ಅಪ್ಪ-ಅಮ್ಮನ ಜೊತೆ ಬುಟ್ಟ ಬೊಮ್ಮ ಬೆಡಗಿ ಪೂಜಾ ಹೆಗ್ಡೆ, ಇವನ ತಮ್ಮ-ಅಮ್ಮ ಏನ್ಮಾಡ್ತಾರೆ?

Published : Jun 08, 2024, 05:59 PM IST

ಬಾಲಿವುಡ್ ಮತ್ತು ತೆಲುಗು ಸಿನಿಮಾದಲ್ಲಿ ಮಿಂಚುತ್ತಿರುವ ಕುಡ್ಲದ ಬೆಡಗಿ, ನೀಳ ಸುಂದರಿ ಪೂಜಾ ಹೆಗ್ಡೆಯವರ ಮುದ್ದಾದ ಫ್ಯಾಮಿಲಿ ಫೋಟೋ ವೈರಲ್ ಆಗುತ್ತಿದೆ. ನೀವೇ ನೋಡಿ ಹೇಗಿದೆ ಈ ಫ್ಯಾಮಿಲಿ.   

PREV
17
ಅಪ್ಪ-ಅಮ್ಮನ ಜೊತೆ ಬುಟ್ಟ ಬೊಮ್ಮ ಬೆಡಗಿ ಪೂಜಾ ಹೆಗ್ಡೆ, ಇವನ ತಮ್ಮ-ಅಮ್ಮ ಏನ್ಮಾಡ್ತಾರೆ?

ತೆಲುಗು ಮತ್ತು ಬಾಲಿವುಡ್ ನಲ್ಲಿ ಮಿಂಚಿದ, ಆದ್ರೆ ಇತ್ತೀಚಿಗೆ ಸಾಲು ಸಾಲು ಫ್ಲಾಪ್ ಚಿತ್ರಗಳಿಂದ ಟಾಪ್ ಹೀರೋಯಿನ್ ಸ್ಥಾನ ಕಳೆದುಕೊಂಡಿರುವ ನಟಿ ಪೂಜಾ ಹೆಗ್ಡೆ (Pooja Hegde). ತಮಿಳಿನ ಮುಗಮೂಡಿ ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ್ದರು. ಇವರಿಗೆ ಹೆಸರು ತಂದುಕೊಟ್ಟದ್ದು, ಹೃತಿಕ್ ರೋಷನ್ ಜೊತೆಗಿನ ಮೊಹೆಂಜೋದಾರೋ ಸಿನಿಮಾ. 
 

27

ಕಳೆದ ಎರಡು ವರ್ಷಗಳಿಂದ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ನಾಲ್ಕು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ರೂ, ಒಂದು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೆ ಮಕಾಡೆ ಮಲಗಿದವು. ಸದ್ಯ ತಮಿಳಿನಲ್ಲಿ ಸೂರ್ಯನ ಹೊಸ ಸಿನಿಮಾಕ್ಕೆ ನಾಯಕಿಯಾಗ್ತಿದ್ದಾರೆ. ಪೂಜಾ ತಮ್ಮ ಸಿನಿಮಾಕ್ಕಿಂತಲೂ ಹೆಚ್ಚು ತಮ್ಮ ಸೋಶಿಯಲ್ ಮೀಡೀಯಾದಿಂದಲೇ (Social Media) ಜನಪ್ರಿಯತೆ ಪಡೆದುಕೊಂಡಿದ್ದಾರೆ. 
 

37

ಸೋಶಿಯಲ್ ಮಿಡೀಯಾದಲ್ಲಿ ಹೆಚ್ಚಾಗಿ ನಟಿ, ತಮ್ಮ ಫ್ಯಾಮಿಲಿ, ಅಮ್ಮ, ಅಪ್ಪ, ಅಜ್ಜಿ, ತಮ್ಮ ಊರಾದ ಮಂಗಳೂರಿನ ಬಗ್ಗೆ ಬರೆಯುತ್ತಲೇ ಇರುತ್ತಾರೆ. ತಮ್ಮ ಮೂಲ ಆಚರಣೆಗಳಲ್ಲಿ ಭಾಗಿಯಾಗುತ್ತಾ, ಅವುಗಳ ಕುರಿತು ಬರೆಯುತ್ತಿರುತ್ತಾರೆ. ಹಾಗಾಗಿಯೇ ಈ ನಟಿ ಜನರಿಗೆ ತುಂಬಾನೆ ಇಷ್ಟ ಆಗೋದು. ಇದೀಗ ಅಪ್ಪ, ಅಮ್ಮ ಹಾಗೂ ಸಹೋದರನ ಜೊತೆಗಿರುವ ಇವರ ಮುದ್ದಾದ ಫ್ಯಾಮಿಲಿ ಫೋಟೋ ವೈರಲ್ ಆಗಿದೆ. 
 

47

ಪೂಜಾ ಹೆಗ್ಡೆ ಮೂಲತಃ ಉಡುಪಿಯವರು, ನೆಲೆಸಿರೋದು ಮುಂಬೈನಲ್ಲಿ. ಇವರ ತಂದೆ ಮಂಜುನಾಥ್ ಹೆಗ್ಡೆ (Manjunath Hegde), ಕ್ರಿಮಿನಲ್ ಲಾಯರ್ ಹಾಗೂ ತಾಯಿ ಇಮ್ಯೂನೋಲಾಜಿಸ್ಟ್ ಹಾಗೂ ಉದ್ಯಮಿಯೂ ಆಗಿದ್ದಾರೆ. ಇವರಿಗೊಬ್ಬ ಹಿರಿಯ ಸಹೋದರ ಕೂಡ ಇದ್ದಾರೆ, ಅವರ ಹೆಸರು ರಿಷಭ್ ಹೆಗ್ಡೆ, ಇವರು ಆರ್ಥೋಪೀಡಿಕ್ ಸರ್ಜನ್ ಆಗಿದ್ದಾರೆ. 
 

57

ಲಕ್ಷ್ಮೀ ಪೂಜೆಯ ದಿನ ಹುಟ್ಟಿರೋದರಿಂದ ಪೂಜಾ ಹೆಗ್ಡೆಯವರಿಗೆ ಅವರ ಪೋಷಕರು ಪೂಜಾ ಅಂತ ಹೆಸರಿಟ್ಟರಂತೆ. ತಮ್ಮ ಮೂಲ ಸ್ಥಾನವಾದ ಉಡುಪಿ ಬಗ್ಗೆ ಪೂಜಾ ಹೆಗ್ಡೆ ಇನ್ನಿಲ್ಲದ ಮಮತೆ. ಬಾಲ್ಯದಿಂದಲೂ ಇವರು ಹೆಚ್ಚಾಗಿ ತಮ್ಮ ಬೇಸಿಗೆ ರಜೆ ಕಳೆಯುತ್ತಿದ್ದದ್ದೇ ಉಡುಪಿಯ ಕಣಜಾರ್ ನಲ್ಲಿ. ಇವತ್ತಿಗೂ ನಟಿ ಬಿಡುವು ಇದ್ದಾಗಲೆಲ್ಲಾ, ಉಡುಪಿಗೆ ಬರುತ್ತಿರುತ್ತಾರೆ, ಅಲ್ಲದೇ ಕುಟುಂಬದ ವಿವಿಧ ಸಮಾರಂಭಗಳಲ್ಲಿ ಭಾಗಿಯಾಗಿ, ಕುಡ್ಲದ ಹುಡುಗಿಯಾಗಿ ಎಂಜಾಯ್ ಮಾಡ್ತಾರೆ. 

67

ಇದು ಪೂಜಾ ಹೆಗ್ಡೆಯವರ ಸಹೋದರನಾದ ರಿಷಭ್ (Rishabh Hegde) ಅವರ ಮದುವೆ ಫೋಟೋ. ಇವರ ಮದುವೆ ಕಳೆದ ವರ್ಷದ ಆರಂಭದಲ್ಲಿ ರಿಷಭ್ ವಿವಾಹ ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈ ಸಂದರ್ಭದಲ್ಲಿ ಪೂಜಾ ಕೇಸರಿ ಬಣ್ಣದ ಸೀರೆಯುಟ್ಟು, ಮಂಗಳೂರು ಮಲ್ಲಿಗೆ ಮುಡಿದು ಮಿಂಚಿದ್ದರು. ಈ ಮದುವೆಗೆ ಸಲ್ಮಾನ್ ಖಾನ್ ಕೂಡ ಹಾಜರಾಗಿದ್ದರು. 
 

77

ಇನ್ನು ಪೂಜಾ ಹೆಚ್ಚಾಗಿ ತಮ್ಮ ಅಜ್ಜಿಯೊಂದಿಗಿನ ಫೋಟೋ ಶೇರ್ ಮಾಡುತ್ತಿರುತ್ತಾರೆ. ಈ ಅಜ್ಜಿ-ಮೊಮ್ಮಗಳ ಬಾಂಧವ್ಯ ತುಂಬಾ ಸ್ಟ್ರಾಂಗ್ ಆಗಿದೆ. ಪೂಜಾ ಸ್ಟ್ರಾಂಗ್ ಆಗಿ ಬೆಳೆಯೋದಕ್ಕೆ ಅಜ್ಜಿಯೇ ಕಾರಣ ಅಂತೆ. ಅಜ್ಜಿ ಜೊತೆಗೆ ಸೆಲ್ಫಿ, ಡ್ಯಾನ್ಸ್, ಅಡುಗೆ, ಮಾತುಕತೆ, ತಮಾಷೆ ಮಾಡೋ ಫೋಟೋಗಳನ್ನು ಸಹ ನಟಿ ಹಂಚಿಕೊಳ್ಳುತ್ತಿರುತ್ತಾರೆ. ಹೇಗಿದೆ ಪೂಜಾ ಹೆಗ್ಡೆ ಮುದ್ದಾದ ಫ್ಯಾಮಿಲಿ ಚೆನ್ನಾಗಿದೆ ಅಲ್ವಾ? 
 

Read more Photos on
click me!

Recommended Stories