ಬುಧವಾರ ನವದೆಹಲಿಯಲ್ಲಿ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ 2022 ರಲ್ಲಿ ((Indian Couture Week) ಮಲೈಕಾ ಅರೋರಾ (Malaika Arora) ರ‍್ಯಾಂಪ್ ವಾಕ್ ಮಾಡುತ್ತಿರುವುದು ಕಂಡುಬಂದಿದೆ.ಕಪ್ಪು ಬಣ್ಣದ ಲೋ ಕಟ್ ಮತ್ತು ಥೈಯ್ ಹೈ ಸ್ಲಿಟ್ ಗೌನ್ ಧರಿಸಿದ್ದರು ಮತ್ತು ಅದರಲ್ಲಿ ಅವರು ಅದ್ಭುತವಾಗಿ ಕಾಣುತ್ತಿದ್ದರು. ಆದರೆ, ಎಂದಿನಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತೊಮ್ಮೆ ಅವರನ್ನು ಟ್ರೋಲ್ ಮಾಡಿದ್ದಾರೆ. ಫ್ಯಾಷನ್ ವೀಕ್‌ನ ಮಲೈಕಾ ಅವರ ಫೋಟೋಗಳನ್ನು ನೋಡಿ ಜನರು ಹೇಗೆ ಕಾಮೆಂಟ್ ಮಾಡುತ್ತಿದ್ದಾರೆ ಎಂಬುದು ಇಲ್ಲಿದೆ..
ಈವೆಂಟ್‌ನ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಜನರು ಮಲೈಕಾ ಅವರನ್ನು ಗೇಲಿ ಮಾಡುತ್ತಿದ್ದಾರೆ. ಉದಾಹರಣೆಗೆ, ಒಬ್ಬ ಬಳಕೆದಾರನು "ದಯವಿಟ್ಟು ಅವಳಿಗೆ ಕೆಲವು ಒಳ್ಳೆಯ ಬಟ್ಟೆಗಳನ್ನು ನೀಡಿ' ಎಂದು ಬರೆದಿದ್ದಾರೆ.
28
'ದೇಹವನ್ನು ಹೇಗೆ ತೋರಿಸಬೇಕೆಂದು ತಿಳಿಯಿದೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 'ಅವಳ ಮಗ 18 ವರ್ಷಕ್ಕಿಂತ ದೊಡ್ಡವನಾಗಿದ್ದಾನೆ, ಎಂಥಾ ನಾಚಿ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ಮುದುಕಿ ಹುಚ್ಚು ಹಿಡಿದಿದೆ' ಎಂದೂ ಕಾಮೆಂಟ್ ಮಾಡಿದ್ದಾರೆ.
38
ಒಬ್ಬರು ಮಲೈಕಾ ಅವರನ್ನು ಬಾಲಿವುಡ್‌ನ ಜೆನ್ನಿಫರ್ ಲೋಪೆಜ್ ಎಂದೂ ಹೇಳಿದ್ದಾರೆ. ಅದೇ ಸಮಯದಲ್ಲಿ ಕೆಲವು ಸೋಶಿಯಲ್ ಮೀಡಿಯಾ ಯೂಸರ್ಸ್ ಮಲೈಕಾರ ಈ ಲುಕ್‌ಗೆ ಫಿದಾ ಆಗಿದ್ದು ಸ್ಟನ್ನಿಂಗ್, ಹಾಟ್ ಎಂದು ಮೆಚ್ಚಿಗೆ ಸೂಚಿಸಿದ್ದಾರೆ
48
48 ವರ್ಷದ ಮಲೈಕಾ ಅರೋರಾ. ಡಿಸೈನರ್ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ ಅವರ ಶೋಸ್ಟಾಪರ್ ಆಗಿ ರ‍್ಯಾಂಪ್ ಮೇಲೆ ಕಾಣಿಸಿಕೊಂಡರು ಮತ್ತು ಈ ಜೋಡಿ ಡಿಸೈನ್ ಮಾಡಿದ ಕಪ್ಪು ಬಣ್ಣದ ಲೋ ಕಟ್ ಮತ್ತು ಥೈಯ್ ಹೈ ಸ್ಲಿಟ್ ಗೌನ್ ಧರಿಸಿದ್ದ ಮಲೈಕಾ ರೆಟ್ರೊ ಹೇರ್‌ಸ್ಟೈಲ್‌ನೊಂದಿಗೆ ಲುಕ್ ಅನ್ನು ಪೂರ್ಣಗೊಳಿಸಿದರು.
58
ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಲ್ಲಿ FDCI ಇಂಡಿಯಾ ಕೌಚರ್ ವೀಕ್ ನಡೆಯಲಿಲ್ಲ. ಇದೀಗ ಮತ್ತೆ ಚಾಲನೆಯಾಗಿದ್ದು ಫ್ಯಾಷನ್ ಡಿಸೈನರ್ ಗಳ ಜತೆಗೆ ಅವರ ಮಾಡೆಲ್ ಗಳಲ್ಲೂ ಉತ್ಸಾಹ ಮೂಡಿದೆ.
68
ಇತ್ತೀಚೆಗೆ ಮಲೈಕಾ ಅರೋರಾ ಮುಂಬೈನಲ್ಲಿ ರುಸ್ಸೋ ಬ್ರದರ್ಸ್ ನಿರ್ದೇಶಕ ಜೋಡಿ 'ದಿ ಗ್ರೇ ಮ್ಯಾನ್'ಗಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಆಕೆಯ ಗೆಳೆಯ ಅರ್ಜುನ್ ಕಪೂರ್ ಕೂಡ ಜೊತೆಗಿದ್ದರು.
78
Malaika Arora, Arjun Kapoor
ಪಾರ್ಟಿಯ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ವಿಶೇಷ ಸಂದರ್ಭಕ್ಕಾಗಿ ಅರ್ಜುನ್ ವೈಲೆಟ್ ಶರ್ಟ್ ಧರಿಸಿದ್ದರೆ, ಮಲೈಕಾ ನೇರಳೆ ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.
88
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಕಳೆದ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ 2019 ರಲ್ಲಿ ತಮ್ಮ ಸಂಬಂಧದ ಮೇಲೆ ಅಧಿಕೃತ ಮುದ್ರೆ ಹಾಕಿದರು.ಮಲೈಕಾ ಮತ್ತು ಅರ್ಜುನ್ ಅವರ ಮದುವೆಯ ಬಗ್ಗೆ ಊಹಾಪೋಹಗಳು ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಇವರು ಇನ್ನೂ ಏನೂ ಹೇಳಿಲ್ಲ.