ಮೈಮೇಲೆ ಮುತ್ತು ಧರಿಸಿ ನೋಡುಗರಿಗೆ ಮತ್ತು ಬರಿಸಿದ ಕೃತಿ ಶೆಟ್ಟಿ: ಎಲ್ಲಾ ಓಕೆ ಕೈಯಲ್ಲಿ ಹೂ ಯಾಕೆ ಎಂದ ಫ್ಯಾನ್ಸ್‌

Published : Jun 09, 2024, 11:17 AM IST

ತುಳು ಸುಂದರಿ ಕೃತಿ ಶೆಟ್ಟಿ ಉಪ್ಪೇನ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಅದರ ನಂತರ, ಅವರು ಸತತ ಚಿತ್ರಗಳಲ್ಲಿ ನಟಿಸುವುದರಲ್ಲಿ ನಿರತರಾದರು. ಇದೀಗ ಅವರ ಹೊಸ ಫೋಟೋಶೂಟ್ ವೈರಲ್ ಆಗಿವೆ.

PREV
17
ಮೈಮೇಲೆ ಮುತ್ತು ಧರಿಸಿ ನೋಡುಗರಿಗೆ ಮತ್ತು ಬರಿಸಿದ ಕೃತಿ ಶೆಟ್ಟಿ: ಎಲ್ಲಾ ಓಕೆ ಕೈಯಲ್ಲಿ ಹೂ ಯಾಕೆ ಎಂದ ಫ್ಯಾನ್ಸ್‌

ಯಶಸ್ವಿನ ಅಲೆಯಲ್ಲಿ ತೇಲುತ್ತಿದ್ದ ಕರಾವಳಿ ಬೆಡಗಿ ಕೃತಿ ಶೆಟ್ಟಿ ಇದೀಗ ಸಾಲು ಸಾಲು ಸೋಲುಗಳನ್ನು ಕಂಡು ಗಾಬರಿ ಬಿದ್ದಿದ್ದಾರೆ. ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದವರು, ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ.

27

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಕರ್ಷಕವಾದ ಫೊಟೋಶೂಟ್​ಗಳನ್ನು ಮಾಡುತ್ತಾ, ವಿಡಿಯೋ, ರೀಲ್ಸ್ ಮಾಡುತ್ತಾ ಅದನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಇವು ಸಖತ್ ವೈರಲ್ ಕೂಡಾ ಆಗುತ್ತವೆ. ಈಗ ನಟಿ ಭರ್ಜರಿಯಾಗಿರುವ ಫೋಟೋಸ್ ಶೇರ್ ಮಾಡಿದ್ದಾರೆ.

37

ಸ್ಟೈಲ್‌ ಮತ್ತು ಫ್ಯಾಷನ್‌ ಟ್ರೆಂಡ್‌ಗಳನ್ನು ಪಾಲಿಸುವ ಈ ಬೆಡಗಿ ಒಂದಕ್ಕಿಂತ ಒಂದು ಭಿನ್ನ ಕಾಸ್ಟ್ಯೂಮ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಮಾದಕತೆ ಉಕ್ಕಿಸುವ ಬೋಲ್ಡ್‌ ಫೋಟೋಗಳನ್ನೇ ಕೃತಿ ಶೆಟ್ಟಿ ಶೇರ್‌ ಮಾಡುತ್ತಿರುತ್ತಾರೆ. ಈಗ ಮೈಮೇಲೆ ಮುತ್ತು ಧರಿಸಿ ನೋಡುಗರಿಗೆ ಮತ್ತು ಬರಿಸಿದ್ದಾರೆ.
 

47

ಕೆನೆ ಬಣ್ಣದ ವಿಶೇಷ ವಿನ್ಯಾಸ ಕಾಸ್ಟ್ಯೂಮ್‌ ಧರಿಸಿ ಮೋಡಿ ಮಾಡಿದ್ದಾರೆ ಕೃತಿ ಶೆಟ್ಟಿ.‌ ನಟಿಯ ಈ ಹೊಸ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದೆ. ಜತೆಗೆ ಎಲ್ಲಾ ಓಕೆ ಕೈಯಲ್ಲಿ ಹೂ ಯಾಕೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
 

57

10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರ ‘ಉಪ್ಪೇನ’ ಮತ್ತು ‘ಬಂಗಾರ್‌ರಾಜು’ ಸಿನಿಮಾ ಗೆಲ್ತಿದ್ದಂತೆ ತಮ್ಮ ಸಂಭಾವನೆಯನ್ನ ಏರಿಸಿದ್ದರು. 

67

ಇನ್ನು ಶರ್ವಾನಂದ್ ಅಭಿನಯದ ಮನಮೆ ಚಿತ್ರದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ಶ್ರೀರಾಮ್ ಆದಿತ್ಯ ನಿರ್ದೇಶಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ತಾಯಿ ಪಾತ್ರ ಮಾಡಿದ್ದಾರೆ.

77

ಕೃತಿ ಶೆಟ್ಟಿ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಅವರ ತಂದೆ ಪ್ರಮುಖ ಉದ್ಯಮಿ. ತಾಯಿ ಫ್ಯಾಷನ್ ಡಿಸೈನರ್ ಆಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ಮನೋವಿಜ್ಞಾನದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.

Read more Photos on
click me!

Recommended Stories