ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ನಟಿ ಈಕೆ, ಒಂದು ಐಟಂ ಸಾಂಗ್‌ಗೆ 5 ಕೋಟಿ ರೂ!
First Published | Aug 30, 2023, 6:20 PM ISTವಿಶೇಷ ನೃತ್ಯ ಅಥವಾ ಐಟಂ ಹಾಡುಗಳು, ಐಟಂ ನೃತ್ಯ ಸಿನೆಮಾದ ಒಂದು ಪ್ರಮುಖ ಭಾಗವಾಗಿದೆ. ಐಟಂ ಹಾಡುಗಳು ಯಾವುದೇ ಚಲನಚಿತ್ರದ ಪ್ರಚಾರ ಮತ್ತು ಮಾರುಕಟ್ಟೆ ಪ್ರಚಾರದ ದೊಡ್ಡ ಭಾಗವಾಗಿದೆ. ಈ ಹಾಡಿನ ನೃತ್ಯದಲ್ಲಿ ಹೆಚ್ಚಾಗಿ ಈಗ ದೊಡ್ಡ ಹೆಸರು ಮಾಡಿದ ನಟಿಯರು ತಮ್ಮ ಸೊಂಟ ಬಳಕಿಸುತ್ತಾರೆ. ಇದು ಚಲನಚಿತ್ರಕ್ಕೆ ದೊಡ್ಡ ಆಕರ್ಷಣೆಯಾಗಿ ಬಿಂಬಿಸಲಾಗಿದೆ. ಸ್ವಾಭಾವಿಕವಾಗಿ, ಅವುಗಳಲ್ಲಿ ಕಾಣಿಸಿಕೊಳ್ಳುವ ನೃತ್ಯಗಾರರು, ನಟಿಯರು ಹಾಟ್ ಆಗಿಯೇ ಕಾಣಿಸುತ್ತಾರೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಟಾಪ್ ನಲ್ಲಿದ್ದಾರೆ ದಕ್ಷಿಣ ಭಾರತದ ಈ ನಟಿ. ಇವರು ಒಂದೇ ಹಾಡಿಗೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.