ಬಾಲಿವುಡ್‌ನ ಕರಾಳ ಸತ್ಯ ಬಿಚ್ಚಿಟ್ಟ 80ರ ದಶಕದ ನಟಿ ಮಂದಾಕಿನಿ!

First Published | Sep 15, 2022, 6:11 PM IST

ರಾಜ್ ಕಪೂರ್ ಅವರ 1985 ರ ಚಲನಚಿತ್ರ ರಾಮ್ ತೇರಿ ಗಂಗಾ ಮೈಲಿ ಸಿನಿಮಾದ ಮೂಲಕ ನಟಿ  ಮಂದಾಕಿನಿ (Mandakini) ಬಾಲಿವುಡ್‌ಗೆ ಪ್ರವೇಶ ಮಾಡಿದ್ದರು, ಆದರೆ ಅವರ ನಂತರದ ಚಲನಚಿತ್ರಗಳು ಹೆಚ್ಚು ಪ್ರಭಾವ ಬೀರಲಿಲ್ಲ. ಇತ್ತೀಚಿನ ಚಾಟ್‌ನಲ್ಲಿ, ಅವರು ಆ ಸಮಯದ ಸಿನಿಮಾರಂಗದ (Cine Industry) ಕರಾಳ ಸತ್ಯಗಳನ್ನು  ಮಂದಾಕಿನಿ ಬಿಚ್ಚಿಟ್ಟಿದ್ದಾರೆ.  ನಟಿಯರನ್ನು ಹೇಗೆ ಬದಲಾಯಿಸುತ್ತಿದ್ದರು ಮತ್ತು ಚಲನಚಿತ್ರ ನಿರ್ಮಾಪಕರು ಕಡಿಮೆ ಹಣವನ್ನು ವಿಧಿಸುವ ನಟಿಯನ್ನು ಹುಡುಕುತ್ತಿದ್ದರು ಎಂದು ಹೇಳಿದರು. 

1980ರ ದಶಕದಲ್ಲಿ ಮಹಿಳಾ ನಟರನ್ನು ಹೇಗೆ ಸುಲಭವಾಗಿ ಬದಲಾಯಿಸಲಾಗುತ್ತಿತು ಮತ್ತು ಪುರುಷ ನಟರು  ಪಾತ್ರಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರು ಎಂಬುದರ ಕುರಿತು ಮಂದಾಕಿನಿ ಮಾತನಾಡಿದ್ದರು. ನಟರು ಈ ನಟಿಯರೊಂದಿಗೆ ಕೆಲಸ ಮಾಡಲು ಬಯಸದಿದ್ದರೆ ಮಹಿಳಾ ನಟರನ್ನು ಬದಲಾಯಿಸುತ್ತಿದ್ದರು ಎಂಬುದನ್ನೂ ಮಂದಾಕಿನಿ ಹಂಚಿಕೊಂಡಿದ್ದಾರೆ.

ಪಿಂಕ್ವಿಲ್ಲಾ ಜೊತೆ ಮಾತನಾಡಿದ ಮಂದಾಕಿನಿ, ಆ ದಿನಗಳಲ್ಲಿ ಒಬ್ಬ ಮಹಿಳಾ ಸ್ಟಾರ್‌ಗೆ ಚಲನಚಿತ್ರಕ್ಕೆ ಸುಮಾರು 1-2 ಲಕ್ಷ ರೂ ನೀಡಲಾಗುತ್ತಿತ್ತು. 'ನಾವು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾಗ, ಅವರು ನಮಗೆ ಪೂರ್ಣ ಚಿತ್ರಕ್ಕಾಗಿ 1-1.5 ಲಕ್ಷ ರೂ ನೀಡುತ್ತಿದ್ದರು.  ಗರಿಷ್ಠ 2 ಲಕ್ಷ, ಅದಕ್ಕಿಂತ ಹೆಚ್ಚಿಲ್ಲ. ನಾಯಕಿಯರು ಇದಕ್ಕಿಂತ ಹೆಚ್ಚಿನದನ್ನು ಪಡೆಯುವುತ್ತಿರಲಿಲ್ಲ'ಎಂದಿದ್ದಾರೆ.

Tap to resize

'ನನಗೆ ನಿರೂಪಿಸಿದ ಚಲನಚಿತ್ರವನ್ನು ನಾನು ಇಷ್ಟಪಟ್ಟು ಒಪ್ಪಿಕೊಂಡಿರುತ್ತಿದ್ದೆ. ಆದರೆ  ಕೆಲವು ದಿನಗಳ ನಂತರ, ಬೇರೆ ನಟಿಯೊಂದಿಗೆ ಅದೇ ಸಿನಿಮಾವನ್ನು ಮಾಡಲಾಗುತ್ತಿದೆ ಎಂದು ಒಂದು ಪ್ರಕಟಣೆ ಬರುತ್ತದೆ. ಹಾಗಾದರೆ ಅದು ಹೇಗೆ ಸಾಧ್ಯವೆಂದು ಕೇಳಿದ್ದರೆ, ಗೊತ್ತಾಗುತ್ತಿತ್ತು ಸತ್ಯ ಏನೆಂಬುವುದು. 1-1.5 ಲಕ್ಷ ರೂ. ಕೇಳಿದ್ದಕ್ಕೆ ಸಿಕ್ಕ ಶಿಕ್ಷೆ ಇದು. 75,000 ರೂ.ಗೆ ಮಾಡುವ ಬೇರೆಯವರು ಸಿಕ್ಕಿದ್ದಾರೆ. ಆದ್ದರಿಂದ, ನಿರ್ಮಾಪಕರು ಉತ್ತಮ ವ್ಯವಹಾರವನ್ನು ಪಡೆಯುತ್ತಿರುವ ಕಾರಣ, ಅವರು ಕಡಿಮೆ ಕೇಳುವ ಯಾರಿಗಾದರೂ ಪಾತ್ರ ನೀಡುತ್ತಿದ್ದರು' ಎಂದು ನಟಿ ಹೇಳಿದ್ದಾರೆ.

ಅವರಿಗೆ ನಾಯಕಿರು ಬೇಕಾಗಿತ್ತು. ಅವರಿಗೆ ಕೇವಲ 2-3 ಹಾಡಿಗೆ ಮಾತ್ರ ಅವಳ ಅಗತ್ಯ ಇರುತ್ತಿತ್ತು. ಅವಳು ಮಾಡದಿದ್ದರೆ ಬೇರೆಯವರನ್ನು ಕರೆದುಕೊಂಡು ಬರುತ್ತಿದ್ದರು. ಯಾರು ಕಡಿಮೆ ಶುಲ್ಕ ಕೇಳುತ್ತಾರೋ ಅವರನ್ನೇ ಆರಿಸಿಕೊಳ್ಳಲಾಗುತ್ತಿತ್ತು. ಇದು ನಿರ್ದೇಶಕರು ಮತ್ತು ನಿರ್ಮಾಪಕರ ಮನಸ್ಥಿತಿಯಾಗಿತ್ತು' ಎಂದು ಮಂದಾಕಿನಿ ಹೇಳಿದ್ದಾರೆ. 

80ರ ದಶಕದಲ್ಲಿ ನಟರು ತಮ್ಮ ಎದುರು ಯಾರನ್ನು ನಟಿಸಬೇಕು ಎಂಬುದರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರು. 'ಸಾಮಾನ್ಯವಾಗಿ ಅವರು ಯಾರೊಂದಿಗೆ ಕೆಲಸ ಮಾಡಬೇಕು ಮತ್ತು ಯಾರೊಂದಿಗೆ ಕೆಲಸ ಮಾಡಬಾರದು ಎಂದು ನಿರ್ಧರಿಸುತ್ತಿದ್ದರು. ಅವರು ಇಷ್ಟಪಡದಿದ್ದರೆ, ಅವರು
ತಯಾರಕರಿಗೆ, 'ಈ ಹುಡುಗಿಯನ್ನು ತೆಗೆದುಕೊಳ್ಳಬೇಡಿ' ಎಂದು ಹೇಳುತ್ತಿದ್ದರು' ಎಂದು ಮಂದಾಕಿನಿ ಹೇಳಿದರು. 

ಅವರಿಗೆ ಈ ರೀತಿಯ ಅನುಭವವಾಗಿದ್ದೇಯೆ ಎಂದು ಮಂದಾಕಿನಿ ಅವರಿಗೆ  ಕೇಳಿದಾಗ, 'ಒಂದು ಅಥವಾ ಎರಡು ಬಾರಿ. ಸಂಭವಿಸಿದೆ ಎಂದು ಅವರು ಹೇಳಿದರು. ಮಂದಾಕಿನಿ ಇತ್ತೀಚೆಗೆ 'ಮಾ ಓ ಮಾ' ಎಂಬ ಮ್ಯೂಸಿಕ್ ವಿಡಿಯೋ ಮೂಲಕ ತನ್ನ ಪುನರಾಗಮನವನ್ನು ಮಾಡಿದ್ದಾರೆ. 
 

Latest Videos

click me!