18ಕ್ಕೆ ಮದುವೆಯಾಗಿ 2 ಬಾರಿ ವಿಚ್ಚೇದನ ಪಡೆದ ಈ ನಟಿಗೆ 43 ಆದ್ರೂ ಸೌಂದರ್ಯ ಕುಗ್ಗಿಲ್ಲ!

Published : Oct 06, 2023, 04:40 PM ISTUpdated : Oct 06, 2023, 04:47 PM IST

ಭಾರತೀಯ ಚಲನಚಿತ್ರೋದ್ಯಮದಲ್ಲೂ ಜನಪ್ರಿಯ ಹೆಸರು. ಪ್ರಸ್ತುತ ಟಿವಿ ಉದ್ಯಮದ ಟಾಪ್ ನಟಿಯರಲ್ಲಿ ಒಬ್ಬರು. 43ರ ಹರೆಯದಲ್ಲೂ  ಫಿಟ್ನೆಸ್ ವಿಚಾರದಲ್ಲಿ ಇಂದಿನ ಯುವ ನಟಿಯರಿಗೆ ಪೈಪೋಟಿ ನೀಡಬಲ್ಲ ಸುಂದರಿ. ಇಬ್ಬರು ಮಕ್ಕಳ ತಾಯಿಯಾದ್ರೂ, ಈ ನಟಿಯ ಸೌಂದರ್ಯ ಈ ವಯಸ್ಸಲ್ಲೂ  ಒಂದು ಚೂರು ಮಾಸಿಲ್ಲ. 18ರ ವಯಸ್ಸಿನಲ್ಲಿ ಮದುವೆಯಾದ ಈ ನಟಿ ಎರಡು ಬಾರಿ ವಿಚ್ಚೇಧನದ ನೋವು ಎದುರಿಸಿದ್ದಾರೆ. ಯಾರು ಆ ನಟಿ? 

PREV
110
18ಕ್ಕೆ ಮದುವೆಯಾಗಿ 2 ಬಾರಿ ವಿಚ್ಚೇದನ ಪಡೆದ ಈ ನಟಿಗೆ 43 ಆದ್ರೂ ಸೌಂದರ್ಯ ಕುಗ್ಗಿಲ್ಲ!

ಶ್ವೇತಾ ತಿವಾರಿ ದೂರದರ್ಶನ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಭಾರತೀಯ ಚಲನಚಿತ್ರೋದ್ಯಮದಲ್ಲೂ ಜನಪ್ರಿಯ ಹೆಸರು. ಶ್ವೇತಾ ತಿವಾರಿ ಪ್ರಸ್ತುತ ಟಿವಿ ಉದ್ಯಮದ ಟಾಪ್ ನಟಿಯರಲ್ಲಿ ಒಬ್ಬರು. 43ರ ಹರೆಯದಲ್ಲೂ ಶ್ವೇತಾ ತಿವಾರಿ ಫಿಟ್ನೆಸ್ ವಿಚಾರದಲ್ಲಿ ಇಂದಿನ ಯುವ ನಟಿಯರಿಗೆ ಪೈಪೋಟಿ ನೀಡಬಲ್ಲರು. 

210

ಶ್ವೇತಾ ತಿವಾರಿ ಅವರು ತಮ್ಮ ವೃತ್ತಿಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನವೂ ಯಾವಾಗಲೂ ಪ್ರಕ್ಷುಬ್ಧತೆಯಿಂದ ಕೂಡಿತ್ತು. ನಟಿಗೆ ಅತೀ ಸಣ್ಣ ಅಂದರೆ 18ನೇ ವಯಸ್ಸಿನಲ್ಲಿ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಎರಡು ಬಾರಿಗೆ ಈ ನಟಿಗೆ ವಿಚ್ಚೇದನದ ನೋವು ಸಿಕ್ಕಿದೆ.
 

310

ಶ್ವೇತಾ ತಿವಾರಿ ಕೇವಲ 12 ನೇ ವಯಸ್ಸಿನಲ್ಲಿ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬಾಲಿವುಡ್ ಮತ್ತು ಧಾರಾವಾಹಿಗಳತ್ತ ಮುಖ ಮಾಡುವ ಮೊದಲು, ಶ್ವೇತಾ ತಿವಾರಿ ಭೋಜ್‌ಪುರಿ ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿದ್ದರು. 

410

ಶ್ವೇತಾ ತಿವಾರಿ ಕೇವಲ 12 ನೇ ವಯಸ್ಸಿನಲ್ಲಿ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬಾಲಿವುಡ್ ಮತ್ತು ಧಾರಾವಾಹಿಗಳತ್ತ ಮುಖ ಮಾಡುವ ಮೊದಲು, ಶ್ವೇತಾ ತಿವಾರಿ ಭೋಜ್‌ಪುರಿ ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿದ್ದರು. 

510

ಶ್ವೇತಾ ತಿವಾರಿ ಮತ್ತು ರಾಜಾ ಚೌಧರಿ ಸ್ವಲ್ಪ ಸಮಯದವರೆಗೆ ಸಂಬಂಧದಲ್ಲಿದ್ದರು. ಬಳಿಕ ಇಬ್ಬರೂ ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.  ಶ್ವೇತಾ ತಿವಾರಿ ಮದುವೆಯಾಗುವಾಗ ಕೇವಲ 18 ವರ್ಷ ವಯಸ್ಸಿನವರಾಗಿದ್ದರು ಮತ್ತು ಅವರ ಕುಟುಂಬವು ರಾಜಾ ಚೌಧರಿ ಅವರೊಂದಿಗಿನ ಸಂಬಂಧವನ್ನು ಬಲವಾಗಿ ವಿರೋಧಿಸಿತ್ತು. ಆದರೆ ನಟಿ ನಿರ್ದೇಶಕರನ್ನು ತುಂಬಾ ಆಳವಾಗಿ ಪ್ರೀತಿಸುತ್ತಿದ್ದರು. ಕುಂಬದ ಇಚ್ಛೆಗೆ ವಿರುದ್ಧವಾಗಿ ರಾಜಾರನ್ನು ವಿವಾಹವಾದರು. 

610

9 ವರ್ಷಗಳ ಕಾಲ ಸಂತೋಷದ ದಾಂಪತ್ಯ ಜೀವನ ನಡೆಸಿದ ನಂತರ, 2007 ರಲ್ಲಿ, ಶ್ವೇತಾ ತಿವಾರಿ ಮತ್ತು ರಾಜಾ ಚೌಧರಿ ನಡುವಿನ ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದವು ಮತ್ತು ಅಂತಿಮವಾಗಿ ವಿಚ್ಛೇದನ ಪಡೆಯುವ ಮೂಲಕ ದಂಪತಿಗಳು ಬೇರೆಯಾದರು. 

710

ಈ ದಾಂಪತ್ಯದಿಂದ ದಂಪತಿಗೆ ಹೆಣ್ಣು ಮಗುವೂ ಇದೆ. ವಿಚ್ಛೇದನದ ನಂತರ, ಶ್ವೇತಾ ತಿವಾರಿ ತನ್ನ ಮಗಳು ಪಾಲಕ್ ತಿವಾರಿಯನ್ನು ತಾನೇ ಪಡೆದು ಬೆಳೆಸಿದರು. ಈಗ ಮಗಳಿಗೆ 22 ವರ್ಷವಾಗಿದೆ. 

810

ವರ್ಷಗಟ್ಟಲೆ ಒಂಟಿ ತಾಯಿಯಾಗಿ ಜೀವನ ನಡೆಸಿದ ನಂತರ 2013ರಲ್ಲಿ ಶ್ವೇತಾ ತಿವಾರಿಗೆ ಮತ್ತೊಮ್ಮೆ ಪ್ರೀತಿಯಾಯ್ತು. ಹೊಸ ಬದುಕಿನ ಬಾಗಿಲು ತಟ್ಟಿತು.  ತನ್ನ ಸ್ನೇಹಿತ ಅಭಿನವ್ ಕೊಹ್ಲಿಯನ್ನು ಮದುವೆಯಾದಳು. 

 

910

ತಿವಾರಿ ಮತ್ತು ನಟ ಅಭಿನವ್ ಕೊಹ್ಲಿ ಮೂರು ವರ್ಷಗಳ ಡೇಟಿಂಗ್ ನಂತರ 13 ಜುಲೈ 2013 ರಂದು ವಿವಾಹವಾದರು. 27 ನವೆಂಬರ್ 2016 ರಂದು, ತಿವಾರಿ ತಮ್ಮ ಮಗ ರಿಯಾನ್ಸ್ ಕೊಹ್ಲಿಗೆ ಜನ್ಮ ನೀಡಿದರು.

 

1010

ಆದರೆ ಈ ಬಾರಿಯೂ ನಟಿಯ ಖುಷಿ ಹೆಚ್ಚು ದಿನ ಉಳಿಯಲಿಲ್ಲ. 2019 ರಲ್ಲಿ ಅಭಿನವ್ ಕೊಹ್ಲಿಗೆ ವಿಚ್ಛೇದನ ನೀಡಿದರು. ಮತ್ತೆ ಈಗ ನಟಿ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ. ಇಂದಿಗೂ, ಶ್ವೇತಾ ತಿವಾರಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಚೆನ್ನಾಗಿ ಸಮತೋಲನಗೊಳಿಸುತ್ತಾರೆ. ಈಗ ಮಗ ರಿಯಾನ್ಸ್ ಅನ್ನು ಕೂಡ ಶ್ವೇತಾ ತಿವಾರಿಯೇ ನೋಡಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories