ಪ್ರೇಯಸಿ ಜಾಕ್ವೆಲಿನ್ ಫೋಟೋಗೆ ಕಾಮೆಂಟ್: ಗಾಯಕ ಮಿಕಾ ಸಿಂಗ್‌ಗೆ ನೊಟೀಸ್ ಕಳುಹಿಸಿದ ಸುಕೇಶ್ ಚಂದ್ರಶೇಖರ್

First Published | Oct 6, 2023, 3:50 PM IST

ಕೆಲದಿನಗಳ ಹಿಂದೆ ಸುಕೇಶ್‌ ಚಂದ್ರಶೇಖರ್‌ ಜೈಲಿನಿಂದಲೇ ಪ್ರೇಮಿಗಳ ದಿನಕ್ಕೆ ಪ್ರೇಯಸಿ ಜಾಕ್ವೆಲಿನ್‌ಗೆ ಪ್ರೇಮಪತ್ರ ಬರೆದು ಸುದ್ದಿಯಾಗಿದ್ದ. ಈಗ ಮತ್ತೆ ಜೈಲಿನಿಂದಲೇ ನೋಟೀಸ್ ನೀಡಿ ಸುದ್ದಿಯಾಗಿದ್ದಾನೆ. 

Jacqueline

ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಈಗ ಜೈಲಿನಿಂದಲೇ  ಗಾಯಕ ಮಿಕಾ ಸಿಂಗ್‌ಗೆ ಲೀಗಲ್ ನೋಟಿಸ್‌ ಕಳುಹಿಸಿದ್ದಾನೆ. ಆದರೆ ಯಾವ ಕಾರಣಕ್ಕೆ ಈ ಲೀಗಲ್ ನೋಟಿಸ್ ಕಳಿಸಿದ್ದಾನೆ ಎಂಬುದನ್ನು ತಿಳಿದರೆ ಅಚ್ಚರಿಯಾಗೋದು ಗ್ಯಾರಂಟಿ.

Jacqueline

ಇತ್ತೀಚೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಲಿವುಡ್‌ ಆಕ್ಷನ್‌ ಸ್ಟಾರ್‌ ಜೀನ್ ಕ್ಲೌಡಿ ವಾನ್ ಡಮ್ಮೆ ಅವರ ಜೊತೆಗಿನ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಗಾಯಕ ಮಿಕಾ ಸಿಂಗ್‌ ಮಾಡಿದ ಕಾಮೆಂಟ್‌ನಿಂದ ಸುಕೇಶ್‌ ಚಂದ್ರಶೇಖರ್ ಆಕ್ರೋಶಗೊಂಡಿದ್ದು, ಮಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 

Tap to resize

Jacqueline

ಇಟಲಿಯಲ್ಲಿ ಮೋಜು ಮಾಡುತ್ತಿದ್ದೇವೆ ಎಂದು ಊಹಿಸಿಕೊಳ್ಳಿ ಎಂದು ಬರೆದು ನಟಿ ಜಾಕ್ವೆಲಿನ್‌, ಹಾಲಿವುಡ್‌ ಆಕ್ಷನ್‌ ಸ್ಟಾರ್‌ ಜೀನ್ ಕ್ಲೌಡಿ ವಾನ್ ಡಮ್ಮೆ ಜೊತೆಗಿನ ತಮ್ಮ ಫೋಟೋ ಪೋಸ್ಟ್ ಮಾಡಿದ್ದರು. 

Jacqueline

ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಗಾಯಕ ಮಿಕಾ ಸಿಂಗ್, 'ನೀವು ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ, ಈತ ಸುಕೇಶ್‌ಗಿಂತ ಚೆನ್ನಾಗಿದ್ದಾನೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ ನಂತರದಲ್ಲಿ ಆ ಕಾಮೆಂಟ್‌ನ್ನು ಮಿಕಾ ಡಿಲೀಟ್ ಮಾಡಿದ್ದರು.  ಆದರೆ ಈ ಕಾಮೆಂಟ್‌ ನೋಡಿದ ಸುಕೇಶ್ ಚಂದ್ರಶೇಖರ್‌ಗೆ ಮೈಯೆಲ್ಲಾ ಉರಿದಿದ್ದು, ಮಿಕಾ ವಿರುದ್ಧ ನೊಟೀಸ್ ಕಳುಹಿಸಿದ್ದಾರೆ. 

Jacqueline

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಈ ಕಾಮೆಂಟ್‌ನ ಕಾರಣಕ್ಕೆ ಮಿಕಾ ಸಿಂಗ್ ವಿರುದ್ಧ ಸುಕೇಶ್ ಚಂದ್ರಶೇಖರ್ ವಕೀಲ ಅನಂತ್ ಮಲಿಕ್‌ ನೊಟೀಸ್ ಕಳುಹಿಸಿದ್ದಾರೆ. ಅದರಲ್ಲೇನಿದೆ ಅನ್ನೋದು ಇಲ್ಲಿದೆ ಮುಂದೆ ಓದಿ

Jacqueline

ನಿಮ್ಮ ಈ ಕಾಮೆಂಟ್‌ ನಮ್ಮ ದೂರುದಾರರ(client) ಬಗ್ಗೆ ಸಾರ್ವಜನಿಕ ದ್ವೇಷವನ್ನು ಪ್ರಚೋದಿಸುವಂತಿದೆ. ಹಾಗೂ ಅವರ ವ್ಯಕ್ತಿತ್ವವನ್ನು ಅವಮಾನಿಸುವಂತಿದೆ. ಅಲ್ಲದೇ ಮಾಧ್ಯಮಗಳಲ್ಲಿ ಅವರ ಬಗ್ಗೆ ಚರ್ಚಿಸುವಂತೆ ಮಾಡಿದೆ. ಇದು ಅವರ ಪ್ರಸ್ತುತ ಮಾನಸಿಕ ತೊಳಲಾಟವನ್ನು ಹೆಚ್ಚಿಸುವಂತಿದೆ.

Jacqueline

 ಇದರ ಜೊತೆಗೆ ಮಾಧ್ಯಮಗಳ ನಿರಂತರ ಪರಿಶೀಲನೆ ಅವರ ಮಾನಸಿಕ ಆರೋಗ್ಯಕ್ಕೆ ಸವಾಲೊಡ್ಡುವಂತಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮಾನಹಾನಿಕರ ಕಾಮೆಂಟ್‌ಗಾಗಿ ನೋಟೀಸ್ ನೀಡಲಾಗುತ್ತಿದೆ. ನಿಮ್ಮ ಅವಹೇಳನಕಾರಿ ಕಾಮೆಂಟ್‌ನಿಂದಾಗಿ ನೀವು ಮಾನನಷ್ಟದ ಗಂಭೀರ ಕ್ರಿಮಿನಲ್ ಅಪರಾಧವನ್ನು ಮಾಡಿದ್ದೀರಿ ಎಂಬುದನ್ನು  ನಿಮಗೆ ಈ ಮೂಲಕ ತಿಳಿಸಲಾಗುತ್ತಿದೆ.

Jacqueline

ನಿಮ್ಮ ಮೇಲಿನ ಆರೋಪಕ್ಕೆ ಭಾರತೀಯ ದಂಡ ಸಂಹಿತೆ 1860ರ  ಸೆಕ್ಷನ್ 499/500 ರ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಸಾಧ್ಯ ಎಂದು ನೊಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ. 

Jacqueline

ಕಿಕ್‌, ರೇಸ್‌ 2, ರೇಸ್ 3  ಸೇರಿದಂತೆ ಬಾಲಿವುಡ್‌ನ ಹಲವು ಯಶಸ್ವಿ ಸಿನಿಮಾಗಳಲ್ಲಿ ಈ ಶ್ರೀಲಂಕನ್‌ ಬ್ಯೂಟಿ ಜಾಕ್ವೆಲಿನ್ ಅವರು ನಟಿಸಿದ್ದಾರೆ. ಇತ್ತೀಚೆಗೆ ಅವರು  ಹಾಲಿವುಡ್‌ ಆಕ್ಷನ್‌ ಸ್ಟಾರ್‌ ಜೀನ್ ಕ್ಲೌಡಿ ವಾನ್ ಡಮ್ಮೆ ಜೊತೆಗಿನ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. 

Jacqueline

ಸುಕೇಶ್‌ ಚಂದ್ರಶೇಖರ್‌ ಬಂಧನವಾಗುವುದಕ್ಕೂ ಮೊದಲು ಜಾಕ್ವೆಲಿನ್ (Jacqueline Fernandez) ಹಾಗೂ ಸುರೇಶ್‌ ಇಬ್ಬರು ಪ್ರೇಮ ಸಂಬಂಧದಲ್ಲಿದ್ದರು ಎಂದು ವರದಿಯಾಗಿತ್ತು. ಅಲ್ಲದೇ ಸುಕೇಶ್ ಚಂದ್ರಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ (money laundering case) ಪ್ರಕರಣದಲ್ಲಿ ಭಾಗಿಯಾದ್ದಾಳೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಜಾಕ್ವೆಲಿನ್‌ಳನ್ನು ಕೂಡ ವಿಚಾರಣೆ ನಡೆಸಿತ್ತು. 

ಹಾಲಿವುಡ್‌ ಆಕ್ಷನ್‌ ಸ್ಟಾರ್‌ ಜೀನ್ ಕ್ಲೌಡಿ ವಾನ್ ಡಮ್ಮೆ ಜೊತೆ ಜಾಕ್ವೆಲಿನ್

ಇನ್ನು ಜಾಕ್ವೆಲಿನ್ ಸಿನಿಮಾ ಬಗ್ಗೆ ಹೇಳುವುದಾದರೆ ಜಾಕ್ವೆಲಿನ್‌  ಕೊನೆಯದಾಗಿ 2022ರಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಹಾಸ್ಯಪ್ರಧಾನ ಸಿನಿಮಾ ಸರ್ಕಸ್‌ನಲ್ಲಿ ರಣ್‌ವೀರ್‌ ಸಿಂಗ್ ಹಾಗೂ ಪೂಜಾ ಹೆಗ್ಡೆ ಜೊತೆ ನಟಿಸಿದ್ದರು. ಆದರೆ ಈ ಸಿನಿಮಾ ಫ್ಲಾಪ್ ಆಗಿತ್ತು. ಪ್ರಸ್ತುತ ಆಕೆ ಸೋನು ಸೂದ್ ಜೊತೆ ಫತ್ಹೆ ಎಂಬ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. 

Jacqueline

ಇದರಾಚೆಗೆ ಅಕ್ಷಯ್‌ ಕುಮಾರ್ ಜೊತೆಗೆ ಕಾಮಿಡಿ ಸಿನಿಮಾ ವೆಲ್‌ಕಮ್‌ ಟು ದ ಜಂಗಲ್‌ನಲ್ಲಿಯೂ ನಟಿಸುತ್ತಿದ್ದಾರೆ. ರವೀನಾ ಟಂಡನ್, ದಿಶಾ ಪಟಾನಿ ಕೂಡ ಈ ವೆಲ್‌ಕಮ್‌ ಟು ದ ಜಂಗಲ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣುವ ಸಾಧ್ಯತೆ ಇದೆ. 

Latest Videos

click me!