ಹಾಲಿವುಡ್ ನಟ ಡ್ವೇನ್ ಜಾನ್ಸನ್ ಅವರು ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ತೆರೆದಿಟ್ಟಿದ್ದಾರೆ. ಅವರು ಇನ್ನೂ ಅಧ್ಯಕ್ಷರಾಗಿ ಏಕೆ ಸ್ಪರ್ಧಿಸಿಲ್ಲ ಎಂಬುದನ್ನು ನಟ ರಿವೀಲ್ ಮಾಡಿದ್ದಾರೆ.
ಜಾನ್ಸನ್ ಅಧ್ಯಕ್ಷನಾಗಲು ಸರಿಯಾದ ವ್ಯಕ್ತಿ ಎಂದು ಭಾವಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಅವರು ರಾಷ್ಟ್ರವನ್ನು ನಡೆಸಲು ಏಕೆ ಸೂಕ್ತವಲ್ಲ ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಮೀಕ್ಷೆಯು 46% ಅಮೆರಿಕನ್ನರು ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಬೆಂಬಲಿಸುತ್ತಾರೆ ಎಂದು ತೋರಿಸಿದೆ ಎಂದು ದಿ ರಾಕ್ ಬರೆದಿದ್ದಾರೆ. ಆದರೆ ನಿಜಕ್ಕೂ ನನಗೆ ರಾಜಕೀಯದ ಬಗ್ಗೆ ಮೊದಲ ವಿಚಾರಗಳೇ ನನಗೆ ತಿಳಿದಿಲ್ಲ ಎಂದಿದ್ದಾರೆ ನಟ.
ನಾನು ನಮ್ಮ ದೇಶದ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತೇನೆ. ಕೆಂಪು ರಕ್ತ ಸ್ರವಿಸುವ ಪ್ರತಿಯೊಬ್ಬ ಅಮೇರಿಕನ್ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಇಲ್ಲಿ ಯಾವುದೇ ಭ್ರಮೆ ಇಲ್ಲ ಎಂದಿದ್ದಾರೆ. ನಾಯಕತ್ವದ ಗುಣಗಳನ್ನು ಹೊಂದಿದ್ದರೂ, ತಾನು ಶ್ರೇಷ್ಠ ಅಧ್ಯಕ್ಷೀಯ ಅಭ್ಯರ್ಥಿ ಅಲ್ಲ ಎಂದು ಹೇಳಿದ್ದಾರೆ.
ಜಂಗಲ್ ಕ್ರೂಸ್ ನಟ ತನ್ನ ಅಭಿಮಾನಿಗಳೊಂದಿಗೆ ಕೆಲವು ಮೌಲ್ಯಗಳನ್ನು ಹಂಚಿಕೊಂಡಿದ್ದಾರೆ. ನಟನ ಪ್ರಕಾರ ಅದನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.
ಕಷ್ಟಪಟ್ಟು ಕೆಲಸ ಮಾಡಿ, ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ, ಜನರೊಂದಿಗೆ ದಯೆಯಿಂದ ವರ್ತಿಸಿ, ನಿಮ್ಮ ಬಗ್ಗೆ ಹೆಮ್ಮೆ ಪಡಿ, ಎಲ್ಲರನ್ನೂ ಒಳಗೊಂಡಂತೆ ಗೌರವದಿಂದಿರಿ ಎಂದು ಅವರು ಬರೆದಿದ್ದಾರೆ.