ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಾರೆ ರಶ್ಮಿಕಾ ಮಂದಣ್ಣ? ನಟಿ ಹೇಳಿದ್ದೇನು ?

First Published | Jul 1, 2021, 9:29 AM IST

ಸ್ಯಾಂಡಲ್‌ವುಡ್‌ನ ಚೆಲುವೆ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಈಗ ಹಿಂದಿ ಸಿನಿಮಾಗಳಲ್ಲೂ ನಿಧಾನವಾಗಿ ನೆಲೆ ಕಾಣುತ್ತಿದ್ದಾರೆ. ನಟಿಯ ಹವಾ ಜೊತೆ ಫ್ಯಾನ್ ಫಾಲೋವರ್ಸ್‌ ಸಹ ಹೆಚ್ಚುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್‌ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದರಲ್ಲಿ ಒಬ್ಬರು ರಶ್ಮಿಕಾಗೆ ದಿನಕ್ಕೆ ಎಷ್ಟು ಬಾರಿ ಸಿಗರೇಟ್‌ ಸೇದುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ನಟಿಯ ಉತ್ತರವೇನು ಗೊತ್ತಾ? ಮುಂದೆ ಓದಿ. 

ರಾಷ್ಟ್ರದಾದ್ಯಂತ ಭಾರೀ ಪ್ಯಾನ್ಸ್‌ ಹೊಂದಿರುವ ರಶ್ಮಿಕಾ ಮಂದಣ್ಣ ಸೋಶಿಯಲ್‌ ಮೀಡಿಯಾ ಮೂಲಕಅವರ ಜೊತೆ ನಿರಂತರವಾಗಿಕನೆಕ್ಟ್‌ ಆಗುತ್ತಿರುತ್ತಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಡೆದ QnA ಸೆಷನ್‌ನಲ್ಲಿ ಫ್ಯಾನ್ಸ್‌ ಜೊತೆ ಮಾತಾನಾಡಿದರು ರಶ್ಮಿಕಾ.
Tap to resize

ಈ ಸೆಷನ್‌ನಲ್ಲಿ ತಮ್ಮ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಸ್ತುತ ಮುಂಬೈನಲ್ಲಿ ಬಾಲಿವುಡ್ 2ನೇ ಪ್ರಾಜೆಕ್ಟ್ ಆಗಿರುವ ಅಮಿತಾಬ್ ಬಚ್ಚನ್ ಜೊತೆ 'ಗುಡ್‌ಬೈ' ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ನಡೆಯುತ್ತಿರುವ ಶೂಟ್ ವೇಳಾಪಟ್ಟಿಗಳ ಬಗ್ಗೆ ಕೆಲವು ವಿಷಯಗಳನ್ನು ಪ್ರೇಕ್ಷಕರಿಗೆ ಬಹಿರಂಗಪಡಿಸಿದರು.
ಎಷ್ಟು ಭಾಷೆಗಳು ತಿಳಿದಿವೆ ಎಂದು ಕೇಳಿದಾಗ ರಶ್ಮಿಕಾ 6 ಎಂದು ಉತ್ತರಿಸಿದರು.
ಅಭಿಮಾನಿಯೊಬ್ಬರು ದಿನದಲ್ಲಿ ಎಷ್ಟು ಬಾರಿ ಧೂಮಪಾನ ಮಾಡುತ್ತಾರೆ ಎಂದು ಕೇಳಿದಾಗ ನಾನು ಸಿಗರೇಟು ಸೇದುವುದಿಲ್ಲ ಮತ್ತು ಸ್ಮೋಕ್‌ ಮಾಡುವವರನನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉತ್ತರಿಸಿದ ಕಿರಿಕ್‌ ಪಾರ್ಟಿ ಬೆಡಗಿ.
ಪುಷ್ಪಾ ಕೋಸ್ಟಾರ್‌ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡುವ ಬಗ್ಗೆ ಅಭಿಮಾನಿಯೊಬ್ಬರು ಕೇಳಿದಾಗ, 'ನಾನು ಅರ್ಜುನ್ ಸರ್ ಅವರೊಂದಿಗೆ ಕೆಲಸ ಮಾಡುವುದನ್ನು ಪ್ರೀತಿಸುತ್ತೇನೆ. ಅವರು ಫನ್‌ ಹಾಗೂ ಪ್ರಫೋಷನಲ್‌. ಅತ್ಯಂತ ಅದ್ಭುತ ನಟ ಮತ್ತು ಅವರು ತುಂಬಾ ಒಳ್ಳೆಯ ಡ್ಯಾನ್ಸರ್‌ ಎಂದು ನಮಗೆಲ್ಲರಿಗೂ ತಿಳಿದಿದೆ.ಹಾಗಾಗಿ ಅಲ್ಲು ಅರ್ಜುನ್ ಸರ್ ಜೊತೆ ಕೆಲಸ ಮಾಡುವುದನ್ನು ನಾನು ನಿಜವಾಗಿಯೂ ಎಂಜಾಯ್‌ ಮಾಡುತ್ತೇನೆ' ಎಂದಿದ್ದಾರೆ.
ಈ ಸೆಷನ್‌ನಲ್ಲಿ ಹಿಂದಿಯಲ್ಲಿ ಕೆಲವು ಸಾಲುಗಳನ್ನು ಸಹ ರಶ್ಮಿಕಾ ಮಾತನಾಡಿದರು.

Latest Videos

click me!