₹48 ಸಾವಿರ ರೂ ಬೊರ್ಡೆಕ್ಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಮಲೈಕಾ, ಈ ಉಡುಗೆಯಲ್ಲಿದೆ ಬ್ಯೂಟಿ ಸೀಕ್ರೆಟ್

Published : Feb 02, 2025, 07:23 PM IST

ಮಲೈಕಾ ಅರೋರಾ ವಯಸ್ಸು 51. ಆದರೆ ಈ ನಟಿ ನೋಡಿದರೆ 21 ದಾಟಿಲ್ಲ ಅನ್ಸುತ್ತೆ. ಇದೀಗ ಬೋರ್ಡೆಕ್ಸ್ ಡ್ರೆಸ್‌ನಲ್ಲಿ ಮಲೈಕಾ ಅರೋರ ಕಾಣಿಸಿಕೊಂಡಿದ್ದಾರೆ. ಈಡ್ರೆಸ್ ಮಲೈಕಾ ಬ್ಯೂಟಿ ಡಬಲ್ ಮಾಡಿದೆ. ಈ ಡ್ರೆಸ್ ಬೆಲೆ 48,000 ರೂ. ಇಷ್ಟೇ ಅಲ್ಲ ಇದರಲ್ಲಿ ಕೆಲ ವಿಶೇಷತೆ ಇದೆ.  

PREV
16
₹48 ಸಾವಿರ ರೂ ಬೊರ್ಡೆಕ್ಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಮಲೈಕಾ, ಈ ಉಡುಗೆಯಲ್ಲಿದೆ ಬ್ಯೂಟಿ ಸೀಕ್ರೆಟ್

ಭಾರತದ ಹಲವು ಚಿತ್ರರಂಗದಲ್ಲಿ ವಯಸ್ಸು 50 ದಾಟಿದರೂ ಈಗಲೂ ಅದೇ ಯೌವ್ವನದಲ್ಲಿ ಕಾಣಿಸಿಕೊಳ್ಳುತ್ತಿರುವ ಹಲವು ನಟಿಯರಿದ್ದಾರೆ. ಬಳುಕುವ ಬಳ್ಳಿಯಂತೆ ಈಗಲೂ ಅದೇ ಬ್ಯೂಟಿ ಉಳಿಸಿಕೊಂಡಿದ್ದಾರೆ. ಈ ಪೈಕಿ ಮಲೈಕಾ ಅರೋರಾ ಮುಂಚೂಣಿಯಲ್ಲಿದ್ದಾರೆ. ಮಲೈಕಾ ಆರೋರ ಫಿಟ್ನೆಸ್, ಫ್ಯಾಶನ್ ಭಾರಿ ಟ್ರೆಂಡ್ ಆಗುತ್ತಿದೆ. ಇದೀಗ ಹೊಸ ಲುಕ್‌ನಲ್ಲಿ ಮಲೈಕಾ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದಾರೆ.
 

26

ಮಲೈಕಾ ಆರೋರ ಬ್ಯೂಟಿ ಡಬಲ್ ಆಗಿದೆ. ಇದಕ್ಕೆ ಕಾರಣ ಮಲೈಕಾ ಈ ಬಾರಿ ಬೋರ್ಡೆಕ್ಸ್ ಲೆಥರ್ ಡ್ರೆಸ್ ಧರಿಸಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಹೇರ್‌ಸ್ಟೈಲ್, ಜ್ಯೂವೆಲ್ಲರಿ ಧರಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ  ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ವಾವ್. 
 

36

ಮಲೈಕಾ ಅರೋರಾ ಧರಿಸಿದ ಈ ಬೋರ್ಡೆಕ್ಸ್ ಲೆಥರ್ ಡ್ರೆಸ್ ಬೆಲೆ ಬರೋಬ್ಬರಿ 48,000 ರೂಪಾಯಿ. ವಿಶೇಷ ಅಂದರೆ ನಾಪಾ ಲೆಥರ್‌ನಿಂದ ರಚಿಸಿರುವ ಆಂಟಿಥೆಸಿಸ್‌ ಬೋರ್ಡೆಕ್ಸ್ ಡ್ರೆಸ್ ಇದಾಗಿದೆ. ವಿಶೇಷ ಅಂದರೆ ಈ ಡ್ರೆಸ್‌ನಲ್ಲೇ ಬ್ಯೂಟಿ ಸೀಕ್ರೆಟ್ ಇದೆ.  ಈ ಡ್ರೆಸ್ ಧರಿಸಿದವರ ಅಂದ ಮತ್ತಷ್ಟು ಹೆಚ್ಚಾಗಲಿದೆ. ಈ ಡ್ರೆಸ್ ಲಕ್ಷುರಿಯಸ್, ಪ್ರೀಮಿಯಂ ಅಪೀಲ್ ನೀಡಲಿದೆ.
 

46

ಈ ಪೈಕಿ ಮಲೈಕಾ ಬಾಡಿಕಾನ್ ಫಿಟ್ ಹಾಗೂ ಜಿಯೋಗ್ರಾಫಿಕಲ್ ಪ್ಯಾಟರ್ನ್ ಸ್ಟೈಲ್ ಹೊಸತನ ಜೊತೆಗೆ ನಟಿಯ ಫಿಟ್ನೆಸ್ ಹಾಗೂ ಸೌಂದರ್ಯವನ್ನು ಎತ್ತಿ ಹಿಡಿದಿದೆ. ನೆಕ್‌ಲೈನ್ ಜೊತೆಗೆ ಡ್ರಾಪ್ ಶೋಲ್ಡರ್ ಶೈಲಿಯಲ್ಲಿನ ಈ ಉಡುಪು ಮಲೈಕಾ ಅರೋರ ಅಂದಕ್ಕೆ ಒಪ್ಪುವಂತಿದೆ.
 

56

ಮಲೈಕ ಅರೋರಾ ಫ್ಯಾಶನ್ ಹಲವರ ಕಣ್ಣು ಕುಕ್ಕುತ್ತಿದೆ. ಕಾರಣ ಒಪ್ಪುವಂತ ಉಡುಗೆ, ಅದಕ್ಕೆ ತಕ್ಕ ಆಭರಣ, ಹೇರ್ ಸ್ಟೈಲ್ ಸೇರಿದಂತೆ ಎಲ್ಲವೂ ಮ್ಯಾಚಿಂಗ್ ಆಗಿರುತ್ತದೆ. ಈ ಬಾರಿಯೂ ವೈಟ್ ಫೆದರ್ ಇಯರಿಂಗ್ಸ್, ವಿಸ್ಪಿ ಲ್ಯಾಶಸ್, ಬ್ರೌನ್ ಲಿಪ್ಸ್‌ಸ್ಟಿಕ್, ಸ್ಮೋಕಿ ಹಾಗೂ ಸಾಫ್ಟ್ ಐಯ್ಸ್ , ಹೇರ್ ಸ್ಟ್ರೈಟ್ ಕಾಸ್ಕೇಡಿಂಗ್ ಸೇರಿದಂತೆ ಹಲವು ವಿಶೇಷತೆಗಳಿವೆ.
 

66

ಮಲೈಕಾ ತಮ್ಮ ಡ್ರೆಸ್ ಹಾಗೂ ಬ್ಯೂಟಿಯಿಂದಲೇ ಹೆಚ್ಚು ಗಮನಸೆಳೆಯುತ್ತಾರೆ. ಜಿಮ್ ವರ್ಕೌಟ್ ವೇಳೆ ಧರಿಸುವ ಡ್ರೆಸ್‌ನಿಂದ ಹಿಡಿದು ಪಾರ್ಟಿ, ಫ್ಯಾಶನ್ ವೀಕ್‌ಗಳಲ್ಲಿ ಕಾಣಿಸಿಕೊಳ್ಳುವ ಡ್ರೆಸ್ ವರೆಗೆ ಮಲೈಕೆ ಸೌಂದರ್ಯ ಜಗತ್ತಿನಲ್ಲಿ ಚರ್ಚೆಯಾಗುತ್ತಲೇ ಇರುತ್ತಾರೆ. ಹಲವು ಭಾರಿ ಮೇಕ್ಅಪ್ ಇಲ್ಲದೆಯೂ ಮಲೈಕಾ ಅರೋರಾ ಕಾಣಿಸಿಕೊಂಡಿದ್ದಾರೆ.
 

Read more Photos on
click me!

Recommended Stories