
ವಯಸ್ಸು 51 ಆದರೂ ಇನ್ನೂ ಚಿನಕುರುಳಿಯಂತೆ ಇದ್ದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ಹಾಟ್ ಲೇಡಿ ಎನ್ನಿಸಿಕೊಂಡಿದ್ದಾರೆ. ಡಿವೋರ್ಸ್ ಆಗಿ, ಈಗ ಬ್ರೇಕಪ್ ಆದ್ಮೇಲೂ ಈ ವಯಸ್ಸಿನಲ್ಲಿಯೂ ಇನ್ನೊಂದು ಹುಡುಕಾಟದಲ್ಲಿ ಇದ್ದೇನೆ ಎಂದು ಖುಲ್ಲಂ ಖುಲ್ಲಾ ಆಗಿಯೇ ಹೇಳಿಕೊಳ್ಳುತ್ತಾರೆ. ಅವರ ವೈಯಕ್ತಿಯ ಲೈಫ್ ಏನೇ ಇದ್ದರೂ ಫಿಟ್‌ನೆಸ್‌ಗೆ ಇನ್ನೊಂದು ಹೆಸರೇ ಮಲೈಕಾ ಅರೋರಾ.
ಮಲೈಕಾ ಅರೋರಾ ತನ್ನ ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದಾರೆ ಮತ್ತು ವಯಸ್ಸಾದರೂ ತನ್ನ ದೈಹಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವಳು ಯೋಗ, ಪೈಲೇಟ್ಸ್, ಮತ್ತು ಇತರ ವ್ಯಾಯಾಮಗಳ ಮೂಲಕ ತನ್ನ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳುತ್ತಾರೆ. ಮಲೈಕಾ ಅರೋರಾ ನಿಯಮಿತವಾಗಿ ಯೋಗ ಮತ್ತು ಪೈಲೇಟ್ಸ್ ವ್ಯಾಯಾಮಗಳನ್ನು ಮಾಡುತ್ತಾರೆ.
ಫಿಟ್ ಆಗಿರಲು ಸಮತೋಲಿತ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುತ್ತಾರೆ. ಮಲೈಕಾ ಕೇವಲ ವ್ಯಾಯಾಮವಲ್ಲದೆ, ಸಕ್ರಿಯ ಜೀವನಶೈಲಿಯನ್ನು ಪಾಲಿಸುತ್ತಾರೆ. ತನ್ನ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ ವಹಿಸುತ್ತಾರೆ, ಇದು ಅವರ ಒಟ್ಟಾರೆ ಫಿಟ್‌ನೆಸ್‌ನ ಭಾಗವಾಗಿದೆ.
ವಯಸ್ಸಾದರೂ ಒಂದಿನಿತೂ ಮುಕ್ಕಾಗದ ಸೌಂದರ್ಯ ಹೊಂದಿರುವುದು ಸುಲಭವೇನೂ ಅಲ್ಲ. ಅದಕ್ಕೆ ಒಂದಿಷ್ಟು ತಪಸ್ಸಿನಂತಹ ನಿರಂತರ ಆರೈಕೆ ಮತ್ತು ಮಾನಸಿಕ ಆರೋಗ್ಯವೂ ಬೇಕಾಗುತ್ತದೆ. ಅದನ್ನು ಕಾಯ್ದುಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಕೆಲವರಿಗೆ ದೈಹಿಕ ಸೌಂದರ್ಯ ಆನುವಂಶೀಯವಾಗಿಯೇ ಬಂದಿರುತ್ತದೆ. ಏನೇ ಮಾಡಿದರೂ ತೂಕ ಹೆಚ್ಚಳವಾಗದ ಪ್ರಕೃತಿ ಹೊಂದಿರುತ್ತಾರೆ.
ಆದರೂ, ಫಿಟ್ ನೆಸ್ ಕಾಯ್ದುಕೊಳ್ಳಲು, ತ್ವಚೆಯ ಚರ್ಮ ಆರೋಗ್ಯಕರವಾಗಿ ಇರಿಸಿಕೊಳ್ಳಲು ಮಾತ್ರ ಅವರು ಶ್ರಮ ವಹಿಸಲೇಬೇಕಾಗುತ್ತದೆ. ಹಾಗೆಯೇ ಮಲೈಕಾ ಕೂಡ ಇಷ್ಟು ವಯಸ್ಸಾಗಿದ್ದರೂ ತಮ್ಮ ಫಿಟ್ ನೆಸ್ ಹಾಗೂ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಂಡು ಬರುತ್ತಿರುವುದು ಸಾಕಷ್ಟು ಜನರಿಗೆ ಸ್ಫೂರ್ತಿದಾಯಕ.
ಇದೀಗ ಮಲೈಕಾ ಅವರು ಪ್ರತಿದಿನ ತಾವು ಹೇಗೆ ಆರಂಭಿಸುತ್ತೇವೆ ಎನ್ನುವ ಬಗ್ಗೆ ರಿವೀಲ್ ಮಾಡಿದ್ದಾರೆ. ಜೀರಿಗೆ, ಅಜ್ವೈನ್ (ಓಂಕಾಳು) ಮತ್ತು ಸೋಂಪಿನ ಕಾಳು ಈ ಮೂರನ್ನೂ ನೆನೆಸಿ ಇಡುತ್ತೇನೆ. ಅದಕ್ಕೂ ಮುನ್ನ ಸ್ವಲ್ಪ ಡ್ರೈರೋಸ್ಟ್ ಮಾಡುತ್ತೇನೆ. ನೀರಿನಲ್ಲಿ ರಾತ್ರಿಪೂರ್ತಿ ನೆನೆಸಿ ಇಡುತ್ತೇನೆ. ಅದನ್ನು ಮಾರನೆಯ ದಿನ ಸೋಸಿ, ಸ್ವಲ್ಪ ಉಗುರು ಬೆಚ್ಚಗೆ ಮಾಡಿ ನಿಂಬು ನೀರು ಹಾಕಿ ಕುಡಿಯುತ್ತೇನೆ ಎಂದಿದ್ದಾರೆ.
ಈ ಹಿಂದೆ ಅವರು ಕೆಲವೊಮ್ಮೆ ಈ ರೀತಿ ಮಾಡುವುದಾಗಿಯೂ ಹೇಳಿದ್ದರು. ಬೆಳಗ್ಗೆ ಬಿಸಿನೀರು (Warm Water), ಲಿಂಬೆರಸ (Lemon) ಹಾಗೂ ಜೇನುತುಪ್ಪವನ್ನು (Honey) ಬೆರೆಸಿ ಸೇವಿಸುವುದೊಂದಿಗೆ ದಿನಚರಿ ಆರಂಭಿಸುತ್ತೇನೆ ಎಂದಿದ್ದರು. ಇದು ಎಂದಿನಿಂದಲೂ ಬಳಕೆಯಲ್ಲಿರುವ ಪದ್ಧತಿಯಾಗಿದ್ದು, ನಮ್ಮ ದೇಹದಿಂದ ವಿಷಕಾರಿ (Toxic) ಅಂಶವನ್ನು ಹೊರದೂಡಲು ಸಹಕಾರಿಯಾಗಿದೆ. ಹಾಗೂ ದೀರ್ಘಾವಧಿಯಲ್ಲಿ ನಮ್ಮ ತೂಕವನ್ನು (Weight) ನಿಯಂತ್ರಿಸಲು ಕಾರಣವಾಗುತ್ತದೆʼ ಎಂದಿದ್ದರು.
ಇದರ ಜೊತೆಗೆ ನಟಿ, ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಇಷ್ಟಪಡುವವರಿಗೆ ಅವರು ಹೇಳುವ ಕಿವಿಮಾತು ಎಂದರೆ, ಬದ್ಧತೆಯಿಂದ (Commitment) ಇರಿ ಎಂದು.
ತೂಕ ಇಳಿಸಿಕೊಳ್ಳುವುದು ಏಕಾಏಕಿ ಸಾಧ್ಯವಾಗುವುದಿಲ್ಲ. ಅದಕ್ಕೆ ನಿರಂತರ ಬದ್ಧತೆ ಹಾಗೂ ಶ್ರಮ ಎರಡೂ ಅಗತ್ಯ. ಗುರಿ ಕೇಂದ್ರೀಕೃತವಾಗಿದ್ದು, ಸತತವಾಗಿ ಪ್ರಯತ್ನಿಸಬೇಕು. ಹಾಗಾದರೆ ಮಾತ್ರ ನಿಮ್ಮ ಗುರಿ ತಲುಪಬಹುದು ಎಂದು ಹೊಸಬರಿಗೆ ಹೇಳುತ್ತಾರೆ.