ಮಂದಿರಾ ಬೇಡಿ - ರಾಜ್ ಕೌಶಲ್ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

First Published | Jul 1, 2021, 9:34 AM IST

ಬಾಲಿವುಡ್‌ ನಟಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ಇಂದು ಅಂದರೆ ಜೂನ್‌ 30 ರಂದು ಬೆಳಗ್ಗೆ ನಿಧನರಾದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುಂಜಾನೆ 4.30 ಕ್ಕೆ ಮನೆಯಲ್ಲಿ ಹೃದಯಾಘಾತಕ್ಕೆ ಒಳಾಗದ  ರಾಜ್ ಕೌಶಲ್ ಡಾಕಟ್ರ್‌  ಬಳಿಗೆ ಕರೆದೊಯ್ಯುವ ಮೊದಲೇ  ಜಗತ್ತಿಗೆ ವಿದಾಯ ಹೇಳಿದರು. ಮಂದಿರ ಪತಿ ರಾಜ್ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಪ್ಯಾರ್ ಮೇ ಕಬಿ ಕಭಿ', 'ಶಾದಿ ಕಾ ಲಡ್ಡು' ಮತ್ತು 'ಆಂಥೋನಿ ಕೌನ್ ಹೈ' ಎಂಬ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಮಂದಿರ ಮತ್ತು ರಾಜ್ ಕೌಶಲ್ ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ  ಕಥೆಗಿಂತ ಕಡಿಮೆಯಿಲ್ಲ. ರಾಜ್-ಮಂದಿರಾ ಹೇಗೆ ಪರಸ್ಪರ ಹತ್ತಿರ ಬಂದರು ಮತ್ತು ಕುಟುಂಬ ಸದಸ್ಯರು ಇಬ್ಬರೂ ಮದುವೆಯಾಗಲು ಏಕೆ  ಒಪ್ಪಲಿಲ್ಲ ಇಲ್ಲಿದೆ ವಿವರ.
 

1996 ರಲ್ಲಿ ಮುಕುಲ್ ಆನಂದ್ ಅವರ ಮನೆಯಲ್ಲಿ ಮಂದಿರಾ ಬೇಡಿ ಹಾಗೂ ರಾಜ್ ಕೌಶಲ್ ಮೊದಲ ಬಾರಿಗೆ ಭೇಟಿಯಾದರು.
ಮಂದಿರಾಆಡಿಷನ್ ನೀಡಲು ಅಲ್ಲಿಗೆ ಹೋದಾಗ ರಾಜ್ ಮುಕುಲ್ ಆನಂದ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
Tap to resize

ಮೊದಲ ಬಾರಿಗೆ ಮಂದಿರಾ ರಾಜ್‌ಗೆ ಇಷ್ಟವಾಗಿದ್ದರು. ನಂತರ ಇಬ್ಬರು ಭೇಟಿಯಾಗಲು ಪ್ರಾರಂಭಿಸಿದರು. 'ಮೂರನೇ ಬಾರಿಗೆ ಭೇಟಿಯಾದಾಗ ಈ ಹುಡುಗಿ ನನ್ನ ಜೀವನದ ಒಂದು ಭಾಗವಾಗಬಹುದೆಂದು ನನಗೆ ಬಹಳ ಖಚಿತವಾಗಿತ್ತು 'ಎಂದು ರಾಜ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅವಳು ಸಂವೇದನಾಶೀಲ ಮಹಿಳೆ, ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಹೇಗೆ ನಿರ್ವಹಿಸುವುದು ಎಂದು ಅವಳು ತಿಳಿದಿದ್ದಾಳೆ. ನನ್ನ ಎಲ್ಲಾ ಕಷ್ಟದ ಸಮಯಗಳಲ್ಲಿ ಯಾವಾಗಲೂ ನನ್ನೊಂದಿಗೆ ಇದ್ದಾಳೆ ಎಂದು ಮಂದಿರಾ ಬಗ್ಗೆ ಹೇಳಿದ್ದರು ರಾಜ್‌ ಕೌಶಲ್‌.
ಮಂದಿರಾ ಬೇಡಿ ರಾಜ್ ಕೌಶಲ್ 14 ಫೆಬ್ರವರಿ 1999 ರಂದು ವಿವಾಹವಾದರು. ಆದರೆ, ಈ ಮದುವೆ ಸುಲಭವಾಗಿರಲಿಲ್ಲ. ಮೊದಲು ಕುಟುಂಬದವರು ವಿರೋಧಿಸಿದ್ದರು.
ಮದುವೆಯ 12 ವರ್ಷಗಳ ನಂತರ 19 ಜೂನ್ 2011 ರಂದು ಈ ದಂಪತಿಗಳು ಮಗನನ್ನು ಸ್ವಾಗತಿಸಿದರು. ವೀರ್ ಕೌಶಲ್ ಎಂದು ಹೆಸರಿಟ್ಟಿದ್ದಾರೆ.
ದಂಪತಿಗಳು 2020 ರಲ್ಲಿ ಮಗಳನ್ನು ದತ್ತು ಪಡೆದರು. ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಮಂದಿರಾ ತಾನು ಮಗಳನ್ನು ದತ್ತು ತೆಗೆದುಕೊಂಡು ತಾರಾ ಎಂದು ಹೆಸರಿಸಿದ್ದೇನೆ ಎಂದು ಹೇಳಿದರು.
2003 ರ ವಿಶ್ವಕಪ್ ಸಮಯದಲ್ಲಿ ಮಂದಿರಾ ಬೇಡಿ ಮತ್ತು ಯುವರಾಜ್ ಸಿಂಗ್ ಸಂಬಂಧ ಹೊಂದಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆಇಬ್ಬರೂ ಇದನ್ನು ದೃಢ ಪಡಿಸಿಲ್ಲ.
ರಾಜ್ ಕೌಶಲ್ ಆಂಥೋನಿ ಕೌನ್ ಹೈ, ಶಾದಿ ಕಾ ಲಡ್ಡು, ಪ್ಯಾರ್ ಮೇ ಕಬಿ ಕಭೀ ಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ಬೆಖುದಿ ಸಿನಿಮಾದಸ್ಟಂಟ್ ಡೈರೆಕ್ಟರ್‌ ಆಗಿದ್ದರು.
ಕಿರುತೆರೆಯಿಂದ ಫೇಮಸ್‌ ಆದ ಮಂದಿರಾ ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ, ಬಾದಲ್, ಶಾದಿ ಕಾ ಲಡ್ಡು, ದಸ್ ಕಹಾನಿಯಾ, ಮಿರಾಬಾಯಿ ನಾಟ್, ಟ್, ಒ ತೇರಿ, ಇಟ್ಟೆಫಾಕ್, ವೋಡ್ಕಾ ಡೈರೀಸ್, ದಿ ತಾಷ್ಕೆಂಟ್ ಫೈಲ್ಸ್ ಮತ್ತು ಸಾಹೋ ಚಿತ್ರಗಳಲ್ಲಿ ನಟಿಸಿದ್ದಾರೆ.

Latest Videos

click me!