ಬಟ್ಟೆಯನ್ನು ನಿಮಗೆ ಸರಿಯಾಗಿ ಹಾಕಿಕೊಳ್ಳಲು ಬರುವುದಿಲ್ಲವೇ? ಜನರ ಅಟೆಂಶನ್ ಪಡೆದುಕೊಳ್ಳಲು ಎಂಥ ದಾರಿ ಬೇಕಾದರೂ ಹಿಡಿಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಉರ್ಫಿ ಉಡುಗೆ ಸಂಪೂರ್ಣ ಭಿನ್ನವಾಗಿತ್ತು. ಅವರು ಧರಿಸಿದ್ದ ವಿಶಿಷ್ಟ ಪ್ಯಾಂಟ್ ಬಟನ್ ಓಪನ್ ಆಗಿದ್ದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ.
ಸೋಶಿಯಲ್ ಮೀಡಿಯಾ ಮತ್ತು ಜನರ ಅಟೆಂಶನ್ ಪಡೆದುಕೊಳ್ಳಲೇ ನೀವು ಈ ರೀತಿ ಮಾಡುತ್ತಿದ್ದರಿ ಎಂದಿರುವ ನೆಟ್ಟಿಗರು ಸರಿಯಾಗಿಯೇ ಟ್ರೋಲ್ ಮಾಡಿದ್ದಾರೆ.
ನನ್ನ ಚಿತ್ರ ಅಡಲ್ಟ್ ಸೈಟ್ ಒಂದರಲ್ಲಿ ಅಪ್‍ಲೋಡ್ ಆದಾಗ, ಕುಟುಂಬದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ನನ್ನನ್ನು ಪೋರ್ನ್ ಸ್ಟಾರ್ ಎಂದು ಬಿಂಬಿಸಿದ್ದರು ಎಂದು ನಟಿ ಈ ಹಿಂದೆ ನೊಂದು ನುಡಿದಿದ್ದರು.
ಸೋಶಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಫಾಲೋವರ್ ಹೊಂದಿರುವ ನಟಿ ಫ್ಯಾಷನ್ ತಂತ್ರಗಳನ್ನು ಹೇಳಿ ಕೊಡುತ್ತಾರೆ. ಆಗಾಗ ಹಾಟ್ ಪೋಟೋ ಹಂಚಿಕೊಳ್ಳುವುದು ಅವರ ಅಭ್ಯಾಸ.
ಒಟಿಟಿ ಮಾದರಿಯ ಬಿಗ್ ಬಾಸ್ ನಲ್ಲಿ ಸೆಕ್ಸ್ ನಡೆದಿದೆ..ಕ್ಯಾಮರಾದಲ್ಲಿ ತೋರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಬಾಂಬ್ ಸಿಡಿಸಿದ್ದ ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ ಧರಿಸಿ ಟ್ರೋಲ್ ಆಗಿದ್ದರು. ಈಗ ಅದನ್ನು ಮೀರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಹಾಜರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡು ವಿವಾದದ ಬೆಂಕಿ ಹಚ್ಚಿದ್ದರು. ಪ್ಲಾಸ್ಟಿಕ್ ಬ್ಯಾಗ್ ಅನ್ನೇ ಮನೆಯಲ್ಲಿ ತಮ್ಮ ಉಡುಗೆ ಮಾಡಿಕೊಂಡಿದ್ದರು.