ತೆಲುಗು ಚಿತ್ರರಂಗದ ಮತ್ತು ಕಿರುತೆರೆ ಆ್ಯಂಕರ್ ಆಗಿ ಹೆಸರು ಮಾಡಿದ್ದ ಅನಸೂಯ ಈಗ ಪೂರ್ಣ ಪ್ರಮಾಣದ ನಟಿ. ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಆದರೆ, ಇದೀಗ ಚಿತ್ರರಂಗದಲ್ಲಿ ನಡೆದ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕ್ಷಣಂ, ರಂಗಸ್ಥಳಂ, ಪುಷ್ಪ ಸಿನಿಮಾಗಳು ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಪುಷ್ಪ 2 ಅವರ ಕೊನೆಯ ಸಿನಿಮಾ.