ಕೆ ಪತಿ ರಣವೀರ್ ಸಿಂಗ್ ಕೂಡಾ ಪ್ರತಿಕ್ರಿಯಿಸಿದ್ದಾರೆ. ಆದರೆ, ನೆಟ್ಟಿಗರ ಪ್ರತಿಕ್ರಿಯೆ ಮಾತ್ರ ಆಕೆಯ ಬೆನ್ನಿಂದ ಮರೆಯಾದ ಹಳೆ ಬಾಯ್‌ಫ್ರೆಂಡ್ ಹೆಸರು 'ಆರ್‌ಕೆ' ಮೇಲಿದೆ.

PREV
19
ಟ್ಯಾನ್ ಆದ ಬೆನ್ನು ತೋರಿಸಿದ ದೀಪಿಕಾ ಪಡುಕೋಣೆ; 'ಆರ್‌ಕೆ' ಟ್ಯಾಟೂ ಮರೆಯಾದ ಬಗ್ಗೆ ನೆಟ್ಟಿಗರ ಕಣ್ಣು

ತಾಯಿಯಾಗಲಿರುವ ದೀಪಿಕಾ ಪಡುಕೋಣೆ ತನ್ನ ಬೀಚ್‌ಸೈಡ್ ಬೇಬಿಮೂನ್‌ನ ಫೋಟೋವನ್ನು ಹಂಚಿಕೊಂಡಿದ್ದಾಳೆ. ಆದರೆ ನೆಟ್ಟಿಗರು ಆಕೆ ತೋರಿಸಿದ ಟ್ಯಾನ್ ಆದ ಬೆನ್ನನ್ನು ನೋಡೋದು ಬಿಟ್ಟು ಟ್ಯಾಟೂ ಇಲ್ಲದ ಬೆನ್ನಿನ ಬಗ್ಗೆ ಚರ್ಚೆ ಆರಂಭಿಸಿದರು.

29

ಸಧ್ಯ ಪತಿಯೊಂದಿಗೆ ವಿಶ್ರಾಂತಿಯಲ್ಲಿರುವ ಗರ್ಭಿಣಿ ದೀಪಿಕಾ ಟ್ಯಾನ್ ಆದ ಬೆನ್ನಿನ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಪತಿ ರಣ್ವೀರ್ ಪ್ರತಿಕ್ರಿಯಿಸಿ, 'ಆ ನಿಧಾನವಾದ ಜೀವನಕ್ಕೆ ನನ್ನ ಮತ್ತೆ ಕರೆದುಕೊಂಡು ಹೋಗು' ಎಂದು ನಿಟ್ಟುಸಿರಿಟ್ಟಿದ್ದಾರೆ. 

39

ಆದರೆ, ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು ಮಾತ್ರ ದೀಪಿಕಾ ಕತ್ತಿನ ಹಿಂಭಾಗದಲ್ಲಿ ಮರೆಯಾದ 'ಆರ್‌ಕೆ' ಟ್ಯಾಟೂ! ಆಕೆ ಇದನ್ನು ಹೇಗೆ ತೆಗೆಸಿರಬಹುದು ಎಂಬ ಚರ್ಚೆಯಲ್ಲವರು ತೊಡಗಿದರು. 

49

ದೀಪಿಕಾ ಹಿಂದೆ ಸಧ್ಯ ಆಲಿಯಾ ಭಟ್ ಪತಿಯಾಗಿರುವ ರಣಬೀರ್ ಕಪೂರ್ ಜೊತೆ ಪ್ರೀತಿಯಲ್ಲಿದ್ದರು. ಆಗ ಅದೇ ಜೋಷ್‌ನಲ್ಲಿ 'ಆರ್‌ಕೆ' ಎಂದು ಆತನ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದರು. 

59

ಆದರೆ, ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ. ರಣಬೀರ್ ದೀಪಿಕಾಗೆ ಕೈಕೊಟ್ಟ, ರಣವೀರ್ ಸಿಂಗ್ ಕೈ ಹಿಡಿದ. ಆದರೆ, ಹಚ್ಚೆಯ ಕತೆಯೇನು?

69

ಈ ಫೋಟೋವನ್ನು ದೀಪಿಕಾ ಪಡುಕೋಣೆ ಹಂಚಿಕೊಂಡ ತಕ್ಷಣ, ಅದನ್ನು ರೆಡ್ಡಿಟ್‌ನಲ್ಲಿ ಮರು-ಶೇರ್ ಮಾಡಲಾಗಿದೆ ಮತ್ತು ನೆಟಿಜನ್‌ಗಳು 'ಆರ್‌ಕೆ' ಟ್ಯಾಟೂವನ್ನು ಲೇಸರ್ ಮಾಡಿಸಿಕೊಂಡಿದ್ದಾರೆಯೇ ಎಂದು ಅಚ್ಚರಿ ಪಡುತ್ತಿದ್ದಾರೆ. 

79

ಫೋಟೋದಲ್ಲಿ ಆಕೆಯ ಕತ್ತಿನಲ್ಲಿ ಟ್ಯಾಟೂ ಮಸುಕಾಗಿ ಈಗಲೂ ಕೊಂಚ ಕಾಣುವುದನ್ನು ಕೂಡಾ ಕೆಲವರು ಗಮನಿಸಿದ್ದಾರೆ. ಲೇಸರ್ ಮಾಡಿಸಿಕೊಂಡರೆ ಪೂರ್ತಿ ಹೋಗುವುದಿಲ್ಲವೇ ಎಂದವರು ಕೇಳುತ್ತಿದ್ದಾರೆ. 

89

ಕಾಫಿ ವಿತ್ ಕರಣ್ 3 ರಲ್ಲಿ, ದೀಪಿಕಾ ಸೋನಮ್ ಕಪೂರ್ ಜೊತೆ ಭಾಗವಹಿಸಿದಾಗ,ನಟಿಯನ್ನು ಟ್ಯಾಟೂ ತೆಗೆಸಿಕೊಂಡಿದ್ದಾಳೆಯೇ ಎಂದು ಪ್ರಶ್ನಿಸಲಾಯಿತು. ತಾನು ಇನ್ನೂ ಆ ಹಚ್ಚೆ ಹಾಕಿಸಿಕೊಂಡಿದ್ದೇನೆ ಮತ್ತು ಅದನ್ನು ತೆಗೆಯುವ ಯಾವುದೇ ಯೋಜನೆ ಇಲ್ಲ ಇಂದು ನಟಿ ಹೇಳಿದ್ದಳು. ಇದಕ್ಕೆ ಸೋನಂ 'ಯುದ್ಧದ ಗುರುತುಗಳು' ಎಂದು ತಮಾಷೆ ಮಾಡಿದ್ದರು. 

99

ಆದರೆ ಈಗ ಆ ಟ್ಯಾಟೂ ದೀಪಿಕಾ ಬೆನ್ನಿಂದ ಮರೆಯಾಗಿದೆ. ಆರ್‌ಕೆ ಇನಿಷಿಯಲ್ಸ್ ತೆಗೆದು ದೀಪಿಕಾ ಅಲ್ಲಿ ಸಣ್ಣ ಹೂವಿನಂಥಾ ಡಿಸೈನ್ ಮಾಡಿಸಿಕೊಂಡಿರಬೇಕು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 

Read more Photos on
click me!

Recommended Stories