ನಿಖಿಲ್ ಕಾಮತ್ ಜೊತೆಗಿನ ರಿಲೇಶನ್‌ಶಿಪ್‌ಗೆ ಮಾನುಶಿ ಬ್ರೇಕ್, ರಿಯಾ ಎಂಟ್ರಿಯಿಂದ ಚಿಲ್ಲರ್ ಔಟ್!

First Published | Aug 31, 2023, 11:23 AM IST

ಶ್ರೀಮಂತ ಉದ್ಯಮಿ, ಝೆರೋಧಾ ಕಂಪನಿ ಸಂಸ್ಥಾಪಕ ನಿಖಿಲ್ ಕಾಮತ್ ಇದೀಗ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಜೊತೆ  ಡೇಟಿಂಗ್ ಮಾಡುತ್ತಿದ್ದಾರೆ. ಈ ರಹಸ್ಯ ಡೇಟಿಂಗ್ ತಿಳಿಯುತ್ತಿದ್ದಂತೆ ವಿಶ್ವ ಸುಂದರಿ ಮಾನುಶಿ ಚಿಲ್ಲರ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.

ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಗೆಳತಿ  ರಿಯಾ ಚಕ್ರವರ್ತಿ ಜೊತೆ ನಿಖಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿತ್ತು. 

ನಿಖಿಲ್ ಕಾಮತ್ ಹಾಗೂ ರಿಯಾ ಚಕ್ರವರ್ತಿ ರಹಸ್ಯ ಡೇಟಿಂಗ್ ವಿಚಾರ ತಿಳಿಯುತ್ತಿದ್ದಂತೆ ಬಾಲಿವುಡ್ ಬೆಡಗಿ, ವಿಶ್ವ ಸುಂದರಿ ಮಾನುಶಿ ಚಿಲ್ಲರ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.

Tap to resize

ಹೌದು ಕಳೆದ ವರ್ಷ ದೇವಸ್ಥಾನ, ರೆಸ್ಟೋರೆಂಟ್ ಸೇರಿದಂತೆ ಹಲವೆಡೆ ಕಾಣಿಸಿಕೊಂಡಿದ್ದ ನಿಖಿಲ್ ಕಾಮತ್ ಹಾಗೂ ಮಾನುಶಿ ಚಿಲ್ಲರ್ ಇದೀಗ ದೂರ ದೂರ ಆಗಿದ್ದಾರೆ. 

ಬ್ಯೂಟಿಫುಲ್ ಬೆಡಗಿ ಮಾನುಶಿ ಚಿಲ್ಲರ್  ಹಾಗೂ ನಿಖಿಲ್ ಕಾಮತ್ 2021ರಿಂದ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋದು ಮೂಲಗಳ ಮಾಹಿತಿ. 2022ರಲ್ಲಿ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿತ್ತು. ರಿಷಿಕೇಶಿಯಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ವಿಚಾರ ಬಹಿರಂಗವಾಗಿತ್ತು.

2019ರಲ್ಲಿ ಅಮುಂಡ ಪುರವಂಕರ ಜೊತೆ ಇಟಲಿಯಲ್ಲಿ ಮದುವೆಯಾಗಿದ್ದ ನಿಖಿಲ್ ಕಾಮತ್ 2021ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.  ಬಳಿಕ ಮಾನುಶಿ ಚಿಲ್ಲರ್ ಜೊತೆ ಡೇಟಿಂಗ್ ಮೂಲಕ ಸುದ್ದಿಯಾಗಿದ್ದರು.

ನಿಖಿಲ್ ಕಾಮತ್ ಹಾಗೂ  ಮಾನುಶಿ ಚಿಲ್ಲರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿತ್ತು. ಆದರೆ ಈ ಸಂಬಂಧ ಗಟ್ಟಿಯಾಗಿ ಬೇರೂರುವ ಮೊದಲೇ ಇದೀಗ ಬ್ರೇಕ್ ಅಪ್ ಆಗಿದೆ

Nikhil kamath

ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಒಂಟಿಯಾಗಿದ್ದ ರಿಯಾ ಚಕ್ರವರ್ತಿ ಇದೀಗ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ  ಅನ್ನೋ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ, ಚಿಲ್ಲರ್ ಜೊತೆಗಿನ ಬ್ರೇಕ್ ಅಪ್ ವಿಚಾರವೂ ಹೊರಬಿದ್ದಿದೆ.

ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ಮಾನುಶಿ ಚಿಲ್ಲರ್ ಅತ್ತ ಬಾಲಿವುಡ್‌ನಲ್ಲೂ ಸಕ್ಸಸ್ ಕಾಣಲಿಲ್ಲ. ಇತ್ತ ವೈಯುಕ್ತಿಕ ಬದುಕಿನಲ್ಲೂ ಯಶಸ್ಸೂ ಸಿಗಲಿಲ್ಲ.

Latest Videos

click me!