ದಿಶಾ ಪಟಾಣಿ ಧರಿಸಿದ ಮಿನಿ ಡ್ರೆಸ್‌ ಬೆಲೆ ಎಷ್ಟು ಗೊತ್ತಾ? ಅಬ್ಬಬ್ಬಾ.. ನಾವಾಗಿದ್ರೆ ಪರ್ಸನಲ್ ಲೋನ್ ಮಾಡ್ಬೇಕಷ್ಟೆ

First Published | Apr 12, 2024, 7:31 PM IST

ಬಾಲಿವುಡ್‌ ಹಾಟ್ ಬ್ಯೂಟಿ ದಿಶಾ ಪಟಾಣಿ ಸಿನಿಮಾಗಳಿಗಿಂತ ತಮ್ಮ ಮಾದಕ ಭಾವ ಭಂಗಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚುತ್ತಿರುತ್ತಾರೆ. ಬಗೆ ಬಗೆಯ ಫೋಟೋಗಳ ಮೂಲಕ ಟೆಂಪ್ರೇಚರ್‌ ಹೆಚ್ಚಿಸುತ್ತಿರುತ್ತಾರೆ ಇದೀಗ ಸ್ಟೈಲಿಶ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ನಟಿ ದಿಶಾ ಪಟಾಣಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ಫ್ಯಾಷನ್‌, ಟ್ರೆಂಡ್‌ನಲ್ಲೂ ಮುಂದು. ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ದಿಶಾ ಪಠಾನಿ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲು ಮಾತ್ರವಲ್ಲ  ತನ್ನ ಬ್ಯೂಟಿ ಶೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಬೆಳೆಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಆಕೆ ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಇದೀಗ ಪಿಂಕ್‌ ವರ್ಣದ ಮಿನಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

Tap to resize

ಗುಲಾಬಿ ಬಣ್ಣದ ಈ ಕಾಸ್ಟೂಮ್‌  ಉದ್ದನೆಯ ತೋಳುಗಳನ್ನು ಹೊಂದಿದ್ದು, ಮೆಟಾಲಿಕ್ ಪಿಂಕ್ 3 ಡಿ ಕರ್ವ್ ವಿನ್ಯಾಸವಿದೆ.ಈ ಸಿಂಪಲ್‌ ಮಿನಿ ಉಡುಗೆಯ ಬೆಲೆಯೂ ತುಂಬ ಕಾಸ್ಟ್ಲೀ. ಈ ಡ್ರೆಸ್‌ಗೆ ಬರೋಬ್ಬರಿ 1ಲಕ್ಷ 51 ಸಾವಿರ ರೂಪಾಯಿ.

ದಿಶಾ ಪಟಾನಿ ಬೋಲ್ಡ್ ಬ್ಯೂಟಿ ತೋರಿಸಿ ಹುಡುಗರ ಮನಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ದಿಶಾ ಸೌಂದರ್ಯದ ಬಗ್ಗೆ ನೆಟ್ಟಿಗರು ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ.

ದಿಶಾ ಪಠಾನಿ ನಟನೆಗಿಂತ ಗ್ಲಾಮರ್ ಹಾಗೂ ಲವ್ ಲೈಫ್​ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ  ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಇವರಿಬ್ಬರಿಗೆ ಸಂಬಂಧಿಸಿದ ಹಲವು ಫೋಟೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಾಲಿವುಡ್‌ಗಿಂತ ಸೌತ್‌ನ ಸಾಲು ಸಾಲು ಸಿನಿಮಾಗಳಲ್ಲಿಯೇ ದಿಶಾ ಬಿಜಿಯಾಗಿದ್ದಾರೆ.  ಪ್ರಭಾಸ್‌ ಜತೆಗಿನ ಕಲ್ಕಿ  2898 ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೂರ್ಯ ಜತೆಗೆ ಕಂಗುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. 

ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ವೆಲ್‌ಕಮ್‌ ಟು ಜಂಗಲ್‌ ಸಿನಿಮಾದಲ್ಲೂ ದಿಶಾ ನಟಿಸುತ್ತಿದ್ದಾರೆ. ಅಕ್ಷಯ್‌ ಕುಮಾರ್‌, ಸಂಜಯ್‌ ದತ್‌, ಸುನೀಲ್‌ ಶೆಟ್ಟಿ ಸೇರಿ ಬಹುತಾರಾಗಣದ ಸಿನಿಮಾ ಇದಾಗಿದೆ. 

Latest Videos

click me!