ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಜಿಮ್ ಫ್ಯಾಶನ್ ಸೆನ್ಸ್ ಕೊಂಚವೂ ಇರಲಿಲ್ಲ ಎಂದು ಆಕೆಯ ಮಾಜಿ ಜಿಮ್ ತರುಬೇತುದಾರ ಯಾಸ್ಮಿನ್ ಕರಾಚಿವಾಲಾ ಹೇಳಿದ್ದಾರೆ. ಇದಕ್ಕೆ ನೆಟಿಜನ್‌ಗಳು ಕೆರಳಿದ್ದಾರೆ.
ಬಾಲಿವುಡ್‌ನ ಬಹು ಬೇಡಿಕೆಯ ನಟಿಯರಲ್ಲಿ ಆಲಿಯಾ ಭಟ್ ಕೂಡಾ ಒಬ್ಬರು. ನಟನೆಯ ಜೊತೆಗೆ, ವಿವಿಧ ಸಾರ್ವಜನಿಕ ಪ್ರದರ್ಶನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಆಕೆಯ ಫ್ಯಾಷನ್ ಆಯ್ಕೆಗಳಿಗಾಗಿ ಜನರು ನಟಿಯನ್ನು ಫಾಲೋ ಮಾಡುತ್ತಾರೆ.
210
ಆದರೆ, ಆಕೆಯ ಮಾಜಿ ಫಿಟ್‌ನೆಸ್ ತರಬೇತುದಾರರಲ್ಲಿ ಒಬ್ಬರಾದ ಯಾಸ್ಮಿನ್ ಕರಾಚಿವಾಲಾ, ನಟಿ ತನ್ನ ನಟನಾ ವೃತ್ತಿಜೀವನದ ಆರಂಭದಲ್ಲಿ ಜಿಮ್ ಫ್ಯಾಶನ್ ಅನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
310
ಯಾಸ್ಮಿನ್ ಹಾಗೆ ಹೇಳುತ್ತಿರುವ ವಿಡಿಯೋವನ್ನು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದು, ನೆಟಿಜನ್‌ಗಳು ಅದಕ್ಕೆ ಬಲವಾಗಿ ಪ್ರತಿಕ್ರಿಯಿಸಿದ್ದಾರೆ.
410
aliya bhatt
ಯಾಸ್ಮಿನ್ ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಾಗಿದ್ದು, ಅವರು ದಶಕಗಳ ಕಾಲ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸೋಫಿ ಚೌದ್ರಿ ಮತ್ತು ಇತರ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳಿಗೆ ತರಬೇತಿ ನೀಡಿದ್ದಾರೆ.
510
ವಿಡಿಯೋದಲ್ಲಿ ಯಾಸ್ಮಿನ್ ಹೇಳಿದ್ದಾರೆ, 'ಆಲಿಯಾ ನನ್ನ ಬಳಿ ಫಿಟ್ನೆಸ್‌ಗೆ ಬರುತ್ತಿದ್ದಾಗ ತುಂಬಾ ಯಂಗ್ ಆಗಿದ್ದಳು. ಶಾಂದಾರ್ ಚಿತ್ರಕ್ಕೆ ಬಿಕನಿ ಧರಿಸಬೇಕಾಗಿತ್ತು ಆಕೆ. ಜಿಮ್‌ಗೆ ಆಗ ಆಕೆ ಯಾವ ಯಾವುದೋ ಬಟ್ಟೆ ಧರಿಸಿ ಬರುತ್ತಿದ್ದಳು.'
610
'ಆಗೆಲ್ಲ ನಾನು ಆಲಿಯಾ ನಿನ್ನ ಟಾಪ್ ಬಾಟಂಗೆ ಮ್ಯಾಚ್ ಆಗುತ್ತಿಲ್ಲ, ನಿನ್ನ ಶೂಗಳು ಬಟ್ಟೆಗೆ ಮ್ಯಾಚ್ ಆಗುತ್ತಿಲ್ಲ, ಇಂಥ ಬಣ್ಣದ ಬಟ್ಟೆ ಧರಿಸಬೇಕೆಂದೆಲ್ಲ ಹೇಳುತ್ತಿದ್ದೆ. ಆಗ ಆಲಿಯಾ, ನಾನು ಯಾವುದೋ ಜೈಲಿಗೆ ಬಂದಂತೆನಿಸುತ್ತಿದೆ. ಜೈಲರ್ ಸದಾ ನನ್ನನ್ನು ಬೈಯ್ಯುತ್ತಿರುವಂತೆನಿಸುತ್ತದೆ ಎನ್ನುತ್ತಿದ್ದಳು' ಎಂದಿದ್ದಾರೆ.
710
ಯಾಸ್ಮಿನ್ ಹೇಳಿಕೆಗೆ ನೆಟಿಜನ್‌ಗಳ ಪ್ರತಿಕ್ರಿಯೆ
ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಆಲಿಯಾ ಅವರ ಜಿಮ್ ಫ್ಯಾಶನ್ ಬಗ್ಗೆ ಯಾಸ್ಮಿನ್ ಅವರ ಹೇಳಿಕೆಗೆ ನೆಟಿಜನ್‌ಗಳು ಪ್ರತಿಕ್ರಿಯಿಸಲು ಪ್ರಾರಂಭಿಸಿದರು.
810
ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ, 'ಈಕೆ ಹೀಗೆ ಮಾತಾಡುವುದರಿಂದಲೇ ಈಗ ಅವಳು ಆಲಿಯಾಗೆ ತರಬೇತುದಾರಳಲ್ಲ' ಎಂದಿದ್ದಾರೆ.
910
ಮತ್ತೊಬ್ಬ ನೆಟಿಜನ್, 'ಜಿಮ್ ಎನ್ನುವುದು ನಿಮ್ಮ ಬಟ್ಟೆಗಳನ್ನು ಹೊಂದಿಸಿ ಹೋಗುವ ಫ್ಯಾಶನ್ ಶೋ ಅಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.
1010
ಇನ್ನೂ ಒಂದು ಕಾಮೆಂಟ್ 'ಯಾಸ್ಮಿನ್ ಎಂತಹ ವಿಲಕ್ಷಣತೆ. ಜನರು ತಮ್ಮ ತಾಲೀಮು ಅವಧಿಗೆ ಆರಾಮದಾಯಕವಾಗಿರುವ ಏನನ್ನೂ ಧರಿಸಬಹುದು. ಜಿಮ್‌ಗೆ ಹೋಗುವುದು ಬಟ್ಟೆಯ ಶೋ ಆಫ್‌ಗೆ ಅಲ್ಲ,' ಎಂದಿದ್ದಾರೆ.